Don't Miss!
- Sports
ಕಿರಿಯ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವು ನಮಗೆ ದೊಡ್ಡ ಸ್ಫೂರ್ತಿ ನೀಡಿದೆ; ಹರ್ಮನ್ಪ್ರೀತ್ ಕೌರ್
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಂದ್ರ ವೇದಾಂತ್ ಎದುರು ಸಿಕ್ಕಿ ಹಾಕಿಕೊಂಡಳಾ: ವೈದೇಹಿ ಯಾರೆಂದು ತಿಳಿಯಿತಾ?
ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ಕೈಗೆ ಪತ್ರವೊಂದು ಸಿಕ್ಕಿದೆ. ಈ ಅನಾಮಿಕ ಪತ್ರದಿಂದ ವೇದಾಂತ್ ಗೊಂದಲದಲ್ಲಿ ಸಿಲುಕಿದ್ದಾನೆ. ತನ್ನ ತಾಯಿಯ ಬಗ್ಗೆ ಅನುಮಾನ ಪಡುವ ಸ್ಥಿತಿ ಬಂದಿದೆ.
ಹೀಗಾಗಿ ವೇದಾಂತ್ ಮನೆಗೆ ಬಂದು ಅಜ್ಜಿಯ ಬಳಿ ತನಗೆ ಚಿಕ್ಕವನಿದ್ದಾಗ ಏನಾಗಿತ್ತು ಎಂಬ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಅಜ್ಜಿ ಮತ್ತು ವೈದೇಹಿ ಸೇರಿ ಪತ್ರ ಬರೆದ ಕಾರಣ, ವೇದಾಂತ್ ಚಿಕ್ಕವನಿದ್ದಾಗ ಏನಾಗಿತ್ತು ಎಂಬುದನ್ನು ಹೇಳುತ್ತಾಳೆ.
Kannada
TV
Serials
TRP
Rating
'ಪುಟ್ಟಕ್ಕನ
ಮಕ್ಕಳಿ'ಗೆ
ಸರಿ
ಸಮನವಾಗಿ
ಸವಾಲೊಡ್ಡುತ್ತಿದೆ
'ಗಟ್ಟಿಮೇಳ'!
ಇದೆಲ್ಲವನ್ನೂ ಕೇಳಿದ ವೇದಾಂತ್ ವೈದೇಹಿ ಎಂದುಕೊಂಡು ಮನೆಗೆ ಬಂದಿರುವವಳು ನಿಜಕ್ಕೂ ತನ್ನ ತಾಯಿ ಹೌದೋ ಅಲ್ಲವೋ ಎಂದು ಪರೀಕ್ಷೆ ಮಾಡಲು ಮುಂದಾಗಿದ್ದಾನೆ. ಚಂದ್ರಾ ಬಳಿ ಹೋಗಿ ತನಗೆ ಚಿಕ್ಕವನಿದ್ದಾಗ ಏನಾಗಿತ್ತು ಎಂದು ಕೇಳಿದ್ದಾನೆ.

ಸುಹಾಸಿನಿ ಪ್ಲಾನ್ ಸಕ್ಸಸ್
ವೇದಾಂತ್ ಕೇಳಿದ ಪ್ರಶ್ನೆಗೆ ಮೊದಲು ತಡವರಿಸಿದ ಚಂದ್ರ ಸುಹಾಸಿನಿ ಬಂದ ಮೇಲೆ ಉತ್ತರ ಹೇಳುತ್ತಾಳೆ. ಅಜ್ಜಿ ಹೇಳಿದ್ದನ್ನೇ ಚಂದ್ರ ಕೂಡ ಹೇಳುತ್ತಾಳೆ. ಇದರಿಂದ ವೇದಾಂತ್ ಚಂದ್ರಾಳೇ ತನ್ನ ತಾಯಿ ವೈದೇಹಿ ಎಂದು ನಂಬುತ್ತಾನೆ. ಆದರೆ, ವೈದೇಹಿಗೆ ಚಂದ್ರಳಿಗೆ ಸತ್ಯ ಹೇಗೆ ಗೊತ್ತಾಯ್ತು ಎಂಬ ಶಾಕ್ ಆಗುತ್ತದೆ. ಇನ್ನು ಸುಹಾಸಿನಿ ಅಜ್ಜಿ ಹೇಳುತ್ತಿದ್ದ ಕಥೆಯನ್ನು ಕೇಳಿಸಿಕೊಂಡು ಚಂದ್ರಳನ್ನು ಪ್ರಶ್ನೆ ಮಾಡಬಹುದು ಎಂದು ತಿಳಿದು ಎಲ್ಲವನ್ನೂ ಹೇಳಿಕೊಟ್ಟಿರುತ್ತಾಳೆ. ಹಾಗಾಗಿ ಚಂದ್ರ ತನಗೆ ಗೊತ್ತಿಲ್ಲದ ಸತ್ಯವನ್ನು ಸುಹಾಸಿನಿಯಿಂದ ತಿಳಿದುಕೊಂಡು ಹೇಳುತ್ತಾಳೆ.

ಸತ್ಯ ಒಪ್ಪಿಕೊಂಡಳಾ ವೈದೇಹಿ
ವೈದೇಹಿ ಬೇಸರದಿಂದ ಅಡುಗೆ ಮನೆಗೆ ಹೋಗುತ್ತಾಳೆ. ಚಂದ್ರಾಳಿಗೆ ಈ ಸತ್ಯ ಹೇಗೆ ಗೊತ್ತಾಗಿರಬಹುದು ಎಂದು ಯೋಚಿಸುತ್ತಿರುತ್ತಾಳೆ. ಇದೇ ವೇಳೆಗೆ ಬರುವ ಸುಹಾಸಿನಿ ವೈದೇಹಿಯನ್ನು ಕೇಳುತ್ತಾಳೆ. ವೇದಾಂತ್ ತಲೆಗೆ ನೀನೇನಾ ಹುಳ ಬಿಟ್ಟಿದ್ದು, ಹೀಗೆಲ್ಲಾ ಮಾಡಿದರೆ, ನಿನ್ನ ಕಣ್ಣ ಮುಂದೆಯೇ ನಿನ್ನ ಮಕ್ಕಳು ಕಷ್ಟ ಅನುಭವಿಸುತ್ತಾರೆ. ಅಗ್ನಿ ನೀನಂದುಕೊಂಡ ಹಾಗೆ ಅಲ್ಲ. ಅವನು ತುಂಬಾ ಕೆಟ್ಟವನು. ಇದೇ ಕೊನೆಯ ಸಲ ವಾರ್ನಿಂಗ್ ಕೊಡುತ್ತಿದ್ದೀನಿ, ನೀನೇ ವೈದೇಹಿ ಎಂಬ ಸತ್ಯವನ್ನು ನಿನ್ನಲ್ಲೇ ಮುಚ್ಚಿಕೊಂಡರೆ ಸರಿ ಎಂದು ಹೇಳುತ್ತಾಳೆ. ವೈದೇಹಿ ತಾನೇ ಪತ್ರ ಬರೆದಿದ್ದು ಎಂದು ಒಪ್ಪಿಕೊಳ್ಳುತ್ತಾಳೆ.

ವೇದಾಂತ್ ಮನದಲ್ಲೇನೋ ಗೊಂದಲ
ಇನ್ನು ಸುಹಾಸಿನಿ ವೇದಾಂತ್ ಕೇಳಿದ ಕೂಡಲೇ ಹೇಳದೇ, ತಡವರಿಸಿದ್ದಕ್ಕಾಗಿ ಬೈಯುತ್ತಾಳೆ. ನಾನು ಹೇಳಿಕೊಟ್ಟ ಮೇಲೂ ನೀನು ಹೀಗೆ ತಡವರಿಸಿದರೆ ವೇದಾಂತ್ ಗೆ ಅನುಮಾನ ಬರುತ್ತೆ. ಸ್ವಲ್ಪ ಸೀರಿಯಸ್ ಆಗಿರುವುದನ್ನು ಕಲಿತುಕೋ ಎಂದು ಬುದ್ಧಿವಾದ ಹೇಳುತ್ತಾಳೆ. ಇನ್ನು ವೇದಾಂತ್ ಗೆ ಅನುಮಾನ ಪರಿಹಾರವಾದರೂ ಕೂಡ ಮನದಲ್ಲಿ ಗೊಂದಲವಿರುತ್ತದೆ. ಈ ಪತ್ರ ಬರೆದವರು ಯಾರು. ಈ ವಿಚಾರವನ್ನು ಯಾಕೆ ಬರೆದರು ಎಂಬ ಅನುಮಾನ ವೇದಾಂತ್ ಮನದಲ್ಲಿ ಮೂಡಿರುತ್ತದೆ. ಆದರೆ, ಅಮೂಲ್ಯ ವೇದಾಂತ್ ಗೆ ಸಮಾಧಾನ ಹೇಳಿ, ನಿಶ್ಚಿಂತೆಯಿಂದ ಇರಲು ಹೇಳುತ್ತಾಳೆ.

ಚಂದ್ರಾ ಮೇಲೆ ಅನುಮಾನ ಪಟ್ಟ ಅಮೂಲ್ಯ
ಇನ್ನು ಅಮೂಲ್ಯಗೆ ಈ ಹಿಂದೆಯೇ ಇಂತಹ ಅನಾಮದೇಯ ಪತ್ರ ಬಂದಿರುತ್ತದೆ. ಇದೀಗ ವೇದಾಂತ್ ಗೆ ಬಂದ ಪತ್ರವನ್ನು ನೋಡಿ ಶಾಕ್ ಆಗುತ್ತಾಳೆ. ಎರಡೂ ಪತ್ರವನ್ನು ಒಟ್ಟಿಗೆ ಇಟ್ಟು ನೋಡುತ್ತಾಳೆ. ಇವರು ನಮಗೇನೋ ಹೇಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನಮಗೆ ಅರ್ಥ ಆಗುತ್ತಿಲ್ಲ. ಇವರ ಪ್ರಕಾರ ಈಗ ಇರುವ ವೈದೇಹಿ ಅವರು ಸುಳ್ಳು ಎಂದು ಯೋಚಿಸುತ್ತಾಳೆ. ಆಗ ಚಂದ್ರ ಮತ್ತು ಸುಹಾಸಿನಿ ಬಗ್ಗೆ ಯೋಚಿಸಿದಾಗ, ಒಮ್ಮೆ ಸುಹಾಸಿನಿ ಚಂದ್ರ ಎಂದು ವೈದೇಹಿಯನ್ನು ಕರೆದದ್ದು ನೆನಪಾಗುತ್ತದೆ. ಅಮೂಲ್ಯ ವೈದೇಹಿಯನ್ನು ಹುಡುಕುತ್ತಾಳಾ ಕಾದು ನೋಡಬೇಕಿದೆ.