»   » ಈಟಿವಿ ಕನ್ನಡ 'ಇಂಡಿಯನ್' ಒಂದು ಮುನ್ನೋಟ

ಈಟಿವಿ ಕನ್ನಡ 'ಇಂಡಿಯನ್' ಒಂದು ಮುನ್ನೋಟ

Posted By:
Subscribe to Filmibeat Kannada

ಈಟಿವಿ ಕನ್ನಡ ಮತ್ತೊಂದು ರಿಯಾಲಿಟಿ ಶೋ ಮೂಲಕ ಸೋಮವಾರ 8 ಗಂಟೆಗೆ ನಿಮ್ಮನ್ನು ರಂಜಿಸಲಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಯಶಸ್ಸು ಬೆನ್ನ ಹಿಂದಿರುವಾಗ 'ಇಂಡಿಯನ್' ಎಂಬ 'Incredible ಇಂಡಿಯಾದಲ್ಲೊಂದು Impossible ಜರ್ನಿ' ಯನ್ನು ಜನರು ಹೇಗೆ ಸ್ವಾಗತಿಸುತ್ತಾರೋ ಕಾದು ನೋಡಬೇಕಿದೆ.

ಮೊದಲ ಬಾರಿಗೆ ದೇಶದ 7 ರಾಜ್ಯಗಳಲ್ಲಿ ಪ್ರವಾಸ ಮಾಡುವ ಹದಿನಾಲ್ಕು ಕನ್ನಡಿಗ ಸ್ಪರ್ಧಿಗಳು 'ಇಂಡಿಯನ್' ಆಗಲು ಹೊರಟ್ಟಿದ್ದಾರೆ. ಅವಿಸ್ಮರಣೀಯ ಭಾರತವನ್ನು ತೋರಿಸುವ ಅಸಾಧ್ಯವಾದ ಈ ಪ್ರಯಾಣವು ದೇಶದ ಬೇರೆ ಬೇರೆ ಭಾಗಗಳಲ್ಲಿನ ನೈಜ ಬಣ್ಣಗಳನ್ನು ತೋರಿಸುತ್ತದೆಯಂತೆ.

ಈ ಕಾರ್ಯಕ್ರಮದ ಸ್ಫರ್ಧಿಗಳು ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ವೈವಿಧ್ಯಮಯ ಜೀವನಶೈಲಿ ಸಂಸ್ಕೃತಿಗಳಿಂದ ಬಂದಿರುತ್ತಾರೆ. ತಂಡವು ಪ್ರತಿ ಸೋಮವಾರ ಹೊಸ ರಾಜ್ಯವನ್ನು ಪ್ರವೇಶಿಸುತ್ತದೆ. ಅಲ್ಲಿನ ಸ್ಥಳೀಯ ಚಟುವಟಿಕೆಗಳ ಅಥವಾ ಕೆಲಸಗಳ ಮೂಲಕ ಆ ಒಂದು ಪ್ರದೇಶವನ್ನು ಕಾಣಲು ಪ್ರಯತ್ನಿಸುತ್ತದೆ. ಕೆಲಸಗಳು ಹೇಗಿರುತ್ತವೆಯೆಂದರೆ ಗುಜರಾತಿನ ರುಚಿಕರ ತಿಂಡಿಯನ್ನು ಮಾಡುವುದು, ರಾಜಸ್ಥಾನ್ ಪೇಟ ಸುತ್ತುವುದು ಮುಂತಾದ ಆ ರಾಜ್ಯದ ವೈಶಿಷ್ಟವನ್ನು ತೋರಿಸುವಂತಿರುತ್ತವೆ.

ಕಾರ್ಯಕ್ರಮ ನಿರೂಪಣೆ ಮಾಡಲಿರುವ ಅಕುಲ್ ಬಾಲಾಜಿ ಅವರು "ನನಗೆ ಯಾವಾಗಲೂ ಪ್ರವಾಸ ಮಾಡುವುದು ಬಹಳ ಇಷ್ಟ. ಈ ರಿಯಾಲಿಟಿ ಕಾರ್ಯಕ್ರಮ ನನ್ನೊಳಗಿನ ಸಾಹಸಪ್ರವೃತ್ತಿಗೆ ಪ್ರೇರಣೆಯೊದಗಿಸಿದೆ. ನಮ್ಮ ದೇಶದ ವೈವಿಧ್ಯಮಯ ಜೀವನ ಶೈಲಿಯನ್ನು ನೋಡುವ ಅವಕಾಶ ಸಿಕ್ಕಿರುವುದು ಸಂತೋಷವನ್ನು ನೀಡುತ್ತದೆ ಮತ್ತು ಶೂಟಿಂಗ್ ಆರಂಭಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ. ಇಂಡಿಯನ್ ರಿಯಾಲಿಟಿ ಶೋ ಮುನ್ನೋಟ ಇಲ್ಲಿದೆ ನೋಡಿ

ಪರಮೇಶ್ವರ್ ಗುಂಡ್ಕಲ್ ಹೇಳಿಕೆ

ಈಟಿವಿ ಕನ್ನಡದ ಪ್ರೋಗ್ರಾಮಿಂಗ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು "ಇಂಡಿಯನ್, ಇದು ಪ್ರವಾಸ ಮತ್ತು ಸಾಹಸದ ಆಕರ್ಷಕವಾದ ಸಂಯೋಜನೆಯಾಗಿದ್ದು, ಎಲ್ಲ ವಯೋಮಾನದವರಿಗೂ ಸೂಕ್ತವಾಗಿದೆ.

ಕಾರ್ಯಕ್ರಮವನ್ನು ಭಾರತದ ಉದ್ದಕ್ಕೂ 7 ಬೇರೆ ಬೇರೆ ರಾಜ್ಯಗಳು ಜಮ್ಮು ಕಾಶ್ಮೀರ, ಗುಜರಾತ್, ರಾಜಸ್ತಾನ, ಪಂಜಾಬ್, ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳಗಳಲ್ಲಿ ಚಿತ್ರೀಕರಿಸಲಾಗುತ್ತದೆ.

ಅಕುಲ್ ಬಾಲಾಜಿ ಅವರು ನಿರೂಪಕರಾಗಿ ಇರುವುದರೊಂದಿಗೆ ನಾವು ಕಾರ್ಯಕ್ರಮಕ್ಕೆ ಅಗತ್ಯವಾದ ತಂಡವನ್ನು ಹೊಂದಿದ್ದೇವೆ. ಈ ಕಾರ್ಯಕ್ರಮವು ರಾತ್ರಿ 8 ಗಂಟೆಯ ಪ್ರೈಮ್ ಟೈಮ್ ನಲ್ಲಿಯೇ ಪ್ರಸಾರವಾಗಲಿದೆ" ಎಂದಿದ್ದಾರೆ.

ವಿವಿಧತೆಯಲ್ಲಿ ಏಕತೆ

ವಿವಿಧತೆಯಲ್ಲಿ ಏಕತೆಯನ್ನು ತೋರಿಸುವ ಉದ್ದೇಶದಿಂದ ಏಳು ಯುವಕರು ಮತ್ತು ಏಳು ಯುವತಿಯರು ಕೇವಲ ಕನ್ನಡಿಗರಾಗಿ ಅಷ್ಟೇ ಅಲ್ಲ ಪರಿಪೂರ್ಣ ಭಾರತೀಯರಾಗಿ ಹಿಂದಿರುಗುತ್ತಾರೆ.

ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಮೂಡಿಬರಲಿರುವ ಈ ಕಾರ್ಯಕ್ರಮವನ್ನು ಕೊಲೊಸಿಯಮ್ ಮೀಡಿಯಾ ನಿರ್ಮಾಣ ಮಾಡಿದೆ. ಈ ಕಾರ್ಯಕ್ರಮದ ಮೊದಲ ಕಂತು ಆಗಸ್ಟ್ 12ರಂದು ಮೂಡಿಬರುತ್ತಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೆ ಪ್ರಸಾರವಾಗಲಿದೆ.

ರಿಯಾಲಿಟಿ ಶೋ ಪ್ರೊಮೋ

ಅಕುಲ್ ಬಾಲಾಜಿ ಲಡಾಕ್ ನಲ್ಲಿ ಬೈಕ್ ಓಡಿಸುತ್ತಾ ಬರುವ ಪ್ರೊಮೋ ಇಲ್ಲಿದೆ ನೋಡಿ

ಸ್ಪರ್ಧಿಗಳ ಪರಿಚಯ 1

ಮೊದಲ ಸ್ಪರ್ಧಿ ಮಹೇಶ್

ಅಕುಲ್ ಬಾಲಾಜಿ ಟ್ವೀಟ್

ಇಂಡಿಯನ್ ತಪ್ಪದೇ ನೋಡಿ ಎಂದು ಅಕುಲ್ ಬಾಲಾಜಿ ಟ್ವೀಟ್

ಸ್ಪರ್ಧಿಗಳ ಪರಿಚಯ 2

ಎರಡನೇ ಸ್ಪರ್ಧಿ ಸುನಾಮಿ ಕಿಟ್ಟಿ

ಅಕುಲ್ ಬಾಲಾಜಿ ಬಗ್ಗೆ

ಅಕುಲ್ ಬಾಲಾಜಿ ಬಗ್ಗೆ ಅಭಿಮಾನಿಗಳು ಹೇಳುವ ಸಹಜ ಮಾತು ಈ ಟ್ವೀಟ್ ನಲ್ಲಿದೆ

ಸ್ಪರ್ಧಿಗಳ ಪರಿಚಯ 3

ಮೂರನೇ ಸ್ಪರ್ಧಿ ಬೈಕ್ ಏರಿರುವ ದಿವ್ಯಾ

ಸ್ಪರ್ಧಿಗಳ ಪರಿಚಯ 4

ನಟಿ ಸ್ಫೂರ್ತಿ ರಿಯಾಲಿಟಿ ಶೋನ ನಾಲ್ಕನೇ ಸ್ಪರ್ಧಿಯಾಗಿದ್ದಾರೆ.

ಸ್ಪರ್ಧಿಗಳ ಪರಿಚಯ 5

ಐದನೇ ಸ್ಪರ್ಧಿ ಬೊಂಬಾಟ್ ಬೆಲ್ಲಿ ಡ್ಯಾನ್ಸರ್ ಸುಷ್ಮಾ...ಇನ್ನಷ್ಟು ನಿರೀಕ್ಷಿಸಿ

English summary
ETV Kannada Launches 'Indian' An Adventurous Reality Show Depicting Incredible Indians on an Impossible Journey. Here is the preview of the reality show and brief introduction to contestants
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada