Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Gattimela: ವೇದಾಂತ್ ಇಂದ ಎಸ್ಕೇಪ್ ಆದ್ನಾ ವಿಲನ್ ಅಗ್ನಿ..?
'ಗಟ್ಟಿಮೇಳ' ಧಾರಾವಾಹಿಯಲ್ಲಿ ವೇದಾಂತ್, ವೈದೇಹಿ ಹೆಸರು ಹೇಳಿಕೊಂಡು ಬಂದಿರುವ ಚಂದ್ರಾಳ ಬಣ್ಣ ಬಯಲು ಮಾಡಲು ದೊಡ್ಡ ಪ್ಲ್ಯಾನ್ ಮಾಡುತ್ತಾನೆ. ಇದಕ್ಕಾಗಿ ಪ್ರಜ್ವಲ್‌ಗೆ ಡಿಟೆಕ್ಟಿಂಗ್ ಕೆಲಸವನ್ನೂ ಕೊಟ್ಟಿರುತ್ತಾನೆ.
ಈ ಕಾರಣಕ್ಕಾಗಿಯೇ ವೈಜಯಂತಿ ಹೆಸರಿನಲ್ಲಿ ಬಂದಿರುವ ವೈದೇಹಿಯನ್ನು ವೇದಾಂತ್ ಆಫೀಸಿಗೆ ಕಳಿಸಿರುತ್ತಾನೆ. ಈ ವಿಚಾರ ತಿಳಿದು ಅಜ್ಜಿ, ವೇದಾಂತ್ ಜೊತೆಗೆ ಜಗಳ ಮಾಡುತ್ತಾಳೆ. ವಿಕ್ಕಿ ಕೂಡ ಬೇಸರ ಮಾಡಿಕೊಳ್ಳುತ್ತಾನೆ.
Lakshana:
ನಕ್ಷತ್ರಳನ್ನು
ಸೊಸೆ
ಎಂದು
ಒಪ್ಪಿಕೊಂಡ
ಶಕುಂತಲಾ
ದೇವಿ
ಮನೆಯಲ್ಲಿ ನಮ್ಮ ಮಾತನ್ನೂ ಕೇಳದೇ ನಿನ್ನ ಆಸ್ತಿಯನ್ನು ಅಮ್ಮನ ಹೆಸರಿಗೆ ಬರೆದಿದ್ದು ತಪ್ಪು ಎಂದು ಹೇಳುತ್ತಾನೆ. ಅದಕ್ಕೆ ವೇದಾಂತ್ ಸ್ವಲ್ಪ ದಿನ ಇರು ಎಲ್ಲಾ ನಿನಗೇ ಗೊತ್ತಾಗುತ್ತೆ ಎಂದು ಸಮಾಧಾನ ಮಾಡುತ್ತಾನೆ.

ಬೆಣ್ಣೆ ಹಚ್ಚಿದ ಅಮೂಲ್ಯ, ವೇದಾಂತ್
ಆಗ ಸುಹಾಸಿನಿಗೆ ಅನುಮಾನ ಬರುತ್ತದೆ. ಚಂದ್ರಾ ಬಗ್ಗೆ ವೇದಾಂತ್‌ಗೆ ಡೌಟ್ ಬಂದಿದೆಯಾ ಎಂದು ಗೆಸ್ ಮಾಡುತ್ತಾಳೆ. ಆದರೆ ಹೆಚ್ಚಿಗೆ ಯೋಚಿಸುವುದಿಲ್ಲ. ಇನ್ನು ವೇದಾಂತ್ ಪವರ್ ಆಫ್ ಅಟಾರ್ನಿಯ ಪೇಪರ್‌ಗಳನ್ನು ತಂದು ಚಂದ್ರಾ ಕೈಗೆ ಕೊಡುತ್ತಾನೆ. ಚಂದ್ರಾ ನೀನೆಷ್ಟು ಒಳ್ಳೆಯ ಮಗ. ನಿನ್ನಂತಹ ಮಕ್ಕಳಿದ್ದರೆ, ಯಾರೂ ವೃದ್ಧಾಶ್ರಮಕ್ಕೆ ಹೋಗುವ ಪರೀಸ್ಥಿತಿಯೇ ಬರೋದಿಲ್ಲ ಎಂದು ಹೇಳುತ್ತಾಳೆ. ಇದಕ್ಕೆ ವೇದಾಂತ್ ಮತ್ತು ಅಮೂಲ್ಯ ಚಂದ್ರಾಳಿಗೆ ಬೆಣ್ಣೆ ಹಚ್ಚುವ ರೀತಿ ಮಾತನಾಡುತ್ತಾರೆ.

ಚಂದ್ರಾ ಹೊಸ ಪ್ಲ್ಯಾನ್ ಫ್ಲಾಪ್
ವೇದಾಂತ್ ಆಸ್ತಿಯ ಸಂಪೂರ್ಣ ಹಕ್ಕನ್ನು ವೈದೇಹಿ ಹೆಸರಿಗೆ ಬರೆಯಲಾಗಿರುತ್ತದೆ. ಇದರಿಂದ ಖುಷಿ ಪಡುವ ಚಂದ್ರಕಲಾ ಈ ವಿಚಾರವನ್ನು ತೇಜಸ್ ಮತ್ತು ಅಗ್ನಿ ಜೊತೆಗೆ ಹಂಚಿಕೊಳ್ಳುತ್ತಾರೆ. ಈ ಸಂತಸವನ್ನು ಸೆಲಬ್ರೇಟ್ ಮಾಡಲೆಂದೇ ಪಾರ್ಟಿ ಕೂಡ ಅರೇಂಜ್ ಮಾಡಿರುತ್ತಾರೆ. ಡುಪ್ಲಿಕೇಟ್ ವೈದೇಹಿ ಅಲಿಯಾಸ್ ಚಂದ್ರಕಲಾ, ತೇಜಸ್ ಮತ್ತು ಅಗ್ನಿ ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಿರುತ್ತಾರೆ. ಚಂದ್ರಾ ಮನೆಯಿಂದ ಎಲ್ಲರನ್ನೂ ಆಚೆ ಹಾಕಿ ಆ ಮನೆಯಲ್ಲಿ ರಾಣಿಯಂತೆ ಬದುಕಬೇಕು ಎಂದು ಪ್ಲ್ಯಾನ್ ಮಾಡುತ್ತಿರುತ್ತಾರೆ.

ಸುಹಾಸಿನಿ ಕಾವಲು ಕಾದ ಅಮೂಲ್ಯ
ಈ ಬಗ್ಗೆ ಮಾಹಿತಿ ತಿಳಿದು, ರೆಡ್ ಹ್ಯಾಂಡ್ ಆಗಿ ಹಿಡಿಯಬೇಕು ಎಂದು ವೇದಾಂತ್, ವಿಕ್ಕಿ, ಅಮೂಲ್ಯ ರೆಡಿಯಾಗಿರುತ್ತಾರೆ. ಆದರೆ, ಸುಹಾಸಿನಿ ಬೇರೆ ಏನಾದರೂ ಪ್ಲ್ಯಾನ್ ಮಾಡಬಹುದು ಎಂಬ ಕಾರಣಕ್ಕೆ ಅಮೂಲ್ಯ ಮನೆಯಲ್ಲೇ ಉಳಿದುಕೊಳ್ಳುತ್ತಾಳೆ. ವಿಕ್ಕಿ ಮತ್ತು ವೇದಾಂತ್ ಪಾರ್ಟಿ ನಡೆಯುತ್ತಿರುವ ಜಾಗಕ್ಕೆ ಹೋಗುತ್ತಾರೆ. ಅಲ್ಲಿ ತೇಜಸ್ ಮತ್ತು ಚಂದ್ರಕಲಾ ಇರುವುದನ್ನು ನೋಡುತ್ತಾರೆ. ಆದರೆ ಅಗ್ನಿ ವಾಶ್ ರೂಮ್‌ಗೆ ಹೋಗಿರುತ್ತಾನೆ.

ಅಗ್ನಿ ಬಗ್ಗೆ ವೇದಾಂತ್‌ಗೆ ಗೊತ್ತಾಯ್ತಾ..?
ಇನ್ನು ವೇದಾಂತ್, ವಿಕ್ಕಿ ಪಾರ್ಟಿ ನಡೆಯುತ್ತಿರುವ ಸ್ಥಳಕ್ಕೆ ಬರುತ್ತಾರೆ. ಇಬ್ಬರನ್ನೂ ನೋಡಿದ ತೇಜಸ್ ಮತ್ತು ಚಂದ್ರಕಲಾ ಶಾಕ್ ಆಗುತ್ತಾರೆ. ವೈಜಯಂತಿ ಮತ್ತು ಆದ್ಯ ಕೂಡ ಬರುತ್ತಾರೆ. ವೇದಾಂತ್ ಇಬ್ಬರ ಬಣ್ಣವನ್ನು ಬಯಲು ಮಾಡುತ್ತಾನೆ. ಆ ಪವರ್ ಆಫ್ ಅಟಾರ್ನಿ ಪೇಪರ್‌ಗಳಲ್ಲಿ ವೇದಾಂತ್ ಸಹಿ ಒರಿಜಿನಲ್ ಅಲ್ಲ ಎಂದೂ ಕೂಡ ಹೇಳುತ್ತಾನೆ. ಇಬ್ಬರನ್ನು ಜೈಲಿಗೆ ಹಾಕುವುದಾಗಿ ಹೇಳಿ, ನಿಮ್ಮ ಬಾಸ್ ಯಾರು ಎಂದು ಕೇಳುತ್ತಾನೆ. ಇದನ್ನೆಲ್ಲಾ ದೂರದಲ್ಲಿ ನಿಂತು ನೋಡುತ್ತಿದ್ದ ಅಗ್ನಿ, ಚಂದ್ರಕಲಾಗೆ ಫೋನ್ ಮಾಡಿದಾಗ ವೇದಾಂತ್ ರಿಸೀವ್ ಮಾಡುತ್ತಾನೆ. ಅಗ್ನಿ ಬೆದರಿಕೆ ಹಾಕಲು ಮುಂದಾಗುತ್ತಾನೆ. ಆದರೆ, ಅಗ್ನಿ ಸಿಕ್ಕಿ ಬೀಳುತ್ತಾನಾ ಎಂಬ ಕುತೂಹಲ ಈಗ ಮೂಡಿದೆ.