For Quick Alerts
  ALLOW NOTIFICATIONS  
  For Daily Alerts

  Exclusive: 'ಜೊತೆಜೊತೆಯಲಿ' ಟೀಂನಿಂದ ನನಗೂ ಫೋನ್ ಬಂದಿತ್ತು, ಆದರೆ ನನ್ನದೊಂದು ಷರತ್ತು ಇದೆ: ಹರೀಶ್ ರಾಜ್

  |

  ಕಳೆದೊಂದು ವಾರದಿಂದ 'ಜೊತೆಜೊತೆಯಲಿ' ಧಾರಾವಾಹಿಯ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ. ನಟ ಅನಿರುದ್ಧ್ ಕಿರಿಕ್‌ ಮಾಡಿಕೊಂಡು ಶೂಟಿಂಗ್‌ ಸೆಟ್‌ನಿಂದ ಹೊರ ನಡೆದ ಮೇಲೆ ಸಾಕಷ್ಟು ಬೆಳವಣಿಗೆಗಳು ನಡೆದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇನ್ನು ಮುಂದೆ ಆರ್ಯವರ್ಧನ್ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿದೆ. ಮೂರ್ನಾಲ್ಕು ದಿನಗಳಿಂದ ಹೊಸ ನಟನ ಹುಡುಕಾಟ ಚುರುಕು ಪಡೆದುಕೊಂಡಿದೆ. ಈಗಾಗಲೇ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಟ ಹರೀಶ್‌ ರಾಜ್‌ ಜೊತೆ ತಂಡ ಮಾತುಕತೆ ನಡೆಸಿದೆ.

  ಈ ಕ್ಷಣಕ್ಕೂ ರಾಜಿ ಮಾಡಿಕೊಂಡು ಮತ್ತೆ ಧಾರಾವಾಹಿಯಲ್ಲಿ ನಟಿಸಲು ನಟ ಅನಿರುದ್ಧ್ ಸಿದ್ಧರಾಗಿದ್ದಾರೆ. ಇದನ್ನು ಸ್ವತಃ ಸುದ್ಧಿಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೆ ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್ ಇದಕ್ಕೆ ಸುತಾರಂ ಒಪ್ಪುತ್ತಿಲ್ಲ. ಅನಿರುದ್ಧ್‌ ನಮ್ಮ ಧಾರಾವಾಹಿಯಲ್ಲಿ ನಟಿಸೋದು ಬೇಡ ಎನ್ನುತ್ತಿದ್ದಾರೆ. ಆರ್ಯವರ್ಧನ್ ಪಾತ್ರಕ್ಕೆ ಬೇರೆ ನಟನನ್ನು ಕರೆತಂದು ಗೆದ್ದು ತೋರಿಸುವ ಹಠಕ್ಕೆ ಬಿದ್ದಿದ್ದಾರೆ. ಮತ್ತೊಂದ್ಕಡೆ ನಾಯಕನ ನಟನಿಲ್ಲದೇ ಕಥೆಯನ್ನು ಮುಂದುವರೆಸಲು ಕಷ್ಟವಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ತತ್‌ಕ್ಷಣ ಹೊಸ ನಟನ ಆಯ್ಕೆ ನಡೆಯಬೇಕಿದೆ. ಹಾಗಾಗಿ ಪಾತ್ರಕ್ಕೆ ಹೊಂದಿಕೆಯಾಗುವಂತಹ ನಟರ ಜೊತೆ ಚರ್ಚೆ ಶುರುವಾಗಿದೆ.

  ಕೊನೆಯ ಹಂತ ತಲುಪಿತಾ 'ಜೊತೆ ಜೊತೆಯಲಿ' ಧಾರಾವಾಹಿ..?ಕೊನೆಯ ಹಂತ ತಲುಪಿತಾ 'ಜೊತೆ ಜೊತೆಯಲಿ' ಧಾರಾವಾಹಿ..?

  ಅನಿರುದ್ಧ್‌ ಬಿಟ್ಟರೆ ಆರ್ಯವರ್ಧನ್‌ ಪಾತ್ರಕ್ಕೆ ಯಾರು ಸೂಕ್ತ ಎನ್ನುವ ಪ್ರಶ್ನೆ ಬಂದಾಗ ಸಾಕಷ್ಟು ಜನ ವಿಜಯ್ ರಾಘವೇಂದ್ರ, ಜೆಕೆ ಹಾಗೂ ಹರೀಶ್ ರಾಜ್ ಹೆಸರು ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಸಹ ನಡೀತು. ಆದರೆ ಅಚ್ಚರಿ ಎನ್ನುವಂತೆ ನಿರ್ದೇಶಕ ಅನೂಪ್ ಭಂಡಾರಿ ಹೆಸರು ನಡುವೆ ಕೇಳಿಬಂತು. ಸ್ವತಃ ಧಾರಾವಾಹಿ ತಂಡವೇ ಅವರ ಜೊತೆ ಮಾತುಕತೆ ನಡೆಸಿತ್ತು. ಇದೀಗ ಮತ್ತೊಬ್ಬ ನಟ ಹರೀಶ್‌ ರಾಜ್‌ಗೂ ಕರೆ ಮಾಡಿ ಆರ್ಯವರ್ಧನ್‌ ಪಾತ್ರದಲ್ಲಿ ನಟಿಸುವಂತೆ ಅಪ್ರೋಚ್ ಮಾಡಲಾಗಿದೆ. ಈ ಬಗ್ಗೆ ಖುದ್ದು ಹರೀಶ್ ರಾಜ್ ಎಕ್ಸ್‌ಕ್ಲೂಸಿವ್ ಆಗಿ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.

  ಆರ್ಯವರ್ಧನ್‌ ಪಾತ್ರಕ್ಕೆ ನನ್ನನ್ನು ಕೇಳಿದ್ದಾರೆ

  ಆರ್ಯವರ್ಧನ್‌ ಪಾತ್ರಕ್ಕೆ ನನ್ನನ್ನು ಕೇಳಿದ್ದಾರೆ

  "ನನ್ನನ್ನು ಅಪ್ರೋಚ್ ಮಾಡಿರುವುದು ಹೌದು. ಮಾತುಕತೆ ನಡೀತಿದೆ. ಖಂಡಿತ ಒಬ್ಬ ಕಲಾವಿದನಾಗಿ ಒಂದು ಪಾತ್ರ ಬಂದಾಗ ಆ ಪಾತ್ರಕ್ಕೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ. ಅವರು ಅಪ್ರೋಚ್ ಮಾಡಿದ್ದಾರೆ ಅಂದರೆ ನಾನು ಆ ಪಾತ್ರ ಮಾಡಬಹುದು ಎಂದು ಅವರಿಗೆ ಅನ್ನಿಸರಬಹುದು. ನೋಡೋಣ ಮಾತುಕತೆ ನಡೀತಿದೆ. ನೋಡೋಣ ಏನಾಗುತ್ತದೆ. ಜನ ಕೂಡ ಊಹಿಸಿಕೊಂಡಿದ್ದಾರೆ ಯಾರೆಲ್ಲಾ ಪಾತ್ರ ಮಾಡಬಹುದು ಎಂದು. ಖಂಡಿತ ನನಗೂ ಅಪ್ರೋಚ್ ಮಾಡಿದ್ದಾರೆ" ಎಂದು ಹರೀಶ್ ರಾಜ್ ಮಾಹಿತಿ ನೀಡಿದ್ದಾರೆ.

  ನಟಿಸಲು ನನ್ನ ಷರತ್ತನ್ನು ಹೇಳಿದ್ದೇನೆ

  ನಟಿಸಲು ನನ್ನ ಷರತ್ತನ್ನು ಹೇಳಿದ್ದೇನೆ

  "ಯಾವುದೇ ಧಾರವಾಹಿ ಆದರೂ ಹೆಚ್ಚು ಸಮಯ ಕೇಳುತ್ತದೆ. ತಿಂಗಳಲ್ಲಿ 15 ದಿನ ಅದಕ್ಕಾಗಿ ಕೊಡಬೇಕು. ಇನ್ನುಳಿದ 15 ದಿನಗಳಲ್ಲಿ ನಾನು ಬೇರೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಆ ತರಹದ ಫೆಕ್ಸಿಬಿಲಿಟಿ ಇದ್ದಾಗ ಮಾಡಬಹುದು. ನನ್ನ ಷರತ್ತುಗಳನ್ನು ಧಾರಾವಾಹಿ ತಂಡಕ್ಕೆ ಹೇಳಿದ್ದೇನೆ. ನನ್ನ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಮತ್ತೊಂದು ಸಿನಿಮಾ ಶುರುವಾಗಬೇಕಿದೆ ಎಂದು ತಿಳಿಸಿದ್ದೀನಿ"

  ವಾಹಿನಿಯವರದ್ದೇ ಕೊನೆಯ ನಿರ್ಣಯ

  ವಾಹಿನಿಯವರದ್ದೇ ಕೊನೆಯ ನಿರ್ಣಯ

  "ಎಲ್ಲಾ ಫೆಕ್ಸಿಬಲ್ ಇದ್ದಾಗ ನಾನು ಧಾರಾವಾಹಿಯಲ್ಲಿ ನಟಿಸಬಹುದು ಎಂದುಕೊಂಡಿದ್ದೇನೆ. ನನ್ನ ಷರತ್ತುಗಳಿಗೆ ಅವರು ಓಕೆ ಎನ್ನಬೇಕು ನೋಡೋಣ. ನನ್ನ ಸಿನಿಮಾ ಕೆಲಸಗಳು ಇದೆ, ಅದನ್ನು ನೋಡಿಕೊಂಡು ಧಾರಾವಾಹಿಯಲ್ಲಿ ನಟಿಸಬಹುದಾ ಎಂದು ಕೇಳಿದ್ದೇನೆ. ಅದಕ್ಕೆ ಅವರು ಒಪ್ಪಿದರೆ, ನಾನು ನಟಿಸಲು ಸಿದ್ಧ. ಕೊನೆಗೆ ವಾಹಿಯವರೇ ನಿರ್ಧಾರ ತೆಗೆದುಕೊಳ್ಳಬೇಕು ನೋಡೋಣ" ಎಂದ ಹರೀಶ್ ರಾಜ್ ತಿಳಿಸಿದ್ದಾರೆ.

  ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ನಟ

  ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ನಟ

  ಇತ್ತೀಚೆಗೆ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದ ನಟ ಹರೀಶ್ ರಾಜ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. 1997ರಲ್ಲಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ದೋಣಿ ಸಾಗಲಿ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ್ದರು. ಈವರೆಗೆ 70ಕ್ಕೂ ಅಧಿಕ ಸಿನಿಮಾಗಳಲ್ಲಿ ಹರೀಶ್ ರಾಜ್ ನಟಿಸಿ ಗೆದ್ದಿದ್ದಾರೆ. ಬಿಗ್‌ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಯಾಗಿದ್ದರು. ಇನ್ನು ಸಿನಿಮಾ ನಿರ್ದೇಶಕರಾಗಿಯೂ ಹರೀಶ್ ರಾಜ್ ಗುರ್ತಿಸಿಕೊಂಡಿದ್ದಾರೆ. ಮಲಯಾಳಂ ಸಿನಿಮಾಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಹೀರೋ ಆಗಿ ಹೊಸ ಸಿನಿಮಾ ಶುರು ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

  '2020' ಚಿತ್ರದಲ್ಲಿ ಹರೀಶ್ ರಾಜ್ ಕಾಮಿಡಿ ಕಿಕ್

  '2020' ಚಿತ್ರದಲ್ಲಿ ಹರೀಶ್ ರಾಜ್ ಕಾಮಿಡಿ ಕಿಕ್

  ಕೋಮಲ್ ಹೀರೊ ಆಗಿ ನಟಿಸಿರುವ '2020' ಚಿತ್ರದಲ್ಲಿ ಹರೀಶ್ ರಾಜ್‌ ಕೂಡ ಬಣ್ಣ ಹಚ್ಚಿದ್ದಾರೆ. ಕೋಮಲ್ ಸ್ನೇಹಿತ ಪಾತ್ರದಲ್ಲಿ ಕಾಮಿಡಿ ಕಚಗುಳಿ ಇಡುವುದಕ್ಕೆ ಬರುತ್ತಿದ್ದಾರೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿದೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್‌ನಲ್ಲಿ ಕೆ. ಎಲ್ ರಾಜಶೇಖರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

  ಆರ್ಯವರ್ಧನ್ ಪಾತ್ರಕ್ಕೆ ಅನೂಪ್ ಭಂಡಾರಿ ಹೆಸರು

  ಆರ್ಯವರ್ಧನ್ ಪಾತ್ರಕ್ಕೆ ಅನೂಪ್ ಭಂಡಾರಿ ಹೆಸರು

  ಹರೀಶ್ ರಾಜ್ ಜೊತೆಗೆ ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ಕೂಡ ಆರ್ಯವರ್ಧನ್ ಪಾತ್ರಕ್ಕೆ ತಂಡ ಅಪ್ರೋಚ್ ಮಾಡಿತ್ತು. ಆದರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಕಾರಣಕ್ಕೆ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಟಿಸೋಕೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಒಟ್ಟಾರೆ ಯಾರು ಆರ್ಯವರ್ಧನ್ ಆಗಿ ನಟಿಸುತ್ತಾರೆ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

  English summary
  Harish Raj Replace Aniruddha Jatkar in Jothe Jotheyali Serial here his First Reaction.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X