Don't Miss!
- News
ಶಕ್ತಿ ಇರುವ ಪತಿಗೆ ಜೀವನಾಂಶ ನೀಡಿದರೆ ಸೋಂಬೇರಿತನಕ್ಕೆ ಕಾರಣವಾಗುತ್ತದೆ
- Technology
ರೆಡ್ಮಿ ಮೊಬೈಲ್ ಖರೀದಿಸುವ ಗ್ರಾಹಕರೇ, ಅವಸರ ಬೇಡಾ!..ಇಲ್ಲಿ ಗಮನಿಸಿ!
- Sports
SA 20: ಎಸ್ಎ 20 ಲೀಗ್ನ ಮೊದಲ ಶತಕ ಗಳಿಸಿದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್
- Lifestyle
Horoscope Today 25 Jan 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಈ ವರ್ಷವೇ ಖರೀದಿಗೆ ಸಿಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳು
- Finance
Union Budget 2023: ತೆರಿಗೆದಾರರಿಗೆ ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರವಿಮಾಮನೊಂದಿಗೆ ರಚಿತಾ ರಾಮ್ ಮಸ್ತ್ ಡ್ಯಾನ್ಸ್, ನೋಡುಗರು ಫಿದಾ!
ಡ್ರಾಮ ಜೂನಿಯರ್ಸ್ ಎಪಿಸೋಡ್ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ. ಕಾರ್ಯಕ್ರಮದಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಎಲಿಮೆಂಟ್‌ಗಳು ಬರುತ್ತಲೇ ಇರುತ್ತೆ. ಅಂತೆಯೇ ಈ ವಾರ ರವಿಚಂದ್ರನ್ ಮತ್ತು ರಚಿತಾ ರಾಮ್ ಡ್ಯಾನ್ಸ್ ಎಲ್ಲರನ್ನೂ ಪ್ರೇಮಲೋಕಕ್ಕೆ ಕರೆದೊಯ್ಯಲಿದೆ. ಈಗಾಗಲೇ ಇದರ ಪ್ರೋಮೊ ರಿಲೀಸ್ ಆಗಿದ್ದು ಕಾರ್ಯಕ್ರಮ ವೀಕ್ಷಣೆ ಮಾಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಸದ್ಯ ಈ ಪ್ರೋಮೊ ವೈರಲ್ ಆಗುತ್ತಿದ್ದು, ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಹಾಗಿದ್ರೆ ಈ ವಾರದ ಕಾರ್ಯಕ್ರಮದ ವಿಶೇಷತೆ ಏನೇನು ಅನ್ನೋದನ್ನು ಮುಂದೆ ಓದಿ
Chaithra
Rai
:
ತೆರೆ
ಮರೆಗೆ
ಸರಿದಿದ್ದು
ಯಾಕೆ
ಕಿರುತೆರೆ
ಜನಪ್ರಿಯ
ನಟಿ
ಚೈತ್ರಾ
ರೈ!

ಮಕ್ಕಳ ಅಭಿನಯಕ್ಕೆ ಫ್ಯಾನ್ಸ್ ಫುಲ್ ಫಿದಾ
ಕನ್ನಡ ಕಿರುತೆರೆಯಲ್ಲಿ ಭಾರೀ ಜನಪ್ರಿಯತೆ ಪಡೆದಿರುವ 'ಡ್ರಾಮಾ ಜೂನಿಯರ್ಸ್ ಸೀಸನ್ 4' ಶೋಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಪ್ರತಿ ಸೀಸನ್‌ನಲ್ಲಿಯೂ ಈ ಕಾರ್ಯಕ್ರಮ ಜನಪ್ರಿಯವಾಗುತ್ತಿದೆ. ನಮ್ಮ ನೆಲದ ಕಥೆಗಳಿಗೆ ನಾಟಕದ ರೂಪ ನೀಡಿ ಜೀವ ತುಂಬುತ್ತಿದ್ದು ಜೀ ಕನ್ನಡದ ಸದಭಿರುಚಿಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಕನ್ನಡ ಕಿರುತೆರೆಯಲ್ಲಿ ಭಾರೀ ಜನಪ್ರಿಯತೆ ಪಡೆದಿರುವ 'ಡ್ರಾಮಾ ಜೂನಿಯರ್ಸ್ ಸೀಸನ್ 4' ಶೋಗೆ ಅದ್ದೂರಿ ಚಾಲನೆ ಸಿಕ್ಕಿದೆ. ಪ್ರತಿ ಸೀಸನ್‌ನಲ್ಲಿಯೂ ಈ ಕಾರ್ಯಕ್ರಮ ಜನಪ್ರಿಯವಾಗುತ್ತಿದೆ. ನಮ್ಮ ನೆಲದ ಕಥೆಗಳಿಗೆ ನಾಟಕದ ರೂಪ ನೀಡಿ ಜೀವ ತುಂಬುತ್ತಿದ್ದು ಜೀ ಕನ್ನಡದ ಸದಭಿರುಚಿಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ಡ್ರಾಮಾ ಜ್ಯೂನಿಯರ್ಸ್ ಸ್ಟೇಜ್‌ನಲ್ಲಿ ಸಖತ್ ಸ್ಟೆಪ್
15 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಆಡಿಷನ್ಸ್‌ನಲ್ಲಿ ಭಾಗವಹಿಸಿದ್ದು, ಈ ಕಾರ್ಯಕ್ರಮದ ಮಹತ್ವ ಮತ್ತು ಜನಪ್ರಿಯತೆಗೆ ಸಾಕ್ಷಿಯಾಗಿದೆ. ಹೂವ ರೋಜಾ "ಹೂವ, ಹೂವ ನನ್ನ ಜೀವ" ಎಂದು ಡ್ರಾಮಾ ಜ್ಯೂನಿಯರ್ಸ್ ಸ್ಟೇಜ್‌ನಲ್ಲಿ ಸಖತ್ ಸ್ಟೆಪ್ ಹಾಕಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ರಚಿತಾ ರಾಮ್ ಮಾಡಿದ ಡಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿರೋದಂತು ಗ್ಯಾರಂಟಿ. ಯಾರೇ ಬರಲಿ ಯಾರೇ ಇರಲಿ ರವಿ ಸರ್ ರೇಂಜ್‌ಗೆ ಯಾರೂ ಇಲ್ಲ. ವಯಸ್ಸಾದರೂ ಯುವಕರ ಹಾಗೆ ಕ್ರೇಜ್ ಚೂರು ಕಡಿಮೆ ಆಗದೆ ಇರೋದು ಜನರಿಗೆ ಇನ್ನೂ ಖುಷಿ ನೀಡಿದೆ.

ರವಿ ಮಾಮನ ಮನಸ್ಸನ್ನು ಗೆಲ್ಲುತ್ತಿರುವ ಮಕ್ಕಳು
ರವಿಚಂದ್ರನ್ ಮಕ್ಕಳೊಡನೆ ಬೆರೆತು ಹೋಗಿದ್ದರು. ಮಕ್ಕಳ ಆಕ್ಟಿಂಗ್‌ಗೆ ಫಿದಾ ಆಗಿದ್ದ ಇವರು ಮಕ್ಕಳೊಂದಿಗೆ ಮಕ್ಕಳಾಗಿದ್ದಾರೆ. ಇನ್ನೂ ಕನ್ನಡ ಚಿತ್ರರಂಗದ ಹಿರಿಯ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಅವರು ಇದೀಗ ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಈ ಹಿಂದೆ ಡಾನ್ಸಿಂಗ್ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿದ್ದರು. ಇದೀಗ ರವಿಚಂದ್ರನ್ 'ಡ್ರಾಮಾ ಜ್ಯೂನಿಯರ್ಸ್' ಸೀಸನ್-೪ ತೀರ್ಪುಗಾರರಾಗಿದ್ದಾರೆ. ರವಿಚಂದ್ರನ್ ಮಕ್ಕಳ ಅಭಿನಯಕ್ಕೆ ಮಾರು ಹೋಗಿದ್ದಾರೆ. ಮಕ್ಕಳ ಕ್ಯೂಟ್ ಅಭಿನಯದ ಮೂಲಕ ರವಿಮಾಮನ ಮನಸ್ಸನ್ನು ಗೆಲ್ಲುತ್ತಿದ್ದಾರೆ.

ಮಕ್ಕಳೊಂದಿಗೆ ರಚಿತಾ ರಾಮ್ ಮೋಡಿ
ಇದೀಗ ಬರುವ ಹೊಸ ಸಂಚಿಕೆಯಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಹೂವ ಹೂವ ಹಾಡಿಗೆ ಸಖತ್ ಆಗಿ ಡಾನ್ಸ್ ಮಾಡಿ ನೋಡುಗರ ಗಮನ ಸೆಳೆದಿದ್ದಾರೆ . ಇನ್ನೂ ಇಷ್ಟು ಒಳ್ಳೆ ಡಾನ್ಸ್ ಮಾಡುವ ಇವರನ್ನು ಒಟ್ಟಿಗೆ ಬೆಳ್ಳಿ ತೆರೆಯಲ್ಲಿ ನೋಡಿದ್ರೆ ಹೇಗೆ ಎನ್ನುವ ಕಾತರದಲ್ಲಿದ್ದಾರೆ ಅಭಿಮಾನಿಗಳು.ಕ್ರೇಜಿ ಸ್ಟಾರ್ ಅಭಿನಯಕ್ಕೆ ಹೂವು ಕೂಡ ನಾಚಿಕೊಳ್ಳುತ್ತದೆ. ಅಂತದ್ರಲ್ಲಿ ನಮ್ಮ ರಚಿತಾ ರಾಮ್ ನಾಚಿಕೊಳ್ಳದೆ ಇದ್ದರೆ ಹೇಗೆ ಅಲ್ವಾ? ಅಭಿನಯ ಅಷ್ಟೇ ಅಲ್ಲ ಡಾನ್ಸ್ ಮಾಡೋದ್ರಲ್ಲೂ ರಚಿತಾ ಯಾರೂ ಸರಿಸಾಟಿ ಇಲ್ಲ. ಹಾಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಕ್ಕೆ ಜನ ಫುಲ್ ಮಾರ್ಕ್ಸ್ ನೀಡಿದ್ದಾರೆ. ಇನ್ನೂ ಇವರಿಬ್ಬರ ಜೋಡಿ ನೋಡಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.
ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ನಟಿ
ಜೀ ಕನ್ನಡ ವಾಹಿನಿಯು ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೆಯೇ ರಚಿತಾ ರಾಮ್ ಒಟ್ಟಾಗಿ ಡಾನ್ಸ್ ಮಾಡೋದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇವರಿಬ್ಬರ ಡಾನ್ಸ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇವರಿಬ್ಬರ ಡಾನ್ಸ್ ನೋಡಲು ಕರ್ನಾಟಕದ ಜನತೆ ಕೂಡ ಕಾಯುತ್ತಿದೆ. ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ಮುಂದಿನ ವಾರ ವೀಕ್ಷಕರಿಗೆ ರಸದೂಟವನ್ನು ಬಡಿಸಲು ಸಜ್ಜಾಗಿದ್ದಾರೆ.