»   » ಈ ವಾರದ ವಿಶೇಷ: 'ಮಹಾದೇವ'ನಿಂದ ಚಿತ್ರಾಸುರನ ವಧೆ

ಈ ವಾರದ ವಿಶೇಷ: 'ಮಹಾದೇವ'ನಿಂದ ಚಿತ್ರಾಸುರನ ವಧೆ

Posted By:
Subscribe to Filmibeat Kannada

ಶತಭಿಷನು ಸತಿಯನ್ನು ಮದುವೆಯಾಗಲು ಒಪ್ಪದೇ ಇದ್ದಾಗ, ದಕ್ಷ ಮಹಾರಾಜ ಸತಿಗೆ ಸ್ವಯಂವರ ಏರ್ಪಾಡು ಮಾಡುತ್ತಾರೆ. ಸ್ವಯಂವರದಲ್ಲಿ ಸತಿದೇವಿ, ಮಹಾದೇವನ ವಿಗ್ರಹಕ್ಕೆ ಮಾಲೆ ಹಾಕಿ, ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಈ ನಡುವೆ ಸತಿ ಮತ್ತು ಮಹಾದೇವರ ವಿವಾಹ ಮಹೋತ್ಸವ ಕೂಡ ನೆರವೇರುತ್ತದೆ.

ಸತಿ-ಮಹಾದೇವರ ವಿವಾಹ, ಸತಿಗೆ ವಿದಾಯ ಹೇಳಲು ವಿಜಯಳ ತಯಾರಿ, ಗಣ-ಪ್ರೇತರ ಗಲಾಟೆ ಹೀಗೆ ರೋಚಕ ಸನ್ನಿವೇಶಗಳನ್ನು ಈ ಹಿಂದಿನ ಸಂಚಿಕೆಯಲ್ಲಿ ವೀಕ್ಷಿಸಿದ್ದಾಗಿದೆ.['ಹರ ಹರ ಮಹಾದೇವ': 'ಸತಿ ಸ್ವಯಂವರ'ದಲ್ಲಿ ರೋಚಕ ತಿರುವು]

ಅಂದಹಾಗೆ ಈ ವಾರ ಕೂಡ ದೇವರ ದೇವ 'ಮಹಾದೇವ' ಅವರ ರೋಚಕ ಕಥೆಯನ್ನು ಹೊತ್ತು ತರುತ್ತಿದೆ ನಿಮ್ಮ ನೆಚ್ಚಿನ ಸುವರ್ಣ ವಾಹಿನಿ. ಮುಂದೆ ಓದಿ....

ಸತಿಯ ಕೈಲಾಸ ಪ್ರಯಾಣ

'ಮಹಾದೇವ'ನಿಗೆ ಮತ್ತು ದಕ್ಷ ಮಹಾರಾಜನಿಗೆ ತಾತ್ವಿಕ ಭಿನ್ನಾಭಿಪ್ರಾಯ ಇರುವುದರಿಂದ, ಸತಿ, 'ಮಹಾದೇವ'ನೊಂದಿಗೆ ಕೈಲಾಸಕ್ಕೆ ಹೊರಡಲು ಸಿದ್ಧಳಾಗುತ್ತಾಳೆ.[ಗಣೇಶ ಚತುರ್ಥಿಗೆ "ದೇವರ ದೇವ ಮಹಾದೇವ ಚರಿತ್ರೆ"ಯ ರಸದೌತಣ]

ದಧಿಚಿ ಆಶ್ರಮದಲ್ಲಿ ಆತಿಥ್ಯ

ಮಾರ್ಗ ಮಧ್ಯದಲ್ಲಿ ದಧಿಚಿಯ ಆಶ್ರಮಕ್ಕೆ ತೆರಳಿ ಅಲ್ಲಿ ಋಷಿ ಮುನಿಯ ಆತಿಥ್ಯವನ್ನು ಸ್ವೀಕರಿಸಿ, ನಂತರ ಅಥರ್ವ ಋಷಿಯ ಮಂತ್ರ ದರ್ಶನಕ್ಕೆ, 'ಅಥರ್ವ ವೇದ' ಎಂಬ ಸ್ಥಾನವನ್ನು ಕೊಡುತ್ತಾರೆ ಮಹಾದೇವ.

ದಕ್ಷ ಮಹಾರಾಜನ ಕುತಂತ್ರ

ಭೃಗು ಮಹರ್ಷಿ, ಸತಿ ದೇವಿ ಕೈಲಾಸಕ್ಕೆ ಹೊರಡುತ್ತಿರುವ ವೇಳೆ ಸರಿ ಇಲ್ಲವೆಂದು ಹೇಳಿದರೂ, ದಕ್ಷ ಮಹಾರಾಜ ಅದನ್ನು ಗುಟ್ಟಾಗಿ ಇಡುವಂತೆ ಹೇಳುತ್ತಾನೆ. ಇದೇ ಮುಂದಾಗುವ ಅನಾಹುತಕ್ಕೆ ಕಾರಣವಾಗುತ್ತದೆ.

ಚಿತ್ರಾಸುರನ ವಧೆ

ಸತಿಯನ್ನು ಕೊಲ್ಲಿಸಲು, ತಾರಕಾಸುರ ಚಿತ್ರಾಸುರನಿಗೆ ಆದೇಶ ನೀಡುತ್ತಾನೆ. ಆದರೆ ಅಲ್ಲಿ ದೇವರ ದೇವ ಮಹಾದೇವನಿಂದ ಚಿತ್ರಾಸುರನ ವಧೆ ಆಗುತ್ತದೆ.

ಕೈಲಾಸದಲ್ಲಿ ಸತಿಗೆ ನಂದಿಯ ಸಹಾಯ

ರಾಜ ವೈಭೋಗ್ಯದಲ್ಲಿ ಕಾಲ ಕಳೆಯುತ್ತಿದ್ದ ಸತಿ ದೇವಿಗೆ, ಈಗ ಕೈಲಾಸದಲ್ಲಿ ಹೇಗೆ ಹೊಂದಾಣಿಕೆಯಾಗುತ್ತದೆ, ಎಂಬ ಪ್ರಶ್ನೆ ಉದ್ಭವಿಸಿದಾಗ, ಸತಿಗೆ ಪೂರ್ಣ ಸಹಾಯ ಮಾಡುವುದಾಗಿ ನಂದಿ ತಿಳಿಸುತ್ತಾನೆ.

ತಪ್ಪದೇ ನೋಡಿ

ಶಿವ ದೇವರೊಡನೆ, ಸತಿಯ ಕೈಲಾಸ ವಾಸದ ವಿಶೇಷ ಕ್ಷಣಗಳು, ಇದೇ ಸೋಮವಾರದಿಂದ, ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾತ್ರಿ 7.30ಕ್ಕೆ ಪ್ರಸಾರವಾಗುತ್ತದೆ.

English summary
Sati decides to go to Kailash with Mahadev because of Daksh and Mahadev’s different principles. On their way to Kailash Taarakasur sends Chitrasur to kill Sati. Mahadeva kills Chitrasur. Taarkasur is furious. To know more story of Mahadeva, watch 'Hara Hara Mahadeva' Mon–Friday at 7.30 PM in Star Suvarna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada