»   » 'ಗಣರಾಜ್ಯೋತ್ಸವ'ಕ್ಕೆ ದುನಿಯಾ ವಿಜಯ್ 'ಕನಕ'ನ ಕಾಣಿಕೆ

'ಗಣರಾಜ್ಯೋತ್ಸವ'ಕ್ಕೆ ದುನಿಯಾ ವಿಜಯ್ 'ಕನಕ'ನ ಕಾಣಿಕೆ

Posted By:
Subscribe to Filmibeat Kannada

ಆಟೋ ಡ್ರೈವರ್ ಆಗಿ... ಅಣ್ಣಾವ್ರ ಅಪ್ಪಟ ಅಭಿಮಾನಿ ಆಗಿ... 'ಬ್ಲ್ಯಾಕ್ ಕೋಬ್ರಾ' ದುನಿಯಾ ವಿಜಯ್ ಅಭಿನಯಿಸುತ್ತಿರುವ ಸಿನಿಮಾ 'ಕನಕ'. ಟೀಸರ್ ಹಾಗೂ ಟ್ರೇಲರ್ ಮಾತ್ರದಿಂದಲೇ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ 'ಕನಕ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಸದ್ಯ ಸೆನ್ಸಾರ್ ಅಂಗಳದಲ್ಲಿ ಇರುವ 'ಕನಕ' ಸಿನಿಮಾ, ಆದಷ್ಟು ಬೇಗ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡರೆ ಗಣರಾಜ್ಯೋತ್ಸವದ ಪ್ರಯುಕ್ತ ಅಂದ್ರೆ ಜನವರಿ 26 ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ.

Duniya Vijay starrer Kanaka to release on January 26th

ಆಕ್ಷನ್ ಸಿನಿಮಾಗಳಿಗೆ ಹೆಚ್ಚು ಒತ್ತು ನೀಡುತ್ತಾ ಬಂದಿರುವ ದುನಿಯಾ ವಿಜಯ್ 'ಕನಕ'ನಾಗಿ ಹೆಂಗಳೆಯರಿಗೂ ಇಷ್ಟ ಆಗುತ್ತಾರೆ ಅಂತಾರೆ ನಿರ್ದೇಶಕ ಆರ್.ಚಂದ್ರು. ಆಕ್ಷನ್ ಜೊತೆಗೆ ಸೆಂಟಿಮೆಂಟ್, ಕಾಮಿಡಿ... ಎಲ್ಲವೂ ಮಿಕ್ಸ್ ಆಗಿರುವ 'ಕನಕ' ಚಿತ್ರದಲ್ಲಿ ದುನಿಯಾ ವಿಜಯ್ ಜೊತೆಗೆ ಮಾನ್ವಿತಾ ಹರೀಶ್ ಹಾಗೂ ಹರಿಪ್ರಿಯಾ ನಾಯಕಿಯರಾಗಿ ಅಭಿನಯಿಸಿದ್ದಾರೆ.

ಅಣ್ಣಾವ್ರ ಅಭಿಮಾನಿ 'ಕನಕ'ನಿಗೆ ಹೆಚ್ಚಾಯ್ತು ಡಿಮ್ಯಾಂಡ್

ಡಾ.ರಾಜ್ ಕುಮಾರ್ ಅವರ ಆದರ್ಶಗಳನ್ನು ಇಟ್ಟುಕೊಂಡು ರೆಡಿ ಮಾಡಿರುವ 'ಕನಕ'ನನ್ನ ನೋಡಲು ಅಣ್ಣಾವ್ರ ಅಭಿಮಾನಿಗಳು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ 'ಕನಕ' ಸಿನಿಮಾ ಜನವರಿ 26 ರಂದು ನಿಮ್ಮ ಮುಂದೆ ಬರಲಿದೆ.

English summary
Kannada Actor Duniya Vijay starrer R Chandru directorial 'Kanaka' to release on January 26th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X