»   » ಸೀಸನ್ -2 ನಲ್ಲಿ ಮತ್ತೆ ಪ್ಯಾಟೆಗೆ ಬಂದಿಳಿದ ಹಳ್ಳಿ ಹೈಕಳು

ಸೀಸನ್ -2 ನಲ್ಲಿ ಮತ್ತೆ ಪ್ಯಾಟೆಗೆ ಬಂದಿಳಿದ ಹಳ್ಳಿ ಹೈಕಳು

Posted By:
Subscribe to Filmibeat Kannada

ಸುವರ್ಣ ವಾಹಿನಿಯಲ್ಲಿ ಈ ಮೊದಲು ಪ್ರಸಾರವಾಗಿದ್ದ 'ಹಳ್ಳಿ ಹೈದ ಪ್ಯಾಟೆಗ್ ಬಂದ', ಮೊದಲ ಸೀಸನ್ ನೀವು ನೋಡಿದ್ರಿ ತಾನೇ. ಆದರೆ ಅದರಲ್ಲಿ ವಿನ್ನರ್ ಆಗಿದ್ದ ರಾಜೇಶ್ ಬದುಕು ದುರಂತ ಅಂತ್ಯ ಕಂಡಿದ್ದು ಬೇಸರದ ಸಂಗತಿ.

ಅದೇನೇ ಇರಲಿ, ಇದೀಗ ಹೊಸದಾಗಿ ಅದೇ ಕಾರ್ಯಕ್ರಮದ ಮುಂದುವರಿದ ಭಾಗ ಸೀಸನ್ 2, ಇದೇ ಜುಲೈ 13 ರಿಂದ ಪ್ರಾರಂಭವಾಗುತ್ತಿದೆ. ಸುವರ್ಣ ಮನೋರಂಜನಾ ಚಾನಲ್ ನಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30 ಕ್ಕೆ ಪ್ರಸಾರವಾಗುತ್ತದೆ.['ಹಳ್ಳಿ ಹೈದ' ರಾಜೇಶ್ ವಿಧಿ ವಿಲಾಸಕ್ಕೆ ಬಲಿಯಾದನೇ?]

ಪಕ್ಕಾ ಹಳ್ಳಿಯಲ್ಲೇ ಬೆಳೆದ 10 ಮಂದಿ ಮುಗ್ದ ಹಳ್ಳಿ ಹೈದರು ಈ ಶೋನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ. ಅವರಿಗೆ 10 ಮಂದಿ ಸಿಟಿ ಹುಡುಗಿಯರನ್ನು ಮಾರ್ಗದರ್ಶಕರಾಗಿ ನೇಮಿಸಲಾಗುತ್ತದೆ. ಇವರಿಗೆ ನಗರದ ಜೀವನ ಶೈಲಿ, ಆಹಾರ, ಉಡುಪು ಮತ್ತು ನಡೆ ನುಡಿಗಳು ಸೇರಿದಂತೆ ಹಲವು ಟಾಸ್ಕ್ ಗಳನ್ನು ನೀಡಲಾಗುತ್ತದೆ.

Halli Hyda Pyateg Banda : Season 2

ಪ್ರತೀ ಶುಕ್ರವಾರ ಎಲಿಮಿನೇಶನ್ ಸುತ್ತು ಇರುವುದರಿಂದ ಟಾಸ್ಕ್ ಸೋತವರು ಶೋ ದಿಂದ ಹೊರ ನಡೆಯಬೇಕಾಗುತ್ತದೆ. 'ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್ ಸೀಸನ್ -3' ಕಾರ್ಯಕ್ರಮದ ನಿರೂಪಣೆ ಮಾಡಿದ ಸಂತೋಷ್ ಈ ಬಾರಿ 'ಹಳ್ಳಿ ಹೈದ ಪ್ಯಾಟೆಗ್ ಬಂದ-2' ನಿರೂಪಣೆ ಮಾಡುತ್ತಿದ್ದಾರೆ.

ಈಗಾಗಲೇ ರಿಯಾಲಿಟಿ ಶೋ ನ ಪ್ರೋಮೋ ಬಿಡುಗಡೆಯಾಗಿದ್ದು ತುಂಬಾ ಡಿಫರೆಂಟಾಗಿ ಮೂಡಿಬಂದಿದೆ. ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಹಳ್ಳಿ ಹೈದರನ್ನು ಬರಮಾಡಿಕೊಂಡ ಕಿರುತೆರೆ ಇತಿಹಾಸದಲ್ಲಿ ದಾಖಲೆ ಬರೆಯಲು ಹೊರಟಿದೆ ಈ ರಿಯಾಲಿಟಿ ಶೋ. ಮುಂದೇನಾಗುತ್ತೆ ಅನ್ನೋದನ್ನ ನೋಡಲು ಪ್ರತೀದಿನ ಸುವರ್ಣ ವಾಹಿನಿ ನೋಡಿ.

English summary
Suvarna channel is set to launch a new reality show 'Halli Hyda Pyateg Banda Season 2'. The show will be telecast from July 13th at 7.30 pm on Monday to Friday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada