»   » ಕೋಟ್ಯಧಿಪತಿಯಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ

ಕೋಟ್ಯಧಿಪತಿಯಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  Anil Kumble
  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿರುವ ಗೇಮ್ ಶೋ 'ಕನ್ನಡದ ಕೋಟ್ಯಧಿಪತಿ'ಗೆ ಈ ಬಾರಿಯ ಸೆಲೆಬ್ರಿಟಿಯಾಗಿ ಮಾಜಿ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಅನಿಲ್ ರಾಧಾಕೃಷ್ಣ ಕುಂಬ್ಳೆ ಬರುತ್ತಿದ್ದಾರೆ. ಈ ವಿಶೇಷ ಕಾರ್ಯಕ್ರಮ ಇದೇ ಬುಧವಾರ (ಜೂ.13) ಹಾಗೂ ಗುರುವಾರ (ಜೂ.14)ರಂದು ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  ಸಮಯ ಗೊತ್ತೇ ಇದೆಯಲ್ಲ? ರಾತ್ರಿ 8 ಗಂಟೆಗೆ ಈ ವಿಶೇಷ ಕಾರ್ಯಕ್ರಮವನ್ನು ನೋಡಿ ಆನಂದಿಸಬಹುದು. ಈ ಗೇಮ್ ಶೋನಲ್ಲಿ ಕೇವಲ ಆಟವಷ್ಟೇ ಇರುವುದಿಲ್ಲ. ಆಟದ ಜೊತೆಗೆ ಒಂದಷ್ಟು ತಮಾಷೆ, ಹಾಡು ಹರಟೆ, ಪುನೀತ್ ಅವರ ಡೈಲಾಗ್ಸ್ ಎಲ್ಲವನ್ನೂ ನೋಡಿ ಸವಿಯಬಹುದು. ವಿಡಿಯೋದಲ್ಲಿ ನೋಡಿ ಕುಂಬ್ಳೆಗೆ ಪುನೀತ್ ಗೂಗ್ಲಿ.

  ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಹತ್ತು ವಿಕೆಟ್‌ಗಳನ್ನು ತೆಗೆದುಕೊಂಡು ವಿಶ್ವದ ಎರಡನೇ ಆಟಗಾರ, ಕನ್ನಡದ ಕುವರ ಅನಿಲ್ ಕುಂಬ್ಳೆ (ಇನ್ನೊಬ್ಬರು ಇಂಗ್ಲೆಂಡಿನ ಜಿಂ ಲೇಕರ್). ಶೋನಲ್ಲಿ ಅವರು ಪುನೀತ್‌ಗೆ ಬೌಲಿಂಗ್‌ನ ಒಂದಷ್ಟು ತಂತ್ರಗಳನ್ನೂ ಕಲಿಸಿದ್ದಾರೆ. ಪುನೀತ್ ಕೂಡ ಅಷ್ಟೇ ಕುಂಬ್ಳೆಗೆ ಒಂದಷ್ಟು ಅಭಿನಯದ ಟ್ರಿಕ್ಸ್ ಹೇಳಿಕೊಟ್ಟಿದ್ದಾರೆ.

  ಆಟದ ಮೈದಾನದಲ್ಲಿ ಕುಂಬ್ಳೆ ಅವರ ಮಾಂತ್ರಿಕ ಕೈಚಳಕವನ್ನಷ್ಟೇ ನೋಡಿದವರು ಶೋನಲ್ಲಿ ಅವರನ್ನು ಮತ್ತೊಂದು ಕೋನದಿಂದ ಅಳೆಯಬಹುದು. ಈ ಶೋನಲ್ಲಿ ಕುಂಬ್ಳೆ ಅವರು "ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ..." ಎಂಬ ಪುನೀತ್ ಅವರ 'ಮಿಲನ' ಚಿತ್ರದ ಹಾಡನ್ನೂ ಹಾಡಿ ರಂಜಿಸಿದ್ದಾರೆ.

  ಈ ವಿಶೇಷ ಸಂಚಿಕೆಯಲ್ಲಿ ಕುಂಬ್ಳೆ ಎಷ್ಟು ಹಣ ಗೆದ್ದಿದ್ದಾರೆ ಎಂಬುದು ಗೊತ್ತಾಗಬೇಕಾದರೆ ಬುಧವಾರದ ಶೋ ಖಂಡಿತ ನೋಡಲೇ ಬೇಕು. ಹಾಟ್ ಸೀಟ್‌ನಲ್ಲಿ ಕೂತಿರುವ ಕುಂಬ್ಳೆಗೆ ಪುನೀತ್ ಯಾವ ರೀತಿ ಗೂಗ್ಲಿ ಎಸೆದಿದ್ದಾರೆ ಎಂಬುದು ಇಂಟರೆಸ್ಟಿಂಗ್ ವಿಚಾರ.

  ಅನಿಲ್ ಕುಂಬ್ಳೆಗೆ ಜಂಬೋ("Jumbo") ಎಂಬ ಅಡ್ಡಹೆಸರು ಇದೆ. ಸ್ಪಿನ್ ಬೌಲಿಂಗ್ ಮಾಡಿಯೂ, ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವುದನ್ನು ಕರಗತ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಜಂಬೋ ಜೆಟ್‌ಗೆ ಹೋಲಿಸಿ, ಇವರನ್ನು ಹಾಗೆ ಕರೆಯಲಾಗುತ್ತದೆ. ಇದಲ್ಲದೇ, ಇವರ ಪಾದದ ಗಾತ್ರ ತುಂಬಾ ದೊಡ್ಡದಿರುವುದರಿಂದ ಅವರ ಟೀಂ ಮೇಟ್‌ಗಳು ಈ ಹೆಸರನ್ನು ಇಟ್ಟಿದ್ದಾರೆ ಎಂದೂ ಹೇಳಲಾಗುತ್ತದೆ.

  ಈ ಹಿಂದೆ ಹಲವಾರು ಸೆಲೆಬ್ರಿಟಿಗಳು 'ಕೋಟ್ಯಧಿಪತಿ' ಶೋನಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಗೋಲ್ಡನ್ ಗರ್ಲ್ ರಮ್ಯಾ, ಹಿರಿಯ ತಾರೆ ಲಕ್ಷ್ಮಿ, ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಶೋನಲ್ಲಿ ಭಾಗವಹಿಸಿ ಗಮನಸೆಳೆದಿದ್ದರು. ಈ ಬಾರಿ ಅನಿಲ್ ಕುಂಬ್ಳೆ ಕೂಡ ಯಾವ ರೀತಿ ಉತ್ತರಿಸಿದ್ದಾರೆ ಎಂಬ ಕುತೂಹಲ ಇದ್ದೇ ಇದೆ. (ಒನ್‌ಇಂಡಿಯಾ ಕನ್ನಡ)

  English summary
  Former Indian cricketer and a captain of the Indian Test Cricket, right-arm leg spin (leg break googly) bowler and a right-hand batsman Anil Kumble has celebrity guest on Puneeth Rajkumar’s quiz show Kannadada kotyadhipati. Watch the special episode on 13th and 14th June, 2012 at 8:00 PM IST on Asianet Suvarna Channel. The game show is hosted by Puneeth Rajkumar.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more