Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಗಟ್ಟಿಮೇಳ' ಆರತಿ ಪಾತ್ರಧಾರಿ ಅಶ್ವಿನಿ ಈಗ ಎಲ್ಲೋದ್ರು? ಏನು ಮಾಡುತ್ತಿದ್ದಾರೆ?
ಗಟ್ಟಿಮೇಳ ಧಾರಾವಾಹಿಯಲ್ಲಿ ಮೊದಲು ಆರತಿ ಪಾತ್ರ ಮಾಡಿದ್ದ ಅಶ್ವಿನಿ ನೆನಪಿರಬೇಕಲ್ವಾ. ಅಶ್ವಿನಿಯವರು ಆರತಿ ಪಾತ್ರಕ್ಕೆ ಹೇಳಿ ಮಾಡಿಸಿದ ಆಗಿದ್ದರು.
ಅಶ್ವಿನಿ ಅವರು ತೆರೆಮೇಲೆ ಕಾಣಿಸಿಕೊಳ್ಳಲಿಲ್ಲ ಎಂದರು ಕೂಡ ಅವರಿಗಿರುವ ಕ್ರೇಜ್ ಇನ್ನು ಕಡಿಮೆಯಾಗಿಲ್ಲ. ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಾರೆ. ಅವರು ಏನು ಮಾಡುತ್ತಿದ್ದಾರೆ ಚೆಕ್ ಮಾಡುತ್ತಿರುತ್ತಾರೆ.
Geetha
Serial:
ಗೀತಾ-ವಿಜಿ
ಜೀವ
ಅಪಾಯದಲ್ಲಿ
ಅಭಿಮಾನಿಗಳ ಕುತೂಹಲಕ್ಕೆ ಅಶ್ವಿನಿ ಅವರು ಕೂಡ ಒಳ್ಳೊಳ್ಳೆ ವಿಡಿಯೋ ಹಾಕಿ ಉತ್ತರ ನೀಡುತ್ತಾ ಇರುತ್ತಾರೆ. ರೀಲ್ಸ್‌ಗಳನ್ನು ಮಾಡಿ ಶೇರ್ ಮಾಡುತ್ತಾರೆ. ಎಲ್ಲಾದರೂ ಟ್ರಿಪ್ ಹೋದರೆ, ಸ್ಪೆಷಲ್ ಏನಾದರೂ ಮಾಡಿದರೂ ಆ ಎಲ್ಲವನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.

ಗಟ್ಟಿಮೇಳದ ಸೈಲೆಂಟ್ ಆರತಿ
'ಗಟ್ಟಿಮೇಳ' ಧಾರವಾಹಿಯಲ್ಲಿ ಆರತಿ ಅಂದ್ರೆ ತುಂಬಾ ಸಾಫ್ಟ್ ಕ್ಯಾರೆಕ್ಟರ್. ಯಾರಿಗೂ ಎದುರು ಮಾತನಾಡದವಳು. ಪ್ರೀತಿಸಿದ ವಿಕ್ರಾಂತ್‌ನನ್ನು ಮದುವೆಯಾಗಿದ್ದಳು. ವಸಿಷ್ಠ ಫ್ಯಾಮಿಲಿಗೆ ಸೊಸೆಯಾಗಿ ಬರುವ ತನಕ ಆರತಿ ಸ್ಥಾನದಲ್ಲಿ ಅಶ್ವಿನಿ ಮುಂದುವರೆದಿದ್ದರು. ಆದರೆ 'ಟ್ಟಿಮೇಳ ಧಾರಾವಾಹಿಯಿಂದ ಹೊರ ನಡೆದ ಮೇಲೆ ಆ ಸ್ಥಾನವನ್ನು ಗಗನ ನಿಭಾಯಿಸುತ್ತಿದ್ದಾರೆ. ಅಶ್ವಿನಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಫಾಲೋವರ್ಸ್ ಇದ್ದಾರೆ. ಅಶ್ವಿನಿ ಹಾಕುವ ಒಂದೊಂದು ಪೋಸ್ಟ್‌ಗೂ ಸಾಕಷ್ಟು ಲೈಕ್ಸ್ ಬರುತ್ತೆ. ನಡು ನಡುವೆ ಸಾಕಷ್ಟು ಫೋಟೋ ಶೂಟ್ ಗಳನ್ನು ಮಾಡಿಸಿಕೊಳ್ಳುತ್ತಿರುತ್ತಾರೆ.

ತೆಲುಗು ಕಿರುತೆರೆಯಲ್ಲಿ ಬ್ಯುಸಿ
'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿಯಾಗಿ ಕಾಣಿಸಿಕೊಂಡು ಮರೆಯಾದ ಬಳಿಕ ಅಶ್ವಿನಿ ಸ್ವಲ್ಪ ದಿನಗಳ ಕಾಲ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಆಕ್ಟೀವ್ ಆಗಿ ಇರುತ್ತಾ ಇದ್ದರು. ಬಳಿಕ ತೆಲುಗು ಕಿರುತೆರೆ ಪ್ರವೇಶಿಸಿ ಅಶ್ವಿನಿ ಅಲ್ಲಿಯೇ ಧಾರಾವಾಹಿ ಮಾಡುತ್ತಿದ್ದಾರೆ.

ತೋಟದಲ್ಲಿ ಕೆಲಸ ಮಾಡುವ ನಟಿ
ಅಶ್ವಿನಿ ಅವರು ಮೂಲತಃ ದಾವಣಗೆರೆಯವರು. ಬಿಡುವಿನ ವೇಳೆಯಲ್ಲಿ ಊರಿಗೆ ಹೋಗಿ ಹಳ್ಳಿಯಲ್ಲೆಲ್ಲಾ ರೌಂಡ್ ಹೊಡೆದು ಬರುತ್ತಾರೆ. ಅದರ ನಡುವೆ ತೋಟಕ್ಕೆ ಹೋಗುವುದನ್ನು ಮಾತ್ರ ಮರೆಯುವುದಿಲ್ಲ. ಅಶ್ವಿನಿ ಅವರ ತೋಟ ತುಂಬಾ ಚೆನ್ನಾಗಿದೆ. ಸಾಕಷ್ಟು ಬೆಳೆಗಳನ್ನು ಬೆಳೆದಿದ್ದಾರೆ. ವೀಳ್ಯದೆಲೆ, ಬಾಳೆ, ತೆಂಗು ಹೀಗೆ ಏನೆಲ್ಲಾ ಬೇಕು ಅದೆಲ್ಲವನ್ನು ಬೆಳೆದಿದ್ದಾರೆ. ಅಶ್ವಿನಿಗೆ ಸಮಯ ಸಿಕ್ಕಿದರೆ ಸಾಕು ತೋಟಕ್ಕೆ ಹೋಗಿ ಸಮಯ ಕಳೆಯೋದು ಅಷ್ಟೇ ಅಲ್ಲ, ಕೆಲಸವನ್ನು ಮಾಡಿ ಬರುತ್ತಾರೆ. ಆ ವಿಡಿಯೋಗಳನ್ನು ಸಾಕಷ್ಟು ಶೇರ್ ಮಾಡಿಕೊಂಡಿದ್ದಾರೆ.

ಪ್ರಾಣಿ ಪ್ರಿಯೆ ಅಶ್ವಿನಿ ಮಾಡೋದೇನು..?
ಇನ್ನು ಇದೀಗ ಅವರು ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದಾರೆ. ಇದರಲ್ಲಿ ನಿತ್ಯ ವೀಡಿಯೋ ಹಾಕದಿದ್ದರೂ ಆಗಾಗ ವೀಡಿಯೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ತಮ್ಮ ಹಳ್ಳಿಯ ಜೀವನ, ಸ್ಕಿನ್ ಕೇರ್, ಅಡುಗೆ, ತುಪ್ಪ ಕಾಯಿಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ವೀಡಿಯೋ ಹಾಕುತ್ತಿರುತ್ತಾರೆ. ಭಾನುವಾರ ಮನೆಯಲ್ಲಿ ಫ್ರೀ ಆಗಿ ಇದ್ದಾಗ ಬೀದಿ ನಾಯಿಗಳಿಗಾಗಿ ಆಹಾರವನ್ನು ತಯಾರಿಸಿ, ಊಟ ಹಾಕುತ್ತಾರೆ. ಅಶ್ವಿನಿ ಅವರಿಗೆ ಪ್ರಾಣಿಗಳು ಎಂದರೆ ತುಂಬಾ ಇಷ್ಟ. ಹಾಗಾಗಿ ಅಶ್ವಿನಿ ಅವರ ಬೆಕ್ಕು, ನಾಯಿ ಜೊತೆಗೆ ತಮ್ಮ ಅಡುಗೆ ಮನೆಯ ಕಿಟಕಿಯಿಂದ ಪಾರಿವಾಳಗಳಿಗೂ ಊಟವನ್ನು ಹಾಕುತ್ತಾರೆ. ಇದರ ಜೊತೆಗೆ ಅವರ ನಿತ್ಯದ ರೊಟೀನ್‌ಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.