»   » ಹರಹರ ಮಹಾದೇವ ವಿಶೇಷ: ಕಾರ್ತಿಕೇಯನಿಂದ ತಾರಕಾಸುರನ ಸಂಹಾರ

ಹರಹರ ಮಹಾದೇವ ವಿಶೇಷ: ಕಾರ್ತಿಕೇಯನಿಂದ ತಾರಕಾಸುರನ ಸಂಹಾರ

Written By:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿಯ ಪ್ರತಿಷ್ಠಿತ ಧಾರವಾಹಿಯಾಗಿ ವೀಕ್ಷಕರ ಮನಗೆದ್ದಿರುವ 'ಹರ ಹರ ಮಹಾದೇವ' ಧಾರಾವಾಹಿಯು ಮತ್ತೊಂದು ಪ್ರಮುಖ ಘಟ್ಟವನ್ನು ತಲುಪಿದೆ.[ಹರಹರ ಮಹಾದೇವ ವಿಶೇಷ: ಕಾರ್ತಿಕೇಯನ ಜನ್ಮ ವೃತ್ತಾಂತ]

hara hara mahadeva 1

ಸ್ಟಾರ್ ಸುವರ್ಣ ವಾಹಿನಿಯ 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಈ ಹಿಂದೆ ಪಾರ್ವತಿ ಮಹಾದೇವರ ವಿವಾಹದ ನಂತರ ಸುಬ್ರಮಣ್ಯನ ಜನ್ಮ ವೃತ್ತಾಂತವನ್ನ ಕಣ್ತುಂಬಿಕೊಂಡಿದ್ದೀರಿ. ಇದೀಗ ಬಹುಮಯಖ್ಯ ಘಟ್ಟವಾದ ಕಾರ್ತೀಕೇಯನಿಂದ ತಾರಕಾಸುರನ ಸಂಹಾರ ವೃತ್ತಾಂತವನ್ನು ನೋಡುವ ಸಮಯ ಬಂದಿದೆ.[ರಕ್ತಬೀಜಾಸುರನ ಸಂಹಾರಕ್ಕೆ ಪಾರ್ವತಿಯ 'ಭದ್ರಕಾಳಿ' ಅವತಾರ]

hara hara mahadeva 2

ಕಾರ್ತೀಕೇಯನ ಜನನದ ನಂತರದಲ್ಲಿ ಅವನನ್ನು ಕೃತ್ತಿಕೇಯರು ಬೆಳಸುವುದು, ನಂಥರ ಅವನನ್ನು ತಾರಕಾಸುರನ ಸಂಹಾರಕ್ಕೆ ಸಾಕ್ಷಾತ್ ಶಿವನೆ ಅವನನ್ನು ತಯಾರು ಮಾಡುವುದು, ಹೀಗೆ ಹಲವಾರು ಸನ್ನಿವೇಷಗಳು ಈಗಾಗಲೇ ಧಾರವಾಹಿಯಲ್ಲಿ ಪ್ರಸಾರವಾಗಿವೆ. ಬಹುಮುಖ್ಯ ಘಟ್ಟವಾದ ತಾರಕಾಸುರನ ಸಂಹಾರವೂ ಇದೇ ಬುಧವಾರದ ಸಂಚಿಕೆಯಲ್ಲಿ ಪ್ರಾಸಾರವಾಗುತ್ತಿದೆ.

hara hara mahadeva 3

ಶಿವನ ಕುರಿತು ತಪಸ್ಸು ಮಾಡಿ ಶಿವನಿಂದ ಶಿವನ ಮಗನಿಂದಲೇ ತನ್ನ ಸಂಹಾರವಾಗಬೇಕೆಂಬ ವಿಚಿತ್ರ ವರವನ್ನು ಪಡೆದ ನಂತರ ತಾನು ಅಮರನೆಂಬಂತೆ ಮೆರೆದು, ಸತಿಯ ಸಾವಿಗೆ, ನಂತರದಲ್ಲಿ ಪಾರ್ವತಿಗು ಹಲವಾರು ತೊಂದರೆಗಳನ್ನು ಕೊಟ್ಟಿರುತ್ತಾನೆ. ತಾರಕಾಸುರ ಸ್ವರ್ಗವನ್ನು ಆಕ್ರಮಿಸಿ ದೇವತೆಗಳಿಗು ತೊಂದರೆ ನೀಡಿರುತ್ತಾನೆ. ಅವನ ಅಂತ್ಯಗಾಣಿಸುವ ಸಲುವಾಗೆ ಕಾರ್ತಿಕೇಯನ ಜನನವಾಗಿದೆ.

ದೇವತೆಗಳ ಸೇನಾಧಿಪತಿಯಾಗಿ ವಿಷ್ಣುವಿನಿಂದ ನೇಮಕಗೊಂಡಿರುವ ಕಾರ್ತಿಕೇಯ ತಾರಕಾಸುರನ ವ್ಯೂಹವನ್ನು ಭೇದಿಸಿ ಅವನನ್ನು ಸಂಹರಿಸುವ ರೋಚಕ ಸಂಚಿಕೆ ಇದೇ ಬುಧವಾರ ಪ್ರಸಾರವಾಗಲಿದ್ದು, ನೋಡುಗರಿಗೆ ಕಾರ್ತಿಕೇಯನ ಮಹಿಮೆ ಆನಂದವನ್ನುಂಟು ಮಾಡಲಿದೆ.

hara hara mahadeva 4

ಕಾರ್ತಿಕೇಯ ತಾರಕಾಸುರನನ್ನು ಸಂಹಾರ ಮಾಡುವ ರೋಚಕ ಸಂಚಿಕೆಯು ಇದೇ ಬುಧವಾರ [28-12-2016] ರಂದು ರಾತ್ರಿ 7.30 ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

English summary
Episone of Taarkasura slaughter by Karthikeya wil be aired in Star Suvarna Channel's from 'Hara Hara Mahadev' on 28th December at 7.30pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada