»   » 'ಡಾನ್ಸಿಂಗ್ ಸ್ಟಾರ್ 2' ಹೊಸ ಖದರ್ ನಲ್ಲಿ ಕುಣಿಯೋ ಆಟ

'ಡಾನ್ಸಿಂಗ್ ಸ್ಟಾರ್ 2' ಹೊಸ ಖದರ್ ನಲ್ಲಿ ಕುಣಿಯೋ ಆಟ

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ಅತ್ಯಂತ ಯಶಸ್ವಿ ಶೋ ಡಾನ್ಸಿಂಗ್ ಸ್ಟಾರ್ ಹೊಸ ಖದರ್ ನಲ್ಲಿ ಮತ್ತೆ ಮೂಡಿಬರುತ್ತಿದೆ. ಇದೇ ಫೆಬ್ರವರಿ 7ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ 'ಡಾನ್ಸಿಂಗ್ ಸ್ಟಾರ್ 2' ಪ್ರಸಾರವಾಗಲಿದೆ.

ಈ ಹೊಸ ಆವೃತ್ತಿಯಲ್ಲಿ ಚಿತ್ರನಟರಾದ ಅನಿರುದ್ಧ್, ಚಂದ್ರಿಕಾ, ಮೈತ್ರಿಯಾ ಗೌಡ, ಹರ್ಷಿಕಾ ಪೂಣಚ್ಚ, ಮಾಸ್ಟರ್ ಆನಂದ್, ಗಾಯಕಿ ಸಿಂಚನ್ ದೀಕ್ಷಿತ್, ಕಿರುತೆರೆ ತಾರೆಯರಾದ ರಜನಿ, ಮಾ.ಆಶ್ವಿಕ್, 'ಅಗ್ನಿಸಾಕ್ಷಿ'ಯ ವಿಜಯಸೂರ್ಯ ಹಾಗೂ ಸುಕೃತಾ ನಾಗ್ ಇರುತ್ತಾರೆ. [ಸಮಸ್ತ ಕುಟುಂಬಕ್ಕೆ ಸಮೃದ್ಧ ನಗು 'ಮಜಾ ಟಾಕೀಸ್']

ಜೊತೆಗೆ 'ಯಶೋದೆ'ಯ ಕಾರ್ತಿಕ್ ಇವರ ಡಾನ್ಸ್ ಜಿದ್ದಾಜಿದ್ದಿ ಹಲವು ಹಂತಗಳಲ್ಲಿ ನಡೆಯಲಿದೆ. ಪ್ರತಿ ಸ್ಪರ್ಧಿಗೂ ಒಬ್ಬ ಡಾನ್ಸ್ ಪಾರ್ಟನರ್ ನಿಯೋಜಿಸಲಾಗುತ್ತಿದೆ. ಇವರು ನುರಿತ ನೃತ್ಯಪಟು ಆಗಿರುತ್ತಾರೆ.

Etv Kannada Dancing Star 2 from 7th February

ಡಾನ್ಸಿಂಗ್ ಸ್ಟಾರ್ ನ ಇನ್ನೊಂದು ವಿಶೇಷ ಕ್ರೆಜಿಸ್ಟಾರ್ ವಿ ರವಿಚಂದ್ರನ್, ಖ್ಯಾತ ನಟಿ ಪ್ರಿಯಾಮಣಿ ಹಾಗೂ ಅಂತಾರಾಷ್ಟ್ರೀಯ ನೃತ್ಯಪಟು ಮಯೂರಿ (ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರ ಪತ್ನಿ) ನಿರ್ಣಾಯಕರು. ಕನಸುಗಾರ ರವಿಚಂದ್ರನ್ ಅವರು ನೃತ್ಯ ಸ್ಪರ್ಧೆಯೊಂದರ ನಿರ್ಣಾಯಕರಾಗಿ ಭಾಗವಹಿಸುತ್ತಿರುವುದು ಇದೇ ಮೊದಲು.

ಬಲುಬೇಡಿಕೆಯ ತಾರೆ ಪ್ರಿಯಾಮಣಿ ಕೂಡ ಕನ್ನಡದಲ್ಲಿ ಮೊದಲ ಸಲ ನಿರ್ಣಾಯಕಿಯಾಗುತ್ತಿದ್ದಾರೆ. ಕಥಕ್, ಭರತನಾಟ್ಯ ಮತ್ತು ಒಡಿಸ್ಸಿ ನೃತ್ಯಪ್ರಕಾರಗಳಲ್ಲಿ ಪಳಗಿರುವ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸಮಕಾಲೀನ ಶೈಲಿಯ ನೃತ್ಯ ಸಂಯೋಜಕಿ ಕನ್ನಡತಿ ಮಯೂರಿ ಕೂಡ ಕನ್ನಡದಲ್ಲಿ ತೀರ್ಪುಗಾರರಾಗುತ್ತಿರುವುದು ಇದೇ ಮೊದಲು.

ನಟ ಅಕುಲ್ ಬಾಲಾಜಿ ಅವರು ಡಾನ್ಸಿಂಗ್ ಸ್ಟಾರ್ 2 ಕಾರ್ಯಕ್ರಮದ ನಿರೂಪಣೆ ಹೊಣೆ ಹೊತ್ತಿದ್ದಾರೆ. ಮೊದಲ ಆವೃತ್ತಿಯಲ್ಲಿ ಯಶಸ್ವಿ ನಿರೂಪಣೆ ಮಾಡಿ ಜನಮನಗೆದ್ದ ಅಕುಲ್, ಎರಡನೇ ಆವೃತ್ತಿಯಲ್ಲಿ ನಿರೂಪಣೆಗೆ ಹೊಸ ಸ್ಪರ್ಶ ನೀಡಲು ಶ್ರಮವಹಿಸುತ್ತಿದ್ದಾರೆ.

Etv Kannada Dancing Star 2 from 7th February

ತಾರೆಗಳ ಡಾನ್ಸ್ ಕದನವನ್ನು ಕುತೂಹಲಕರವಾಗಿ ವಿನ್ಯಾಸಗೊಳಿಸಲಾಗಿದೆ. ಹಲವು ಹಂತಗಳಲ್ಲಿ ಎಲಿಮಿನೇಷನ್ ನಡೆಯಲಿದ್ದು ಅಂತಿಮ ವಿಜೇತರಿಗೆ ಆಕರ್ಷಕ ಬಹುಮಾನವಿದೆ.

ಹಾಡು-ಕುಣಿತ-ಮಾತುಕತೆ ಜೊತೆ ಸೆಲೆಬ್ರಿಟಿಗಳ ಡಾನ್ಸಿಂಗ್ ಜರ್ನಿ ಈ ಕಾರ್ಯಕ್ರಮದ ವಿಶೇಷ. ಇದು ಎಲ್ಲ ವರ್ಗದವರನ್ನೂ ರಂಜಿಸಿ ಈಟಿವಿ ಕನ್ನಡ ವಾಹಿನಿಗೆ ಮೈಲುಗಲ್ಲಾಗಲಿದೆ ಎನ್ನುತ್ತಾರೆ ಈಟಿವಿ ವಾಹಿನಿಯ ಬಿಜಿನೆಸ್ ಹೆಡ್ ಹಾಗೂ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್.

ಡಾನ್ಸಿಂಗ್ ಸ್ಟಾರ್ ಅನ್ನೋದು ಬಿಬಿಸಿ ವರ್ಲ್ಡ್ ವೈಡ್ ನ ಜನಜನಿತ ಶೋ 'ಡಾನ್ಸಿಂಗ್ ವಿತ್ ಸ್ಟಾರ್'ನ ಭಾರತೀಯ ಅಳವಡಿಕೆ. ಈ ವರ್ಷ ಬಿಬಿಸಿ ವರ್ಲ್ಡ್ ವೈಡ್ ಪ್ರೊಡಕ್ಷನ್ ಸಂಸ್ಥೆಯೇ ಕನ್ನಡ ಅವತರಣಿಕೆ 'ಡಾನ್ಸಿಂಗ್ ಸ್ಟಾರ್ 2' ನಿರ್ಮಿಸುತ್ತಿದೆ. (ಫಿಲ್ಮಿಬೀಟ್ ಕನ್ನಡ)

English summary
Etv Kannada's popular show Dancing Star season 2 is set to roll on 7th of February at 8 pm on Saturday and Sunday. Actress Priyamani is seen with Crazy Star V Ravichandran and choriographer Mayoori Upadhyay.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada