For Quick Alerts
  ALLOW NOTIFICATIONS  
  For Daily Alerts

  ಈ ವಾರದ 'ಹರ ಹರ ಮಹಾದೇವ' ಸಂಚಿಕೆಗಳ ವಿಶೇಷತೆ ಏನು?

  By Harshitha
  |

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ನಾಳೆಯಿಂದ (ಸೋಮವಾರ) ಪ್ರಸಾರವಾಗುವ ಸಂಚಿಕೆಗಳ ವಿಶೇಷತೆ ಇಲ್ಲಿದೆ....

  ಚಂದ್ರನಿಗೆ ದಕ್ಷ ಶಾಪ ಕೊಟ್ಟ ನಂತರ ಮಹಾದೇವ ಕೋಪಗೊಂಡು ರೌದ್ರವತಾರ ತಾಳುತ್ತಾನೆ. ಮಹಾದೇವವನ್ನು ಶಾಂತವಾಗಿಸಲು ಅತ್ರಿ ಮತ್ತು ಭೃಗು ಮಾರ್ಕಂಡೇಯ ಋಷಿಗಳ ಬಳಿ 'ಮಹಾ ಮೃತ್ಯುಂಜಯ ಮಂತ್ರ'ವನ್ನು ಪಡೆಯಲು ಹೋಗುತ್ತಾರೆ. [ಶಿವ 'ಚಂದ್ರಶೇಖರ'ನ ಅವತಾರ ತಾಳುವುದಾದರೂ ಯಾಕೆ.?]

  ಆದ್ರೆ ದಕ್ಷ, ಮಹಾದೇವನಿಗೆ ಶಾಪವಿಟ್ಟಿದ್ದರಿಂದ ಆ ಮಂತ್ರ ಉಪಯೋಗವಾಗದು ಎಂದು ಮಾರ್ಕಂಡೇಯ ಮುನಿಗಳು ಹೇಳುತ್ತಾರೆ. ಬ್ರಹ್ಮ ಮತ್ತು ವಿಷ್ಣು, ಮಹಾದೇವರನ್ನು ಶಾಂತವಾಗಿಸಲು ಅವರ ಅರ್ಧನಾರೀಶ್ವರ ಸ್ವರೂಪಿಯಾದ ಸತಿಯನ್ನು ಪೂಜಿಸುವ ಆಲೋಚನೆ ನಡೆಸುತ್ತಾರೆ. ಮುಂದೆ ಓದಿ....

  ಹೊಸ ಗ್ರಹದ ಸೃಷ್ಟಿ

  ಹೊಸ ಗ್ರಹದ ಸೃಷ್ಟಿ

  ದಕ್ಷ ರೇಖೆಯಲ್ಲಿ ಸಿಲುಕಿರುವ ಸತಿಯನ್ನು ಹೊರಬರುವಂತೆ ಮಾಡಲು ವಿಷ್ಣು, ದಕ್ಷನಿಗೆ ಹೊಸ ಗ್ರಹವೊಂದನ್ನು ಸೃಷ್ಟಿ ಮಾಡಲು ಸೂಚಿಸಿ ಅದಕ್ಕೆ ಶ್ರೇಷ್ಠ ಮನೆತನದ ಸದ್ಗುಣ ಸಂಪನ್ನಳಾದ ಕನ್ಯೆಯಿಂದ ಸರಸ್ವತಿ ನದಿ ತೀರದ ಮಣ್ಣನ್ನು ತರಿಸುವಂತೆ ಸೂಚಿಸುತ್ತಾರೆ. [ಯಾರೀ 'ಶಿವ'ನ ಪಾತ್ರಧಾರಿ ವಿನಯ್ ಗೌಡ.? ಅವರ ಹಿನ್ನಲೆ ಏನು.?]

  ಮಹಾದೇವ ಶಾಂತನಾಗುತ್ತಾನಾ?

  ಮಹಾದೇವ ಶಾಂತನಾಗುತ್ತಾನಾ?

  ಅಲ್ಲಿ ಲಕ್ಷ್ಮೀದೇವಿ ಸತಿಯಾಗಿ ರೂಪುಗೊಂಡು ಅರಮನೆ ಸೇರಿದರೆ, ಇತ್ತ ವಿಷ್ಣು-ಬ್ರಹ್ಮರು ಸತಿಯನ್ನು ಪೂಜಿಸಿ ಮಹಾದೇವನನ್ನು ಶಾಂತಗೊಳಿಸಿ ಜಗತ್ತಿನ ವಿನಾಶ ತಪ್ಪಿಸುತ್ತಾರೆ.

  ಸತಿಯ ವಿವಾಹ

  ಸತಿಯ ವಿವಾಹ

  ಮಹಾದೇವ, ದಕ್ಷನಿಗೆ ಸತಿಗೆ ತೊಂದರೆ ಮಾಡದಂತೆ ಎಚ್ಚರಿಸುತ್ತಾನೆ. ಸತಿಯನ್ನು ವರಿಸುವಂತೆ ಬ್ರಹ್ಮ ಮತ್ತು ವಿಷ್ಣು, ಮಹಾದೇವನನ್ನು ಒಪ್ಪಿಸಲು ಪ್ರಯತ್ನಿಸುತ್ತಾರೆ.

  ಸತಿ ಒಪ್ಪುತ್ತಾಳಾ?

  ಸತಿ ಒಪ್ಪುತ್ತಾಳಾ?

  ನಂದವ್ರತನ ಪುಸ್ತಕದ ಸಹಾಯದಿಂದ ಸತಿ ಮಣ್ಣಿನ ಶಿವಲಿಂಗವನ್ನು ಮಾಡುತ್ತಾಳೆ. ಸತಿಯ ವಿವಾಹವನ್ನು ಅಂಗೀರಸನ ಮಗನಾದ ಶತಭಿಷನ ಜೊತೆ ನಿಶ್ಚಯಿಸಲು ದಕ್ಷ ತೀರ್ಮಾನಿಸುತ್ತಾನೆ. ಇದಕ್ಕೆ ಸತಿ ಒಪ್ಪುತ್ತಾಳೆ.

  ತಾರಕಾಸುರನ ಅಧ್ಯಾಯ

  ತಾರಕಾಸುರನ ಅಧ್ಯಾಯ

  ಮನಸಿಲ್ಲದೆ ಒಪ್ಪಿರುವ ಸತಿಯನ್ನು ಕಂಡು ಇದಕ್ಕೆ ಪ್ರಸೂತಿ ವಿರೋಧಿಸುತ್ತಾಳೆ. ವಿಷ್ಣು ತಾರಕಾಸುರನ ಕತೆಯನ್ನು ಲಕ್ಷ್ಮೀದೇವಿಗೆ ಹೇಳುತ್ತಾ ತಾರಕಾಸುರನ ಅಂತ್ಯ ಹೇಗಾಗಬಹುದೆಂದು ತಿಳಿಸುತ್ತಾರೆ. ಶಾಪಗ್ರಸ್ತನಾದ ಚಂದ್ರನನ್ನು ಮಹಾದೇವ ತಮ್ಮ ಮುಡಿಯ ಮೇಲೆ ಧರಿಸುತ್ತಾನೆ.

  ಸೋಮವಾರದಿಂದ ಮಿಸ್ ಮಾಡ್ಬೇಡಿ...

  ಸೋಮವಾರದಿಂದ ಮಿಸ್ ಮಾಡ್ಬೇಡಿ...

  ಮತ್ತೊಂದು ಗ್ರಹದ ಸೃಷ್ಟಿಯನ್ನು ಮಾಡಲು ಹೊರಟಿರುವ ದಕ್ಷನ ಪ್ರಯತ್ನ ಫಲಿಸುತ್ತಾ? ಸತಿ ಶತಭಿಷರ ವಿವಾಹ ನಡೆಯುತ್ತಾ? ತಾರಕಾಸುರನ ಅಂತ್ಯ ಹೇಗೆ? ಎಂಬುದನ್ನು ವೀಕ್ಷಿಸಿ 'ಹರ ಹರ ಮಹಾದೇವ' ಸೋಮವಾರದಿಂದ ಶುಕ್ರವಾರ ರಾತ್ರಿ 7.30ಕ್ಕೆ, ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ.

  English summary
  Episode of Daksha creating a new planet, Sati and Shatabhisha Marriage chapter will be aired in Star Suvarna Channel's 'Hara Hara Mahadeva' from Monday (August 22nd) to Friday (August 26th) at 7.30 PM.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X