For Quick Alerts
  ALLOW NOTIFICATIONS  
  For Daily Alerts

  Hitler Kalyana: ಲೀಲಾಗೆ ಅಂತರಾ ಸೀರೆ ಕೊಟ್ಟ ಎಜೆ: ಇಬ್ಬರ ಪ್ರೀತಿ ಹೆಚ್ಚಾಗುತ್ತಿದೆಯಾ..?

  By ಪ್ರಿಯಾ ದೊರೆ
  |

  'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ ಜೈಲಿಗೆ ಹೋಗಲು ಯಾರು ಕಾರಣ ಎಂಬ ವಿಚಾರವನ್ನು ತಲೆಗೆ ಹಚ್ಚಿಕೊಂಡಿದ್ದಾನೆ. ಯಾರು ಅಂತರಾ ಮತ್ತು ತನ್ನ ಸಿಡಿ ಅನ್ನು ಪೊಲೀಸರ ಕೈಗೆ ಕೊಟ್ಟಿದ್ದಾರೆ ಎಂದು ಹುಡುಕಾಟ ನಡೆಸುತ್ತಿದ್ದಾನೆ.

  ಎಜೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ, ನಿಮ್ಮ ಮನೆಯವರೇ ನಿಮ್ಮ ಜೊತೆಗಿರುವವರೇ ಯಾರೋ ಒಬ್ಬರು ಈ ಸಿಡಿಯನ್ನು ತಂದುಕೊಟ್ಟಿದ್ದಾರೆ ಎಂಬ ಸುದ್ದಿ ಮಾತ್ರ ಈಚೆಗೆ ಗೊತ್ತಾಗಿದೆ. ಈ ವಿಚಾರ ಎಜೆ ತಲೆಯಲ್ಲಿ ಹಗಲು ರಾತ್ರಿ ಕೊರೆಯುತ್ತಿದೆ.

  ನಟನೆಯ ಹೊರತಾಗಿ ನಿರೂಪಣೆ ಮೂಲಕ ಗಮನ ಸೆಳೆದ ನಟ-ನಟಿಯರು ಇವರೇ!ನಟನೆಯ ಹೊರತಾಗಿ ನಿರೂಪಣೆ ಮೂಲಕ ಗಮನ ಸೆಳೆದ ನಟ-ನಟಿಯರು ಇವರೇ!

  ನನ್ನ ಜೊತೆಯೇ ಇದ್ದುಕೊಂಡು ಮೋಸ ಮಾಡಿದವರನ್ನು ಕಂಡುಹಿಡಿಯಬೇಕು. ನನ್ನ ಜೊತೆಗೆ ಇದ್ದುಕೊಂಡು ನನಗೆ ಮೋಸ ಮಾಡಿದವರು ಯಾರು ಎಂದು ತಿಳಿಯಬೇಕು. ಅವರನ್ನು ಎಜೆ ತಿಳಿದುಕೊಳ್ಳಲು ಕಷ್ಟ ಪಡುತ್ತಿದ್ದಾನೆ. ಆದರೆ ಎಜೆಗೆ ಅದರ ಸುಳಿವೂ ಸಿಕ್ಕಿರುವುದಿಲ್ಲ.

  ನಿದ್ದೆಯಲ್ಲೂ ಕನವರಿಸುತ್ತಿರುವ ಎಜೆ

  ನಿದ್ದೆಯಲ್ಲೂ ಕನವರಿಸುತ್ತಿರುವ ಎಜೆ

  ನಿದ್ದೆಯಲ್ಲೂ ಕನವರಿಸುತ್ತಿರುವ ಎಜೆ, ಅಂತರಾ ಅವರ ತಂದೆ ಮಾತನಾಡಿದ ಮಾತುಗಳನ್ನು ನೆನಪಿಸಿಕೊಂಡು ಎಚ್ಚರಗೊಳ್ಳುತ್ತಾನೆ. ಇದರಿಂದ ಲೀಲಾ ಕೂಡ ಎದ್ದು ಏನಾಯ್ತು ಏಜೆ ಎಂದು ಕೇಳಿದ್ದಕ್ಕೆ ನನಗೆ ಆ ಸಿಡಿಯನ್ನು ಯಾರು ತಂದು ಕೊಟ್ಟರೂ ಎಂಬುದೇ ಅರ್ಥವಾಗುತ್ತಿಲ್ಲ. ಅದೇ ವಿಚಾರವಾಗಿ ತಲೆಕೆಟ್ಟು ಹೋಗಿದೆ. ಏನು ಮಾಡಬೇಕೋ ತಿಳಿಯುತ್ತಿಲ್ಲ ಎಂದು ಹೇಳುತ್ತಾನೆ. ಈ ವೇಳೆ ಲೀಲಾ ಮನಸ್ಸಿನಲ್ಲಿ ಅದು ನಾನೇ ಎಜೆ ಎಂದು ಹೇಳಿಕೊಳ್ಳುತ್ತಾಳೆ.

  ಸತ್ಯ ಹೇಳಿ ಬಿಟ್ಲಾ ಲೀಲಾ..?

  ಸತ್ಯ ಹೇಳಿ ಬಿಟ್ಲಾ ಲೀಲಾ..?

  ಅದು ಏನಾಗುತ್ತೋ ಆಗಿ ಬಿಡಲಿ. ನಾನು ನಿಮ್ಮ ಬಳಿ ಸತ್ಯವನ್ನು ಹೇಳಿಬಿಡುತ್ತೇನೆ. ನೀವು ಹೀಗೆ ಕೊರಗುವುದನ್ನು ನೋಡುವುದಕ್ಕೆ ನನಗೆ ಇಷ್ಟವಿಲ್ಲ. ಇನ್ನು ನಾನು ಮಾಡಿದ ತಪ್ಪನ್ನು ನಿಮ್ಮ ಮುಂದೆ ಒಪ್ಪಿಕೊಳ್ಳದೆ ಇರಲು ಕೂಡ ಸಾಧ್ಯವಿಲ್ಲ. ಹಾಗಾಗಿ ಅದು ಏನು ಆಗುತ್ತೋ ಆಗಲಿ. ನಾನೇ ಸಿಡಿ ತಂದು ಕೊಟ್ಟಿದ್ದು ಎಂಬ ಎಲ್ಲಾ ಸತ್ಯವನ್ನು ನಿಮ್ಮ ಮುಂದೆ ಒಪ್ಪಿಕೊಂಡು ಬಿಡುತ್ತೇನೆ. ನಿಮಗೆ ನಾನು ಮೋಸ ಮಾಡಲು ಇಷ್ಟಪಡುವುದಿಲ್ಲ ಎಂದು ಮನಸ್ಸಿನಲ್ಲಿ ಮಾತನಾಡಿಕೊಳ್ಳುತ್ತಾಳೆ. ಆದರೆ ಯಾವಾಗ ವಿಚಾರವನ್ನು ಹೇಳುತ್ತಾಳೆ ಗೊತ್ತಿಲ್ಲ. ಹಾಗೊಂದು ವೇಳೆ ಸತ್ಯವನ್ನು ಹೇಳಿದರೆ, ಎಜೆ ಯಾವ ರೀತಿಯಲ್ಲಿ ರಿಯಾಕ್ಟ್ ಮಾಡುತ್ತಾನೆ ಎಂಬುದು ಯಾರಿಗೂ ತಿಳಿದಿಲ್ಲ.

  ಸೀರೆ ಹಾಳು ಮಾಡಿದ ಸರಸ್ವತಿ

  ಸೀರೆ ಹಾಳು ಮಾಡಿದ ಸರಸ್ವತಿ

  ಇತ್ತ ಅಜ್ಜಿ ಮಗ ಹಾಗೂ ಸೊಸೆಯ ಜೀವನ ಚೆನ್ನಾಗಿರಲಿ ಎಂದು ಪೂಜೆಗೆ ಏರ್ಪಾಡು ಮಾಡಿದ್ದಾಳೆ. ಇದೇ ಸೀರೆಯನ್ನು ಹುಟ್ಟುಕೊಳ್ಳಬೇಕು ಎಂದು ಸೀರೆ ಮತ್ತು ಒಡವೆಯನ್ನು ಲೀಲಾಗೆ ಕೊಟ್ಟಿರುತ್ತಾಳೆ. ಲೀಲಾ ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಸರಸ್ವತಿ ಬೇಕಂತಲೇ ಸೀರೆಗೆ ಇಂಕ್ ಅನ್ನು ಹಾಕಿರುತ್ತಾಳೆ. ಇದನ್ನು ನೋಡಿದ ಲೀಲಾ ಅಳಲು ಶುರು ಮಾಡುತ್ತಾಳೆ. ಅಜ್ಜಿ ಪ್ರೀತಿಯಿಂದ ಸೂರೆಯನ್ನು ಕೊಟ್ಟಿದ್ದರು. ನಾನು ಯಾವ ಎಡವಟ್ಟನ್ನು ಮಾಡಿಲ್ಲ. ಆದರೂ ಕೂಡ ಸೀರೆ ಹಾಳಾಗಿದೆ. ಇದು ಅಜ್ಜಿಗೆ ತಿಳಿದರೆ ಬೇಸರ ಮಾಡಿಕೊಳ್ಳುತ್ತಾರೆ. ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ ಅಂತ ಬಿಕ್ಕಿಬಿಕ್ಕಿ ಅಳುತ್ತಿರುತ್ತಾಳೆ. ಈ ವಿಚಾರ ತಿಳಿದ ಎಜೆ ಅಂತರಾ ಮುಂದೆ ಲೀಲಾಳನ್ನು ಕರೆದುಕೊಂಡು ಹೋಗಿ ಅಂತರಾಳ ಸೀರೆ ಹಾಗೂ ಒಡವೆಯನ್ನು ತಂದು ಕೊಡುತ್ತಾನೆ. ಇದನ್ನು ನೀನು ಉಟ್ಟುಕೋ ಅಮ್ಮ ನಿನಗೆ ಏನನ್ನು ಹೇಳುವುದಿಲ್ಲ. ನಾನು ಈ ಸೀರೆಯನ್ನು ನಿನಗೆ ಕೊಟ್ಟೆ ಎಂದು ಹೇಳು. ಅಮ್ಮ ಖುಷಿ ಪಡುತ್ತಾಳೆ ಎಂದು ಹೇಳುತ್ತಾನೆ.

  ಲೀಲಾ-ಎಜೆ ನಡುವೆ ಬಿರುಕು..?

  ಲೀಲಾ-ಎಜೆ ನಡುವೆ ಬಿರುಕು..?

  ಅಜ್ಜಿ ಇನ್ನು ಲೀಲಾ ಮತ್ತು ಎಜೆ ಪೂಜೆಗೆ ಬರಲಿಲ್ಲ ಎಂದು ಪೇಚಾಡುತ್ತಿರುತ್ತಾಳೆ. ಆದರೆ, ದುರ್ಗಾ ಒಳಗೊಳಗೆ ಎಲ್ಲವೂ ಏನಾಗಬೇಕೋ ಅದೇ ಆಗುತ್ತದೆಎಂದು ಮಾತನಾಡಿಕೊಳ್ಳುತ್ತಿರುತ್ತಾಳೆ. ದುರ್ಗಾ, ಎಜೆ ಮತ್ತು ಲೀಲಾಳನ್ನು ಬೇರೆ ಮಾಡಲು ದೊಡ್ಡ ಪ್ಲಾನ್ ಮಾಡಿರುತ್ತಾಳೆ. ಆದರೆ ಆ ಪ್ಲ್ಯಾನ್ ಏನು ಎಂಬುದು ಮಾತ್ರ ಯಾರು ತಿಳಿಯೋದಿಲ್ಲ. ಸರಸ್ವತಿ ಬಳಿಯೂ ಕೂಡ ಅದನ್ನು ಸೀಕ್ರೆಟ್ ಆಗಿ ಮೇಂಟೈನ್ ಮಾಡಿರುತ್ತಾಳೆ. ಸರಸ್ವತಿ, ಲಕ್ಲ್ಮೀಗೂ ಹೇಳಿರುವುದಿಲ್ಲ. ಮುಂದೆ ಲೀಲಾ ಹಾಗೂ ಎಜೆ ನಡುವೆ ಬಿರುಕು ಮೂಡುತ್ತಾ ಕಾದು ನೋಡಬೇಕಿದೆ.

  English summary
  Hitler kalyana serial 02nd January Episode Written Update.AJ gives anthara saree to leela. Both started loving each other.
  Monday, January 2, 2023, 20:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X