For Quick Alerts
  ALLOW NOTIFICATIONS  
  For Daily Alerts

  ಕೊನೆಯ ನಿರ್ಧಾರ 'ಜೊತೆ ಜೊತೆಯಲಿ'ಯಲ್ಲಿ ಇನ್ನು ಮುಂದೆ ಅನಿರುದ್ಧ್ ಇರೋದಿಲ್ಲ!

  By Bhagya.s
  |

  ಜೊತೆ ಜೊತೆಯಲಿ ಧಾರಾವಾಹಿ ತಂಡ ಮತ್ತು ನಟ ಅನಿರುದ್ಧ್ ನಡುವೆ ವೈಮನಸ್ಸು ಉಂಟಾಗಿದೆ. ತಂಡದಲ್ಲಿ ಆದ ಕಿರಿಕ್ ಈಗ ಹೊರಗೆ ಬಂದಿದೆ. ಅನಿರುದ್ಧ್ ವಿರುದ್ಧ ತಂಡ ರೊಚ್ಚಿಗೆದ್ದಿದೆ. ಇತ್ತ ಅನಿರುದ್ಧ್ ಕೂಡ ತಂಡದವರ ತಪ್ಪೇನು ಎನ್ನುವ ಬಗ್ಗೆ ಮಾತನಾಡಿದ್ದಾರೆ.

  ಈ ವಿಚಾರ ಎಲ್ಲೆಡೆ ಸದ್ದು ಮಾಡುತ್ತಲೇ, ನಟ ಅನಿರುದ್ಧ್ ನಡೆದಿರುವುದರ ಬಗ್ಗೆ ಮಾಧ್ಯಗಳ ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಮೇಲೆ ಸೀರಿಯಲ್ ನಿರ್ದೇಶಕ, ನಿರ್ಮಾಪಕ ಜಗದೀಶ್ ಅವರು ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ಕೊಟ್ಟು.

  ಇತ್ತ ಅನಿರುದ್ಧ್ ಮಾಧ್ಯಮಗಳಲ್ಲಿ ಹೇಳಿಕೆ ಕೊಡುತ್ತಲೇ, ಇತ್ತ ಜಗದೀಶ್ ಮತ್ತು ಟೆಲಿವಿಷನ್ ನಿರ್ಮಾಪಕರ ಸಂಘದವತಿಯಿಂದ ಸುದ್ದಿಗೊಷ್ಟಿ ನಡೆಸಲಾಯಿತು. ಈ ವಿವಾದದ ಬಗ್ಗೆ ಮಾತನಾಡಿ ಮುಂದಿನ ನಿರ್ಧಾರ ಏನು ಎನ್ನವುದನ್ನು ತಿಳಿಸಿದ್ದಾರೆ.

  ಸಮ್ಯಸ್ಯೆ ಹೇಳಿಕೊಂಡ ಜಗದೀಶ್!

  ಸಮ್ಯಸ್ಯೆ ಹೇಳಿಕೊಂಡ ಜಗದೀಶ್!

  ಸುದ್ದಿಗೋಷ್ಟಿ ನಡೆಸಿ ಹಾಗೆ ಆಗಿರುವ ಸಮಸ್ಯೆಯ ಬಗ್ಗೆ ನಿರ್ದೇಶಕ ನಿರ್ಮಾಪಕ ಜಗದೀಶ್ ಹೇಳಿಕೊಂಡರು. ಇವರ ಜೊತೆಗೆ ಸುದ್ದಿಗೋಷ್ಠಿಯಲ್ಲಿ ಹಲವು ಧಾರವಾಹಿ ನಿರ್ಮಾಪಕರು ಭಾಗಿಯಾಗಿದ್ದರು. ಜೊತೆಗೆ ವಾಹಿನಿಯ ಫಿಕ್ಷನ್ ಹೆಡ್ ಕೂಡ ಭಾಗಿಯಾಗಿದ್ದರು. ಇದೆ ವೇಳೆ ಮಾತನಾಡಿದ ಜಗದೀಶ್, ಅನಿರುದ್ಧ್ ಅವರ ಈ ರೀತಿಯ ವರ್ತನೆ ಇದೇ ಮೊದಲಲ್ಲ ಹಲವು ಬಾರಿ ಅವರನ್ನು ನಾವು ಸಹಿಸಿಕೊಂಡಿದ್ದೇವೆ. ಸೆಟ್ಟಿಗೆ ಬಂದ ಬಳಿಕ ಅವರು ಹೆಚ್ಚು ಸಮಯ ವ್ಯರ್ಥ ಮಾಡುವುದರಿಂದ ನಮಗೆ ಹೆಚ್ಚು ನಷ್ಟವಾಗಿದೆ. ಜೊತೆಗೆ ಅವರು ಹೇಳಿದಂತೆ ಕಥೆಯಲ್ಲಿ ಲಾಜಿಕ್‌ಗಳನ್ನು ಹುಡುಕುತ್ತಾ ಹೋದರೆ, ಮನರಂಜನೆ ಕೊಡಲು ಸಾಧ್ಯವಿಲ್ಲ. ಹೀಗೆ ಹಲವು ಬಾರಿ ಅವರು ನಮ್ಮ ತಂಡಕ್ಕೆ ತೊಂದರೆ ಕೊಟ್ಟಿದ್ದಾರೆ ಆದರೆ ಈಗ ಇದು ಸ್ಪೋಟಗೊಂಡಿದೆ ಎಂದು ಹೇಳಿಕೊಂಡಿದ್ದಾರೆ.

  ಸೆಟ್‌ನಲ್ಲಿ ನಡೆದದ್ದು ಏನು?

  ಸೆಟ್‌ನಲ್ಲಿ ನಡೆದದ್ದು ಏನು?

  ಇನ್ನು ಇವರ ಜಗಳ ಇಷ್ಟು ದೊಡ್ಡ ಮಟ್ಟದಲ್ಲಿ ಹೊರಬರಲು ಕಾರಣ ಸೆಟ್‌ನಲ್ಲಿ ನಡೆದ ಘಟನೆ. ಅಂದು ಸೆಟ್ ನಲ್ಲಿ ನಡೆದದ್ದು ಏನು ಎಂದು ನಿರ್ದೇಶಕ ಮಧು ಉತ್ತಮ್ ಹೇಳಿಕೊಂಡಿದ್ದಾರೆ. ಆರ್ಯವರ್ಧನ್ ಪಾತ್ರದಾರಿ ತನಗೆ ಆಸ್ತಿ ಅಂತಸ್ತು ಏನು ಬೇಡ ಎಂದು ಎಲ್ಲವನ್ನೂ ಮನೆಯವರಿಗೆ ಬಿಟ್ಟು, ತಾನು ತೊಟ್ಟಿರುವ ಕೋಟನ್ನು ಬಿಚ್ಚಿ ಕೊಟ್ಟು ಮನೆಯಿಂದ ಹೊರ ನಡೆಯುವ ದೃಶ್ಯ ಚಿತ್ರಣ ಚಿತ್ರೀಕರಣವಿತ್ತು. ಈ ಸಮಯದಲ್ಲಿ ನಿರ್ದೇಶಕ ಮತ್ತು ಅನಿರುದ್ಧ್ ನಡುವೆ ಮಾತಿನ ಚಕಮಕಿ ನಡೆದಿದೆ. ಅಂದರೆ ಆ ದೃಶ್ಯದಲ್ಲಿ ಬರುವ ಸನ್ನಿವೇಶವನ್ನು ಒಪ್ಪಿಕೊಳ್ಳಲು ಅನಿರುದ್ಧ್ ರೆಡಿ ಇರಲಿಲ್ಲ. ಹಾಗಾಗಿ ನಿಮ್ಮಂತವರ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿಂದ ಶೂಟಿಂಗ್ ಅರ್ಧಕ್ಕೆ ಬಿಟ್ಟು ಹೊರಟು ಹೋದರಂತೆ.

  ಜೊತೆ ಜೊತೆಯಲಿ ಸೀರಿಯಲ್‌ಯಿಂದ ಅನಿರುದ್ಧ ಔಟ್!

  ಜೊತೆ ಜೊತೆಯಲಿ ಸೀರಿಯಲ್‌ಯಿಂದ ಅನಿರುದ್ಧ ಔಟ್!

  ಈ ವಿವಾದದ ಅಂತ್ಯವಾಗಿ ಧಾರವಾಹಿಯಿಂದ ಅನಿರುದ್ಧ್ ಅವರನ್ನು ಕೈಬಿಡಲಾಗಿದೆ. ಈ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ಧಾರಾವಾಹಿ ತಂಡ ಅಧಿಕೃತವಾಗಿ ಹೇಳಿದೆ. ಹಾಗಾಗಿ ಇನ್ನು ಮುಂದೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಆಗಿ ಅನಿರುದ್ಧ್ ಮುಂದುವರೆಯುವುದಿಲ್ಲ. ಆರ್ಯವರ್ಧನ್ ಪಾತ್ರದಲ್ಲಿ ಮತ್ತೊಬ್ಬ ಕಲಾವಿದ ನನ್ನ ಹಾಕಿಕೊಳ್ಳಲು ಧಾರಾವಾಹಿ ತಂಡ ಮುಂದಾಗಿದೆ. ಅದು ಯಾರು ಎನ್ನುವುದು ಮುಂದಿನ ದಿನಗಳಲ್ಲಿ ರಿವಿಲ್ ಆಗಲಿದೆ. ಒಟ್ಟಿನಲ್ಲಿ ಅನಿರುದ್ಧ ಧಾರಾವಾಹಿ ಹೊರನಡೆದಿದ್ದಾರೆ.

  ಕಿರುತೆರೆಯಿಂದ ಅನಿರುದ್ಧ್ ಬ್ಯಾನ್!

  ಕಿರುತೆರೆಯಿಂದ ಅನಿರುದ್ಧ್ ಬ್ಯಾನ್!

  ಇನ್ನು ಈ ಧಾರಾವಾಹಿಯ ಅನಿರುದ್ಧ್ ಅವರನ್ನ ಬಿಡುವುದರ ಜೊತೆಗೆ ಅವರನ್ನು ನಿಷೇಧ ಮಾಡುವ ನಿರ್ಧಾರವನ್ನು ಕೂಡ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಮಾಡಲಾಗಿದೆ. ನಿರ್ದೇಶಕ ಜಗದೀಶ್ ಅವರು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ತಮಗಾದ ನಷ್ಟ ಮತ್ತು ತೊಂದರೆಯ ಬಗ್ಗೆ ಪತ್ರವನ್ನು ಬರೆದಿದ್ದಾರೆ. ಹಾಗಾಗಿ ನಟ ಅನಿರುದ್ಧ ಅವರಿಗೆ ಬೇರೆ ಯಾವುದೇ ಧಾರಾವಾಹಿಗಳಲ್ಲಿ ಅಥವಾ ಕಿರುತೆರೆಯಲ್ಲಿ ಅವಕಾಶ ಮಾಡಿಕೊಡಬಾರದು ಎಂದು ನಿಷೇಧವನ್ನು ಹೇರುವ ನಿಟ್ಟಿನಲ್ಲಿ ಅವರು ಇತರೆ ನಿರ್ಮಾಪಕರ ಜೊತೆ ಸೇರಿ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ. ಅದನ್ನು ನಿರ್ಮಾಪಕ ಸಂಘದ ಅಧ್ಯಕ್ಷ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

  English summary
  Final Decision Aniruddh Out from Jothe Jotheyali serial And new Hero Entry soon, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X