For Quick Alerts
  ALLOW NOTIFICATIONS  
  For Daily Alerts

  ಅತಿಶೀಘ್ರದಲ್ಲೇ ಈಟಿವಿ ಕನ್ನಡ ನ್ಯೂಸ್ ಚಾನಲ್ ಆರಂಭ

  By Rajendra
  |

  ಅತಿ ಶೀಘ್ರದಲ್ಲೇ ಮತ್ತೊಂದು ಇಪ್ಪತ್ತನಾಲ್ಕು ಗಂಟೆಗಳ ಸುದ್ದಿ ವಾಹಿನಿಯೊಂದು ಕನ್ನಡ ನಾಡಿನ ಜನತೆಯ ಮುಂದೆ ಬರಲು ಸಿದ್ಧವಾಗುತ್ತಿದೆ. ಹದಿನಾರನೇ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸುದ್ದಿ ವಾಹಿನಿಗಳ ನಡುವೆ ಪೈಪೋಟಿಯೂ ತೀವ್ರವಾಗುತ್ತಿದೆ.

  ಈಗಾಗಲೆ ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಆದಂತಹ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಮನೆಮಾತಿರುವ ವಾಹಿನಿ ಈಟಿವಿ ಕನ್ನಡ. ಇದೀಗ ಇಪ್ಪತ್ತನಾಲ್ಕು ಗಂಟೆಗಳ ಸುದ್ದಿ ವಾಹಿನಿಯನ್ನು ಪ್ರಾರಂಭಿಸಲು ಸಜ್ಜಾಗುತ್ತಿದೆ. ಈಗಾಗಲೆ ನೇಮಕಾತಿ ಪ್ರಕ್ರಿಯೆಯೂ ಸದ್ದಿಲ್ಲದಂತೆ ನಡೆಯುತ್ತಿದೆ. [ಫೇಸ್ ಬುಕ್ ನಲ್ಲಿ ಯಾವ ಚಾನಲ್ ಎಷ್ಟು ಫೇಮಸ್?]

  ಭಾರತೀಯ ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಅವರ ಒಡೆತನದಲ್ಲಿದ್ದ ಈಟಿವಿ ನೆಟ್ ವರ್ಕ್ ಇದೀಗ ನೆಟ್ ವರ್ಕ್ 18 ಪಾಲಾಗಿರುವುದು ಗೊತ್ತೇ ಇದೆ. ಈಟಿವಿ ನೆಟ್ ವರ್ಕ್ ನಲ್ಲಿ ಸುದ್ದಿ ಹಾಗೂ ಮನರಂಜನಾ ವಾಹಿನಿ ಸೇರಿದಂತೆ ಒಟ್ಟು 12 ಪ್ರಾದೇಶಿಕ ಚಾನಲ್ ಗಳಿವೆ.

  ಇದೀಗ 24 ಗಂಟೆಗಳ ಈಟಿವಿ ಕನ್ನಡ ನ್ಯೂಸ್ ವಾಹಿನಿಯನ್ನು ಆರಂಭಿಸುತ್ತಿದೆ. ಇದಕ್ಕಾಗಿ ಈಗಾಗಲೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು ಕಾಪಿ ಎಡಿಟರ್ಸ್, ಆಂಕರ್ಸ್, ರಿಪೋರ್ಟರ್ಸ್, ಸ್ಟ್ರಿಂಜರ್ಸ್ ಬೇಕಾಗಿದ್ದಾರೆ ಎಂಬ ಪ್ರಕಟಣೆಯೂ ಹೊರಬಿದ್ದಿದೆ. ಈ ಹಿಂದಿನ ಅನುಭವ ಹಾಗೂ ವಿದ್ಯಾರ್ಹತೆ ಆಧಾರದ ಮೇಲೆ ಸಂಬಳ ನಿಗದಿಯಾಗಲಿದೆ.

  ಈಗಾಗಲೆ ಕನ್ನಡದಲ್ಲಿ ಎಂಟು ನ್ಯೂಸ್ ಚಾನಲ್ಸ್ ಇವೆ. ಟಿವಿ9 ಕರ್ನಾಟಕ, ಪಬ್ಲಿಕ್ ಟಿವಿ, ಸುವರ್ಣ ನ್ಯೂಸ್, ಸಮಯ ಟಿವಿ, ಜನಶ್ರೀ, ಕಸ್ತೂರಿ ನ್ಯೂಜ್, ಹಾಗೂ ಉದಯ ನ್ಯೂಸ್. ಈಗ ಈಟಿವಿ ಕನ್ನಡ ನ್ಯೂಸ್ ವಾಹಿನಿ ಹೊಸ ಸೇರ್ಪಡೆ ಎನ್ನಬಹುದು. (ಒನ್ಇಂಡಿಯಾ ಕನ್ನಡ)

  English summary
  One more 24/7 news channel 'Etv Kannada news' all set to launch in Karnataka. Now the channel starts recruiting process. Copy Editors, Anchors, reporters, stringers requires. Salary will be considered depending on experience and qualification.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X