»   » ಬಣ್ಣದ ಓಕುಳಿಯಲ್ಲಿ ಸಂಭ್ರಮಿಸಲಿದೆ 'ಬ್ರಹ್ಮಾಸ್ತ್ರ'

ಬಣ್ಣದ ಓಕುಳಿಯಲ್ಲಿ ಸಂಭ್ರಮಿಸಲಿದೆ 'ಬ್ರಹ್ಮಾಸ್ತ್ರ'

Posted By:
Subscribe to Filmibeat Kannada

ಕನ್ನಡದ ಹುಡುಗ ಮತ್ತು ತೆಲುಗು ಹುಡುಗಿಯ ವಿಭಿನ್ನ ಪ್ರೇಮಕಥೆಯನ್ನ ವೀಕ್ಷಕರ ಮುಂದಿಟ್ಟು ಜನಮೆಚ್ಚುಗೆ ಗಳಿಸಿರುವ 'ಬ್ರಹ್ಮಾಸ್ತ್ರ' ಧಾರಾವಾಹಿಯಲ್ಲಿ ಬಣ್ಣದ ರಂಗು ಮೂಡುತ್ತಿದೆ. ಪ್ರೀತಿಯನ್ನ ಆರಾಧಿಸೋ ಕುಟುಂಬ ಒಂದೆಡೆಯಾದರೆ ಪ್ರೀತಿಯನ್ನ ದ್ವೇಷಿಸೋ ಕುಟುಂಬ ಮತ್ತೊಂದೆಡೆ.

ಹೀಗಾಗಿ ಲಾಂಗು ಮಚ್ಚು ಜಗಳದ ನಡುವೆ ಈಗಷ್ಟೇ ಕಥೆಯಲ್ಲಿ ನಾಯಕ ಸಂತು ಮೇಲೆ ನಾಯಕಿ ಶಿವರಂಜಿನಿಗೆ ಪ್ರೀತಿ ಮೂಡಿದೆ. ಈ ಪ್ರೀತಿಗೆ ಬಣ್ಣದ ಲೇಪನ ಕೊಟ್ಟು ಇನ್ನಷ್ಟು ರಂಗು ನೀಡುತ್ತಿದೆ ಬ್ರಹ್ಮಾಸ್ತ್ರ ತಂಡ.

holi celebrations in brahmastra serial

ಊರ ಹೋಳಿ ಆಚರಣೆಯಲ್ಲಿ ನಾಯಕನ ಕುಟುಂಬ ಸೇರುವ ನಿರ್ಧಾರ ಮಾಡಿದಾಗ ಅದೇ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಶಿವರಂಜಿನಿಗೆ ತಾನೂ ಹಬ್ಬ ಆಡಬೇಕೆಂಬ ಮನಸ್ಸಾಗುತ್ತದೆ. ಅವಳಿಗೆ ನಿರಾಸೆ ಮಾಡಲು ಇಷ್ಟಪಡದ ಸಂತು ಶಿವರಂಜಿನಿಯನ್ನ ಕದ್ದು ಮುಚ್ಚಿ ಕರೆದುಕೊಂಡು ಬರುತ್ತಾನೆ.

holi celebrations in brahmastra serial

ಆದರೆ ಅವಳನ್ನ ನೋಡಿದ ಅಲಮೇಲಮ್ಮನ ಕಡೆಯವರು ಬಣ್ಣದ ಓಕುಳಿಯನ್ನ ರಕ್ತದ ಓಕುಳಿ ಮಾಡುವುದಾಗಿ ಆಕ್ರಮಣ ಮಾಡುತ್ತಾರೆ. ಈ ನಡುವೆ ವೀರಪ್ರತಾಪ ರೆಡ್ಡಿಗೆ ತನ್ನ ಅಕ್ಕನ ಮಗಳು ಕೃಷ್ಣವೇಣಿ ಮನೆಯಲ್ಲೇ ಶಿವರಂಜಿನಿ ಇರೋ ಸತ್ಯ ಗೊತ್ತಾಗುತ್ತಾ ಕಾದುನೋಡಬೇಕು.

holi celebrations in brahmastra serial

ಕಥೆಗೆ ಅನುಗುಣವಾಗಿ ಚಿತ್ರೀಕರಿಸಿ ಎಲ್ಲೂ ಬೋರ್ ಹೊಡೆಯದಂತೆ ಪ್ರತಿ ಫ್ರೇಮ್ ಸಹ ಕಲರ್ ಫುಲ್ ಆಗಿ ಚಿತ್ರೀಕರಿಸಿರುವ ತೃಪ್ತಿಯಲ್ಲಿದ್ದಾರೆ ನಿರ್ದೇಶಕ ತಿಲಕ್ ಅವರು. ರವಿ ಆರ್ ಗರಣಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಬ್ರಹ್ಮಾಸ್ತ್ರ' ಧಾರಾವಾಹಿಯ ಹೋಳಿ ಸ್ಪೆಷಲ್ ಎಪಿಸೋಡ್ ಶುಕ್ರವಾರ ಮತ್ತು ಸೋಮವಾರ ರಾತ್ರಿ 8ಕ್ಕೆ ನಿಮ್ಮ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.

English summary
Holi festival celebrations in brahmastra serial. the holi celebration Episode will telecast on friday and monday at 8pm in udaya tv. ಹೋಳಿ ಹಬ್ಬದ ಪ್ರಯುಕ್ತ ಉದಯ ಟಿವಿಯಲ್ಲಿ 'ಬ್ರಹ್ಮಾಸ್ತ್ರ' ಧಾರಾವಾಹಿಯಲ್ಲಿ ವಿಶೇಷ ಸಂಚಿಕೆ ಪ್ರಸಾರವಾಗುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada