»   » ಅತ್ತ ಭಾವುಕರಾದ ತಮ್ಮ ಮಹೇಶ್, ಇತ್ತ ಕಣ್ಣೀರಿಟ್ಟ ಅಣ್ಣ ಗಣೇಶ್

ಅತ್ತ ಭಾವುಕರಾದ ತಮ್ಮ ಮಹೇಶ್, ಇತ್ತ ಕಣ್ಣೀರಿಟ್ಟ ಅಣ್ಣ ಗಣೇಶ್

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅವರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನೇಕ ಅತಿಥಿಗಳು ಆಗಮಿಸಿದ್ದರು. ಆ ಪೈಕಿ ಅವರ ತಮ್ಮ ಮಹೇಶ್ ಕೂಡ ಒಬ್ಬರು. ಗಣೇಶ್ ಬಾಲ್ಯದ ತುಂಟತನದ ಜೊತೆಗೆ ಅವರ ಕಷ್ಟದ ದಿನವನ್ನೂ ಮಹೇಶ್ ವಿವರಿಸಿದರು.

ಗಣೇಶ್, ಮಹೇಶ್ ಮತ್ತು ಉಮೇಶ್ ಮೂರು ಜನ ಅಣ್ಣ ತಮ್ಮಂದಿರು. ಅಣ್ಣ ಗಣೇಶ್ ಜೊತೆ ಮಹೇಶ್ ಹೆಚ್ಚಾಗಿ ಬೆಳೆದಿದ್ದಾರೆ. ಗಣೇಶ್ ಜೊತೆ ಕಳೆದ ಬಾಲ್ಯದ ಒಂದೊಂದು ಘಟನೆಗಳನ್ನೂ ಮಹೇಶ್ ಕಣ್ಣಿಗೆ ಕಟ್ಟುವಂತೆ ಹೇಳಿದರು.

'ಫ್ರೆಂಡ್ಸ್ ಗ್ಯಾಂಗ್' ಪ್ರಭಾವ: ಗಣೇಶ್ ರನ್ನ ಗುರುತು ಹಿಡಿಯೋರೇ ಇರಲಿಲ್ಲ.!

ಮಾತನಾಡುತ್ತಾ ಅತ್ತ ತಮ್ಮ ಮಹೇಶ್ ಭಾವುಕರಾದರೆ, ಇತ್ತ ಅಣ್ಣ ಗಣೇಶ್ ಕಣ್ಣೀರಿಟ್ಟರು. ಯಾಕೆ..? ಏನು..? ಎಂಬ ಮಾಹಿತಿ ಇಲ್ಲಿದೆ, ಓದಿರಿ....

ಮಹೇಶ್ ಮಾತು

''ನಮ್ಮೂರಲ್ಲಿ ಒಂದೇ ಒಂದು ಟಿ ವಿ ಇತ್ತು. ಗುರುವಾರ ಬಂದರೆ ನೀನು ಹೆಗಲ ಮೇಲೆ ಉಮೇಶನ್ನು ಕೂರಿಸಿಕೊಂಡು, ನನ್ನನ್ನು ಕೈನಲ್ಲಿ ಹಿಡಿದುಕೊಂಡು ಎಳೆದು ಕೊಂಡು ಸಾಂಗ್ ತೋರಿಸುವುದಕ್ಕೆ ಕರೆದುಕೊಂಡು ಹೋಗುತ್ತಿದ್ರಿ.'' - ಮಹೇಶ್, ನಟ, ಗಣೇಶ್ ಸಹೋದರ

ಕಾಸು ಕದ್ದಿದ್ದು

'' ಒಂದು ಸಾರಿ ಅಮ್ಮ ಮನೆಯಲ್ಲಿ ಇಲ್ಲದಾಗ ನೀನು-ಉಮೇಶ ದೇವರ ಮನೆಯ ಹುಂಡಿ ಕಾಸು ತೆಗೆದುಕೊಂಡಿದ್ರಿ. ಯಾವುದೇ ಸಿನಿಮಾ ರಿಲೀಸ್ ಆಗಲಿ ನೀವು ಅದನ್ನ ರೆಕಾರ್ಡ್ ಮಾಡಿ ಟೇಪ್ರಿಕಾರ್ಡರ್ ನಲ್ಲಿ ನಮ್ಮಗೆಲ್ಲ ಕೇಳಿಸುತ್ತಿದ್ರಿ. ಪ್ರೊಜೆಕ್ಟರ್ ಮಾಡಿ ಅಪ್ಪನ ಪಂಚೆಯಲ್ಲಿ ಸಿನಿಮಾ ತೋರಿಸುತ್ತಿದ್ರಿ'' - ಮಹೇಶ್, ನಟ, ಗಣೇಶ್ ಸಹೋದರ

ಅಪ್ಪಿ-ತಪ್ಪಿ ಗಣೇಶ್ 'ಕಾಮಿಡಿ ಟೈಮ್' ಅವಕಾಶವನ್ನ ಕೈ ಬಿಟ್ಟಿದ್ದರೆ.?!

ಗೆದ್ದು ತೋರಿಸಿದ್ರಿ

''ಫಸ್ಟ್ ಟೈಂ ನೀವು ಪಿ ಯು ಸಿ ಯಲ್ಲಿ ಪರ್ಫಮ್ ಮಾಡಿದ್ರಿ.. ನಿಮ್ಮ ಪಫಾಮೆನ್ಸ್ ಚೆನ್ನಾಗಿದ್ದರೂ ನೀವು ನಾರ್ಮಲ್ ಬಟ್ಟೆಯಲ್ಲಿ ಇದ್ರಿ ಅಂತ ನಂ.2 ಪ್ಲೇಸ್ ಕೊಟ್ರು. ನೀವು ಅದನ್ನು ಚಾಲೆಂಜ್ ಆಗಿ ತಗೊಂಡು ಮುಂದಿನ ವರ್ಷ ಅದೇ ಹುಡುಗಿ ಬಂದಾಗ ಬೀಟ್ ಮಾಡಿದ್ರಿ. ಆಗ ಬಸ್ ಇಳಿದು ಪ್ರಶಸ್ತಿ ತೋರಿಸಿದಾಗ ನನಗೆ ಅಳು ಬಂದ ಹಾಗೆ ಆಯ್ತು'' - ಮಹೇಶ್, ನಟ, ಗಣೇಶ್ ಸಹೋದರ

'ವೀಕೆಂಡ್' ಸಾಧಕರ ಸೀಟಿನಲ್ಲಿ 2 ಬಾರಿ ಕುಳಿತ ಏಕೈಕ ಅತಿಥಿ ಗಣೇಶ್

ಹಿಂದೆ ತಿರುಗಿ ನೋಡಿಲ್ಲ

''ಅಲ್ಲಿಂದ ನೀವು ಹಿಂದೆ ತಿರುಗಿ ನೋಡಿಲ್ಲ. ಅಣ್ಣ.. ನಿಮ್ಮ ದಾರಿ ನೀವೇ ಮಾಡಿಕೊಂಡು ನುಗ್ಗಿದ್ರಿ. ಅದೊಂದು ತುಂಬ ಖುಷಿಯಾಗುತ್ತೆ ನಮಗೆ'' ಹೀಗೆ ಹೇಳಿ ಅತ್ತ ತಮ್ಮ ಮಹೇಶ್ ಭಾವುಕರಾದರೆ, ಇತ್ತ ಅಣ್ಣ ಗಣೇಶ್ ಕಣ್ಣೀರು ಹಾಕಿದರು.

ತಾಯಿ ಕಂಡಂತೆ ಗೋಲ್ಡನ್ ಸ್ಟಾರ್ ಗಣೇಶ್ ಅಂದು ಹೇಗಿದ್ದರು?

English summary
Kannada Actor Director Ganesh and his brother Mahesh becomes emotional in Zee Kannada Channel's popular show Weekend with Ramesh-3

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada