»   » ರಕ್ತಬೀಜಾಸುರನ ಸಂಹಾರಕ್ಕೆ ಪಾರ್ವತಿಯ 'ಭದ್ರಕಾಳಿ' ಅವತಾರ

ರಕ್ತಬೀಜಾಸುರನ ಸಂಹಾರಕ್ಕೆ ಪಾರ್ವತಿಯ 'ಭದ್ರಕಾಳಿ' ಅವತಾರ

Posted By:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿಯ ಅತ್ಯಂತ ಜನಪ್ರಿಯ 'ಹರ ಹರ ಮಹಾದೇವ' ಧಾರಾವಾಹಿ ಮತ್ತೊಂದು ಪ್ರಮುಖ ಘಟ್ಟ ತಲುಪಿದೆ. [ಪಾರ್ವತಿ ಅವತಾರದ ಕಥೆ ಕಣ್ತುಂಬಿಕೊಳ್ಳಿ, ಪುಣ್ಯ ಕಟ್ಟಿಕೊಳ್ಳಿ.!]

ಪಾರ್ವತಿ-ಮಹಾದೇವ ವಿವಾಹದ ನಂತರ ಹಿಮವಂತನ ಅರಮನೆಗೆ ವಿದಾಯ ಹೇಳಿ ಕೈಲಾಸಕ್ಕೆ ಬಂದ ಪಾರ್ವತಿ ಮತ್ತು ಮಹಾದೇವನ ಜನುಮಾಂತರ ನಂಟನ್ನು ಒಡೆಯಲು ತಾರಾಕಾಸುರ ಹುನ್ನಾರ ನಡೆಸುತ್ತಾನೆ.

ರಕ್ತಬೀಜಾಸುರ ಆಗಮನ

ದೇವತೆಗಳ ಮೇಲೆ ಆಕ್ರಮಣ ಮಾಡಲು ರಕ್ತಬೀಜಾಸುರನ ಆಗಮನವಾಗಿದೆ. [ಶಿವ-ಪಾರ್ವತಿ ಕಲ್ಯಾಣ: ಅದ್ಭುತ ದೃಶ್ಯಕಾವ್ಯ ನೋಡಲು ಮರೆಯದಿರಿ]

ಭದ್ರಕಾಳಿ ಅವತಾರ

ರಕ್ತಬೀಜಾಸುರನ ಸಂಹಾರಕ್ಕೆ ಪಾರ್ವತಿ ದೇವಿ 'ಭದ್ರಕಾಳಿ' ಅವತಾರ ತಾಳುತ್ತಾಳೆ. ಈ ವಾರವಿಡೀ ಭದ್ರಕಾಳಿ ಅವತಾರದ ಕಥೆಯನ್ನು ನೀವು ನೋಡಬಹುದು.

ರಕ್ತಬೀಜಾಸುರನ ಸಂಹಾರ ಸಂಚಿಕೆ

ಭದ್ರಕಾಳಿಯನ್ನು ಸಂತೈಸಲು ಮಹಾದೇವ ಮುಂದಾದಾಗ ಭದ್ರಕಾಳಿ ಮಹಾದೇವನ ಎದೆಯನ್ನು ಮೆಟ್ಟುತ್ತಾ ರಕ್ತಬೀಜಾಸುರನನ್ನು ಸಂಹರಿಸುವ ಸಂಚಿಕೆ ಕುತೂಹಲಭರಿತವಾಗಿದೆ.

ಪ್ರಸಾರ ಯಾವಾಗ?

ರಕ್ತಬೀಜಾಸುರನ ಸಂಹಾರ ಸಂಚಿಕೆ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.

English summary
'Hara Hara Mahadeva': Parvathy is all set to emerge as Bhadrakaali to kill Raktha Beejasura. The thrilling episode of Rakthabeejasura Samhara by Bhadrakali will be telecasted Mon - Fri at 7.30 PM in Star Suvarna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada