Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Gattimela: ವೈದೇಹಿ ವಿರುದ್ಧ ಪ್ಲ್ಯಾನ್ ಮಾಡಿದ ಅಗ್ನಿ ಮತ್ತು ಚಂದ್ರ
'ಗಟ್ಟಿಮೇಳ' ಧಾರಾವಾಹಿಯಲ್ಲಿ ವೈದೇಹಿ ಎಂದು ಸುಳ್ಳು ಹೇಳಿಕೊಂಡು ಬಂದಿರುವ ಚಂದ್ರ ಬಗ್ಗೆ ವೇದಾಂತ್ ಬಳಿ ಹೇಳಲು ಹೋಗಿ ಅಮೂಲ್ಯ ತಾನೇ ಕೆಟ್ಟವಳಾಗುತ್ತಾಳೆ. ವೇದಾಂತ್ ಕೈ ಎತ್ತಿದ ಎಂದು ಮನೆ ಬಿಟ್ಟು ಹೋಗಿರುತ್ತಾಳೆ.
ಅಮೂಲ್ಯ ಮತ್ತು ವೇದಾಂತ್ ಇಬ್ಬರನ್ನೂ ಒಂದು ಮಾಡಲು ಮನೆಯವರೆಲ್ಲಾ ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಆಗ ಪರಿಮಳ ಬೇಕಂತಲೇ ಎದೆನೋವು ಎಂದು ನಾಟಕವಾಡುತ್ತಾಳೆ. ಇದು ಅಮೂಲ್ಯನಿಗೆ ತಿಳಿದು ಕೋಪ ಮಾಡಿಕೊಳ್ಳುತ್ತಾಳೆ.
ರಾಮಾಚಾರಿ:
ಚಾರುವನ್ನು
ಮನೆಗೆ
ಕರೆ
ತಂದ
ರಾಮಾಚಾರಿ!
ಮುಂದೇನು?
ನಂತರ ಅಮೂಲ್ಯ ಮತ್ತು ವೇದಾಂತ್ ಇಬ್ಬರು ಸಮಾಧಾನವಾಗಿ ಮಾತನಾಡುತ್ತಾರೆ. ಆಗ ಅಮೂಲ್ಯ, ಚಂದ್ರಳ ಫೋಟೋ ಹಾಗೂ ವೀಡಿಯೋವನ್ನು ತೋರಿಸಿ ನಡೆದ ಘಟನೆಯನ್ನು ವಿವರಿಸುತ್ತಾಳೆ. ನಂತರ ಇಬ್ಬರೂ ಒಂದಾಗುತ್ತಾರೆ.

ಬುದ್ಧಿ ಹೇಳಿದ ವೈದೇಹಿ
ವೇದಾಂತ್, ಅಮೂಲ್ಯಳನ್ನು ಮನೆಗೆ ಕರೆದುಕೊಂಡು ಬರುತ್ತಾನೆ. ಆಗ ಮನೆಯವರೆಲ್ಲಾ ಖುಷಿ ಪಡುತ್ತಾರೆ. ಇನ್ಮುಂದೆ ಕಿತ್ತಾಡಬೇಡಿ ಎಂದು ಹೇಳುತ್ತಾರೆ. ಇನ್ನು ವೈದೇಹಿ ಬಂದು ವೇದಾಂತ್‌ಗೂ ಅಮೂಲ್ಯಳಿಗೂ ಬುದ್ಧಿ ಹೇಳುತ್ತಾಳೆ. ಹೀಗೆ ಬೇಡದ ವಿಚಾರಕ್ಕೆ ಇಬ್ಬರು ಕಿತ್ತಾಡಿಕೊಂಡು ನಾಲ್ಕು ಜನರ ಎದುರು ಚಿಕ್ಕವರಾಗಬೇಡಿ. ಇಬ್ಬರೂ ಸದಾ ಒಗ್ಗಟ್ಟಿನಿಂದ ಇರಿ. ಗಂಡ ಹೆಂಡತಿ ಇನ್ನೊಬ್ಬರ ಮುಂದೆ ಒಬ್ಬರನ್ನೊಬ್ಬರು ಬಿಟ್ಟುಕೊಡಬೇಡಿ ಎಂದು ಹೇಳುತ್ತಾರೆ. ಅಮೂಲ್ಯ, ವೇದಾಂತ್ ಒಪ್ಪಿಕೊಳ್ಳುತ್ತಾರೆ.

ವೇದಾಂತ್‌ಗೆ ಜುಮುಕಿ ಕೊಟ್ಟ ಕಾಂತ
ಇನ್ನು ವೇದಾಂತ್ ರೂಮಿನಲ್ಲಿ ಒಬ್ಬನೇ ಯೋಚನೆ ಮಾಡುತ್ತಿರುತ್ತಾನೆ. ಆಗ ಅಮೂಲ್ಯ ಬಂದು ನಾನು ಸತ್ಯ ಹೇಳಿದ ಮೇಲೂ ನೀನು ಸುಮ್ಮನೆ ಯಾಕೆ ಕೂತಿದ್ದೀಯಾ.? ವೈದೇಹಿ ಎಂದು ಹೇಳಿಕೊಂಡು ಮನೆಗೆ ಬಂದಿರುವ ಆ ಹೆಂಗಸನ್ನು ಮನೆಯಿಂದ ಹೊರಗೆ ದಬ್ಬುತ್ತೀಯಾ ಎಂದು ಕೊಂಡಿದ್ದೆ ಎಂದು ಹೇಳುತ್ತಾಳೆ. ಆಗ ವೇದಾಂತ್, ಅವರನ್ನ ಮನೆಯಿಂದ ಆಚೆ ಹಾಕುವುದು ಕಷ್ಟವಲ್ಲ. ಬದಲಿಗೆ, ಅವರು ಯಾರು, ನಮ್ಮ ಮನೆಗೆ ಅಮ್ಮ ಎಂದು ಹೇಳಿಕೊಂಡು ಬಂದಿರುವುದು ಯಾಕೆ, ಅವರ ಹಿಂದೆ ಯಾರಿದ್ದಾರೆ, ಅವರೇ ನಮ್ಮ ಅಮ್ಮ ಎಂದು ನಂಬಿಸಲು ಸಿಕ್ಕಿದ ಸಾಕ್ಷಿಗಳು ಹೇಗೆ ತಯಾರಾದವು ಎಂಬ ಎಲ್ಲಾ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳುತ್ತಾನೆ. ಇನ್ನು ಆಫೀಸ್ ಕೆಲಸ ಮಾಡುವಾಗ ಕಾಂತ, ಜುಮುಕಿಯನ್ನು ತೋರಿಸುತ್ತಾನೆ. ಇದು ಎಲ್ಲಿ ಸಿಕ್ಕಿತು ಎಂದು ವೇದಾಂತ್ ಮತ್ತು ಸಾರ್ಥಕ್ ಕೇಳಿದ್ದಕ್ಕೆ ಅವತ್ತು ತೇಜಸ್ ಅವರನ್ನ ಹುಡುಕಿಕೊಂಡು ಹೋದ ಜಾಗದಲ್ಲಿತ್ತು ಎನ್ನುತ್ತಾನೆ. ಜುಮುಕಿಯನ್ನು ನೋಡಿದ ವೇದಾಂತ್ ಇದನ್ನು ನಾನು ಸುಹಾಸಿನಿ ಅಮ್ಮನಿಗೆ ಗಿಫ್ಟ್ ಕೊಟ್ಟಿದ್ದು ಎನ್ನುತ್ತಾನೆ.

ಕದ್ದು ಆಲಿಸಿದ ಚಂದ್ರ
ಇತ್ತ ಅಜ್ಜಿ ಮತ್ತು ವೈದೇಹಿ ರೂಮಿನಲ್ಲಿ ಕೂತು ಮಾತನಾಡುತ್ತಿರುತ್ತಾರೆ. ಅಮೂಲ್ಯ ಮತ್ತು ವೇದಾಂತ್ ಒಂದಾದ ವಿಚಾರವನ್ನು ಹೇಳುತ್ತಾರೆ. ಆಗ ಅಜ್ಜಿ ಆ ಚಂದ್ರಗೆ ಒಂದು ಗತಿ ಕಾಣಿಸಬೇಕು. ಮೊದಲು ಅವಳನ್ನು ಈ ಮನೆಯಿಂದ ಹೊರಗೆ ಹಾಕಬೇಕು ಎಂದು ಹೇಳುತ್ತಾರೆ. ಆಗ ವೈದೇಹಿ, ಚಂದ್ರಳ ಬಣ್ಣವನ್ನು ಆದಷ್ಟು ಬೇಗ ಕಳಚುವಂತೆ ಮಾಡಬೇಕು. ಇಲ್ಲದೇ ಹೋದರೆ, ಈ ಮನೆಯನ್ನು ಚಿದ್ರ ಚಿದ್ರ ಮಾಡುತ್ತಾಳೆ ಎಂದು ಹೇಳುತ್ತಾಳೆ. ಇದನ್ನು ಕದ್ದು ಕೇಳಿಸಿಕೊಂಡ ಚಂದ್ರ, ವೈದೇಹಿ ಮತ್ತು ಅಮೂಲ್ಯ ಕಥೆಯನ್ನು ಮುಗಿಸಬೇಕು. ಇಲ್ಲದಿದ್ದ ನನ್ನ ಕಥೆ ಅಷ್ಟೇ ಎಂದು ತನಗೆ ತಾನೇ ಹೇಳಿಕೊಳ್ಳುತ್ತಾಳೆ.

ಅಗ್ನಿಗೆ ಫೋನ್ ಮಾಡಿ ಚಾಡಿ ಹೇಳಿದ ಚಂದ್ರ
ಚಂದ್ರ, ಅಗ್ನಿಗೆ ಫೋನ್ ಮಾಡಿ ಮನೆಯಲ್ಲಿ ನಡೆದ ಘಟನೆಗಳನ್ನೆಲ್ಲಾ ವಿವರಿಸುತ್ತಾಳೆ. ವೈದೇಹಿ ತನ್ನ ವಿರುದ್ಧ ಸಂಚು ಮಾಡುತ್ತಿರುವುದನ್ನು ಹೇಳುತ್ತಾಳೆ. ಇದರಿಂದ ತನಗೆ ಅಲ್ಲಿರಲು ಆಗುತ್ತಿಲ್ಲ ಎಂದಾಗ ಅಗ್ನಿ, ವೈದೇಹಿ ಆ ಮನೆಯಿಂದ ಹೊರಗೆ ಹೋಗುತ್ತಾಳೆ. ವೈದೇಹಿ ಅನ್ನು ಮನೆಯಿಂದ ವೇದಾಂತ್ ಆಚೆ ಹಾಕುತ್ತಾನೆ ನೋಡುತ್ತಿರು ಎನ್ನುತ್ತಾನೆ. ವೈದೇಹಿ ವಿರುದ್ಧ ಅಗ್ನಿ ಮಾಡುವ ಪ್ಲ್ಯಾನ್ ವರ್ಕೌಟ್ ಆಗುತ್ತಾ ಎಂದು ಕಾದು ನೋಡಬೇಕಿದೆ.