»   » ದ್ವಾರಕೀಶ್ ಅವರ ವೃತ್ತಿಬದುಕಿನ ಮತ್ತೊಂದು ಸೀಕ್ರೆಟ್

ದ್ವಾರಕೀಶ್ ಅವರ ವೃತ್ತಿಬದುಕಿನ ಮತ್ತೊಂದು ಸೀಕ್ರೆಟ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಹುಲಿವೇಷಕ್ಕೆ ಹೆಜ್ಜೆಹಾಕಿದರು. ತಮಟೆ ಹೊಡೆದುಕೊಂಡು ಹಾಡಿದ್ದನ್ನು ಭಾರ್ಗವ ನೆನಪಿಸಿದರು. ಇವನಿಗೆ ಮೈಯಲ್ಲಿ ರಕ್ತ ಓಡುತ್ತಿರಲಿಲ್ಲ ಸಿನಿಮಾ ಸಿನಿಮಾ ಓಡ್ತಿತ್ತು ಎಂದು ಭಾರ್ಗವ ಅವರು ಹೇಳಿದರು. ನಾನೊಬ್ಬ ಗುಡ್ ಸ್ಟುಡೆಂಟ್ ಎಂದು ಹೇಳಿಕೊಳ್ಳಲ್ಲ ಓಕೆ ಎಂಬಂತಿದ್ದೆ. ರಿಸಲ್ಟ್ ನೋಡಲು ಹೋದಾಗ ಮೊದಲೆ ಭರ್ಜರಿ ಊಟ ಮಾಡಿಕೊಂಡು ಹೋಗಿದ್ದೆ. ಯಾಕೆಂದರೆ ಮುಂದೆ ರಿಸಲ್ಟ್ ಏನು ಎಂಬುದು ಗೊತ್ತಿರಲಿಲ್ಲ. ಒಂದು ವೇಳೆ ಫೇಲ್ ಆದರೆ ಮನೆಯಲ್ಲಿ ಯಾರೂ ಊಟ ಹಾಕಲ್ಲ ಎಂದು ಭರ್ಜರಿಯಾಗಿ ತಿಂದುಕೊಂಡು ಹೋಗುತ್ತಿದ್ದೆ ಎಂದು ಹೇಳಿ ವೀಕ್ಷಕರನ್ನು ನಕ್ಕು ನಲಿಸಿದರು.

  ಕಾಲೇಜಿಗೆ ನಾನೊಬ್ಬನೇ ಸ್ಕೂಟರ್ ನಲ್ಲಿ ಹೋಗುತ್ತಿದ್ದದ್ದು. ಆಗ ಜಾವಾ 50 ಸಿಸಿ ಎಂಬ ಸ್ಕೂಟರ್ ಇತ್ತು ಅದರಲ್ಲಿ ಹೋಗುತ್ತಿದ್ದೆ. ನನಗೆ ಪರ್ಸನಾಲಿಟಿ ಇಲ್ಲ, ಮೂಗು ಸೊಟ್ಟ, ಬಣ್ಣ ಇಲ್ಲ ಹೀಗೆ ಎಲ್ಲವೂ ಮೈನಸ್. ಈ ಮೈನಸ್ ಗಳನ್ನೆಲ್ಲಾ ಸೇರಿಸಿ ನಾನು ಹೀರೋ ಆದೆ. ಕುಳ್ಳ ಏಜೆಂಟ್ 000 ಎಂದು ತಮ್ಮ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.

  ಸಿಪಿಸಿ ಪಾಲಿಟೆಕ್ನಿಕ್ ನಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಓದಿರುವ ಅವರು. ಅಲ್ಲಿನ ಮಾಸ್ಟರ್ ಗೆ ಒಳ್ಳೆ ಪಾರ್ಟ್ ಕೊಡ್ತೀನಿ ಎಂದು ಹೇಳಿ ಮಾರ್ಕ್ಸ್ ಹಾಕಿಸಿಕೊಂಡಿದ್ದನ್ನು ನೆನಪಿಸಿಕೊಂಡು ಕಾಲೇಜು ದಿನಗಳಿಗೆ ಹೊರಳಿದರು.

  Dwarakish carrer onemore secret Weekend with Ramesh

  ನಮ್ಮಣ್ಣ ಬಹಳ ಖರ್ಚು ಮಾಡಿ ಒಂದು ಅಂಗಡಿ ಓಪನ್ ಮಾಡಿದ್ದರು. ಸಿನಿಮಾ ಬೇಡ ಅಂಗಡಿ ನೋಡಿಕೋ ಎಂದು ಹೇಳಿದ್ದರು. ಆದರೆ ಐ ನೆವರ್ ಕೇರ್ ಡ್ ಎಂದು ಹೇಳುವಾಗ ಅವರ ಕಣ್ಣಂಚಲಿ ಒಂದೆರೆಡು ಹನಿ ನೀರು ಜಿನುಗಿದವು. ಬದುಕಿದರೆ ಸಿನಿಮಾದಲ್ಲೇ ಬದುಕುತ್ತೀನಿ ಎಂದು ಬಂದುಬಿಟ್ಟೆ. ನನ್ನನ್ನು ನಂಬಿ ಅವನು ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅಂಗಡಿ ಓಪನ್ ಮಾಡಿದ್ದ.

  ಆಗ ಅವರು ಸಿನಿಮಾ ಬೇಕಾ ಇಲ್ಲ ಬಿಜಿನೆಸ್ ಬೇಕಾ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿದರು. ನಾನು ಸಿನಿಮಾ ಆಯ್ಕೆ ಮಾಡಿಕೊಂಡೆ ಎಂದು ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳನ್ನು ತೆರೆದಿಟ್ಟರು. ಹಿರಿಯ ನಿರ್ದೇಶಕ ಶಿವಶಂಕರ್ ಅವರು ನಾಟದಲ್ಲಿ ಚಾನ್ಸ್ ಕೊಟ್ಟದ್ದು. ಅಷ್ಟೊತ್ತಿಗೆ 'ವೀರ ಸಂಕಲ್ಪ' ಚಿತ್ರ ಶುರುವಾಗಿತ್ತು. ನಮ್ಮ ಮಾವನಿಂದ ನನಗೆ ಚಾನ್ಸ್ ಸಿಕ್ತು ಎಂದರು.

  ನಾನು ಸಿನಿಮಾಗೆ ಹೋಗಬೇಕು ಅಲ್ಲಿ ಸಾಧನೆ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಫಸ್ಟ್ ಟೈಮ್ ಬಟ್ಟೆಗಾಗಿ ಅಳತೆ ತೆಗೆದುಕೊಂಡದ್ದು. ಅದು ರಾಜನ ಪಾತ್ರ, ಕಿರೀಟ ಎಲ್ಲವನ್ನೂ ತೆಗೆದುಕೊಂಡ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಅದೊಂದು ಥ್ರಿಲ್ಲಿಂಗ್ ಎಕ್ಸ್ ಪೀರಿಯನ್ಸ್ ಎಂದರು.

  ಹೀರೋಗೆ ಎಷ್ಟು ಬೆಲೆನೋ ಹೀರೋಯಿನ್ ಗಳಿಗೆ ಎಷ್ಟು ಬೆಲೇನೋ ಅದಕ್ಕಿಂತಲೂ ಹೆಚ್ಚು ಬೆಲೆ ಕಾಮಿಡಿಯನ್ ಗಳಿಗಿದೆ. ಒಬ್ಬ ಕಾಮಿಡಿಯಿನ್ ಇಲ್ಲದೆ ಸಿನಿಮಾ ಮಾಡುವುದು ಕಷ್ಟ. ಆಗ ನಾವೆಲ್ಲಾ ಹೀರೋಗಳಿಗೆ ಸಮನಾಗಿಯೇ ಬಂದೆವು ಎಂದು ಹೇಳಿದರು.

  ತಮ್ಮ ಆತ್ಮೀಯ ಕಲಾತಪಸ್ವಿ ರಾಜೇಶ್ ಅವರು ದ್ವಾರಕೀಶ್ ಬಗ್ಗೆ ಮಾತನಾಡುತ್ತಾ, ಧೈರ್ಯೇ ಸಾಹಸಿ ಲಕ್ಷ್ಮಿ ಎಂದು ಸಂಸ್ಕೃತದಲ್ಲಿ ಹೇಳಿದ್ದಾರೆ. ಯಾರು ಧೈರ್ಯ ಸಾಹಸ ಮಾಡುತ್ತಾರೋ ಅಂತಹವರನ್ನು ಲಕ್ಷ್ಮಿ ಕೈಹಿಡಿಯುತ್ತಾಳೆ. ನಮ್ಮ ದ್ವಾರಕೀಶ್ ಸಹ ಅಷ್ಟೇ ಎಷ್ಟೋ ಸಾಹಸಗಳನ್ನು ಮಾಡಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಮೇಲೆ ಬಂದವರು. ಅವನ ಆರೋಗ್ಯ ಕೈಕೊಡ್ತು ಆಗಲೂ ಅವನು ಧೃತಿಗೆಡಲಿಲ್ಲ ಎಂದರು.

  ಫಸ್ಟ್ ಇಯರ್ ಬಿಎಸ್ಸಿ ಓದುತ್ತಿದ್ದೆ, ಮೊದಲು ಅವರೇ ನನ್ನನ್ನು ಪ್ರಪೋಸ್ ಮಾಡಿದ್ದು ಐ ಲೈಕ್ ಯು ಎಂದು ಹೇಳಿದರು. ಅವರಿಗಿಂತಲೂ ನಾನು ಏಳು ತಿಂಗಳು ದೊಡ್ಡವಳು ಎಂದು ಅಂಬುಜಾ ಅವರು ತಮ್ಮ ಪ್ರೇಮಕಥೆಯನ್ನು ತೆರೆದಿಟ್ಟರು. ಮೊದಲೆಲ್ಲಾ ದ್ವಾರ್ಕಿ ಎಂದೇ ಕರೆಯುತ್ತಿದ್ದ. ಮದುವೆಯಾದ ಬಹಳ ದಿನಕ್ಕೆ ಅವರನ್ನು ರೀ ಎಂದು ಬಹುವಚನದಲ್ಲಿ ಕರೆದೆ ಎಂದು ತಮ್ಮ ಪ್ರೇಮಕಥೆಯನ್ನು ಬಿಚ್ಚಿಟ್ಟರು.

  ದೇವರು ಎಲ್ಲರ ಜೀವನದಲ್ಲಿ ಅತ್ಯದ್ಭುತ ಸ್ಕ್ರೀನ್ ಪ್ಲೇ ಬರೆಯುತ್ತಾನೆ ಅದರಂತೆ ಜೀವನ ನಡೆಯುತ್ತದೆ. ನಾನು ಡಿಪ್ಲೊಮೋ ಇನ್ ಎಂಜಿನಿಯರಿಂಗ್ ಆದರೆ ಅಂಜುಜಾ ಎಂಎಸ್ಸಿ ಮಾಡಿದ್ದಾರೆ. ಅವಳು ಡಬಲ್ ಗ್ರಾಡ್ಯುಯೇಟ್ ಎಂದರು. [ತನ್ನ ಎರಡನೇ ಮದುವೆ ಬಗ್ಗೆ ಹೇಳಿಕೊಂಡ ದ್ವಾರಕೀಶ್]

  English summary
  Veteran actor, director and producer Dwarakish shares his golden moments in Weekend with Ramesh chat show airs on Zee Kannada. Dwarakish college days, cinema career, his love, marriage, second marrige all episodes are brought out on the programme.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more