»   » 'ಹುಚ್ಚ ವೆಂಕಟ್-ಪ್ರಥಮ್' ಸ್ನೇಹ ನೋಡಿದ್ರೆ ನೀವು ಶಾಕ್ ಆಗ್ತೀರಾ!

'ಹುಚ್ಚ ವೆಂಕಟ್-ಪ್ರಥಮ್' ಸ್ನೇಹ ನೋಡಿದ್ರೆ ನೀವು ಶಾಕ್ ಆಗ್ತೀರಾ!

Posted By:
Subscribe to Filmibeat Kannada

'ಫೈರಿಂಗ್ ಸ್ಟಾರ್' ಹುಚ್ಚ ವೆಂಕಟ್ ಮತ್ತು 'ಒಳ್ಳೆ ಹುಡುಗ' ಪ್ರಥಮ್ ಇಬ್ಬರು ಬದ್ಧ ವೈರಿಗಳಂತೆ ಬಿಂಬಿತವಾಗಿದ್ದರು. ಒಬ್ಬರನ್ನ ಕಂಡ್ರೆ, ಮತ್ತೊಬ್ಬರಿಗೆ ಉರಿದು ಬೀಳುವಷ್ಟು ದ್ವೇಷ. ಇಬ್ಬರಲ್ಲಿ ನಾನಾ? ನೀನಾ? ಎನ್ನುವಷ್ಟು ಆಕ್ರೋಶ. ಇಷ್ಟು ದಿನ ಈ ರೀತಿಯಾಗಿ ಇವರಿಬ್ಬರನ್ನ ಎಲ್ಲರೂ ನೋಡಿದ್ದಾರೆ.

ಆದ್ರೆ, ಈಗ ಹುಚ್ಚ ವೆಂಕಟ್ ಹಾಗೂ 'ಬಿಗ್ ಬಾಸ್' ಫ್ರಥಮ್ ಶತ್ರುಗಳಲ್ಲ, ಸ್ನೇಹಿತರು. ಅದು ಎಷ್ಟರ ಮಟ್ಟಿಗೆ ಅಂದ್ರೆ, ಒಬ್ಬೊರನ್ನೊಬ್ಬರು ಹೊಗುಳುವಷ್ಟು ಗೆಳೆಯರು.[ಪ್ರಥಮ್ ಕಾಲಿಟ್ಟ ಕಡೆಯಲ್ಲೆಲ್ಲಾ ಬರೀ ಕಿರಿಕ್ಕೇ.! ಸಾಕ್ಷಿ ಬೇಕಾ?]

ಅಷ್ಟಕ್ಕೂ, ಇವರಿಬ್ಬರ ಸ್ನೇಹಕ್ಕೆ ಸಾಕ್ಷಿಯಾಗಿದ್ದು ಯಾವುದು? ಇಷ್ಟೆಲ್ಲ ಕೋಪ, ದ್ವೇಷ, ಆಕ್ರೋಶವಿದ್ದ ಇಬ್ಬರ ಮಧ್ಯೆ, ಈಗ ಸ್ನೇಹದ ಚಿಲುಮೆ ಮೊಳಕೆಯೊಡೆದಿದ್ದು ಹೇಗೆ ಅಂತ ಇಲ್ಲಿದೆ ನೋಡಿ....ಮುಂದೆ ಓದಿ....

'ದುಶ್ಮನ್'ಗಳಾಗಿದ್ದ ವೆಂಕಟ್-ಪ್ರಥಮ್ ಈಗ 'ದೋಸ್ತಿ'

ಹಲವು ವಿಷ್ಯಗಳಲ್ಲಿ ಕಿತ್ತಾಡಿಕೊಂಡಿದ್ದ ಹುಚ್ಚ ವೆಂಕಟ್ ಹಾಗೂ 'ಬಿಗ್ ಬಾಸ್' ಪ್ರಥಮ್ ಈಗ ದೋಸ್ತಿಗಳಾಗಿದ್ದಾರೆ. ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ಕೈ ಹಾಕಿ, ಅಪ್ಪಿಕೊಳ್ಳುವಷ್ಟು ಕುಚಿಕೂಗಳಾಗಿದ್ದಾರೆ.[ಹೊಸ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್!]

ಇಬ್ಬರು ಒಂದಾಗಿದ್ದು ಎಲ್ಲಿ?

ಅಷ್ಟಕ್ಕೂ, ಇವರಿಬ್ಬರ ಸಮ್ಮಿಲನಕ್ಕೆ ವೇದಿಕೆಯಾಗಿದ್ದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಸೂಪರ್ ಜೋಡಿ-2' ರಿಯಾಲಿಟಿ ಶೋ ಕಾರ್ಯಕ್ರಮ.['ಪ್ರಥಮ್ ನನ್ನ ಎಕ್ಕಡ': ಮತ್ತೆ ರೊಚ್ಚಿಗೆದ್ದ ಹುಚ್ಚ ವೆಂಕಟ್]

ಅತಿಥಿಯಾಗಿ ಆಗಮಿಸಿದ್ದ ಪ್ರಥಮ್

'ಸೂಪರ್ ಜೋಡಿ-2' ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ಸ್ವರ್ಧಿಯಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರತಿವಾರವೂ ಒಬ್ಬ ಸೆಲೆಬ್ರಿಟಿ ಅತಿಥಿಯಾಗಿ ಭಾಗವಹಿಸುತ್ತಾರೆ. ಈ ವಾರ ಒಳ್ಳೆ ಹುಡುಗ 'ಪ್ರಥಮ್' ಅತಿಥಿಯಾಗಿ ಆಗಮಿಸಿದ್ದಾರೆ.

ಸರ್ಪ್ರೈಸ್ ಕೊಟ್ಟ ಅಕುಲ್ ಬಾಲಾಜಿ

'ಸೂಪರ್ ಜೋಡಿ-2' ಕಾರ್ಯಕ್ರಮಕ್ಕೆ ಪ್ರಥಮ್ ಅತಿಥಿಯಾಗಿ ಬರ್ತಾರೆ ಎಂಬುದನ್ನ ನಿರೂಪಕ ಅಕುಲ್ ಬಾಲಾಜಿ ಹುಚ್ಚ ವೆಂಕಟ್ ಹೇಳಿರಲಿಲ್ಲ. ಈ ವೇಳೆ ವೆಂಕಟ್ ಕಣ್ಣಿಗೆ ಬಟ್ಟೆ ಕಟ್ಟಿದ್ದರು. ಆಗ ಪ್ರಥಮ್ ರಿಯಾಲಿಟಿ ಶೋ ವೇದಿಕೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟರು.['ಬಿಗ್ ಬಾಸ್' ಮನೆಯಿಂದ ಬಂದ 'ಬ್ಲಾಸ್ಟಿಂಗ್' ನ್ಯೂಸ್: ಇದು ನಿಜವೇ.?]

ಹೆಗಲ ಮೇಲೆ ಕೈಹಾಕಿದ ವೆಂಕಟ್

ಪ್ರಥಮ್ ಅವರ ಎಂಟ್ರಿಯಾದ ಮೇಲೆ, ಶತ್ರುಗಳು ಎನ್ನುವುದನ್ನ ಮರೆತು ಪರಸ್ಪರ ಇಬ್ಬರು ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡಿದ್ದು ಗಮನ ಸೆಳೆಯಿತು.

ಪ್ರಥಮ್ ಕೆಲಸವನ್ನ ಹೊಗಳಿದ ಫೈರಿಂಗ್ ಸ್ಟಾರ್

''ನೀನು ದುಡ್ಡು ಎಲ್ಲ ಕೊಟ್ಟಿದ್ದು ಗೊತ್ತಾಯಿತು. ಆಗ ಅಣ್ಣ ಆದವನು ಒಂದೇ ಹೇಳ್ತಾನೆ....ಗುಡ್ ಕಣೋ'' ಎಂದು ವೆಂಕಟ್ ಪ್ರಥಮ್ ಬಗ್ಗೆ ಮೆಚ್ಚುಗೆ ವ್ಯಪ್ತಪಡಿಸಿದರು.

'ಪ್ರಥಮ್'ರನ್ನ 'ತಮ್ಮ' ಎಂದ ವೆಂಕಟ್

'ಸೂಪರ್ ಜೋಡಿ-2' ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಪ್ರಥಮ್ ಅವರನ್ನ, ವೆಂಕಟ್ ಅವರು 'ತಮ್ಮ'ನಂತೆ ಭಾವಿಸಿದರು. ಇದು ಅವರ ಮಾತಿನಲ್ಲಿ ತಿಳಿಯಿತು. ಪ್ರಥಮ್ ಎಂಟ್ರಿಯಾದ ಮೇಲೆ ಹುಚ್ಚ ವೆಂಕಟ್ ''ಎಲ್ಲೋ ಒಬ್ಬನೆ ಬಂದ್ದಿದ್ದೀಯಾ? ಹುಡುಗೀರ್ ಬರ್ಲಿಲ್ವಾ?'' ಎಂದರು. ಅದಕ್ಕೆ ಪ್ರಥಮ್ ''ನಿಮ್ಮ ಹುಡುಗಿ ಇದ್ದಾರೆ ಅಲ್ವಾ ನೋಡೋಕೆ ಅಂದಾಗ, ವೆಂಕಟ್ ''ನಿಮ್ಮ ಅತ್ತಿಗೆ ನೋಡೋಕಾ'' ಎಂದು ಪ್ರಥಮ್ ಗೆ ಟಾಂಗ್ ಕೊಟ್ಟರು. ಆದ್ರೆ, ರೈತರಿಗೆ, ಯೋಧರಿಗೆ ನೆರವಾದ ಪ್ರಥಮ್ ಬಗ್ಗೆ ಮಾತನಾಡುವಾಗ, ''ನೀನು ದುಡ್ಡು ಎಲ್ಲ ಕೊಟ್ಟಿದ್ದು ಗೊತ್ತಾಯಿತು. ಆಗ, 'ಅಣ್ಣ' ಆದವನು ಒಂದೇ ಹೇಳ್ತಾನೆ....ಗುಡ್ ಕಣೋ'' ಎಂದು ಭಾವನಾತ್ಮಕನಾಗಿ ನುಡಿದರು.

'ಬಿಗ್ ಬಾಸ್' ಮನೆಯಲ್ಲಿ ಹಲ್ಲೆ ಮಾಡಿದ್ದ ವೆಂಕಟ್

'ಬಿಗ್ ಬಾಸ್ ಕನ್ನಡ 4' ಕಾರ್ಯಕ್ರಮಕ್ಕೆ ಅತಿಥಿಯಾಗಿ ಮನೆಯೊಳಗೆ ಹೋಗಿದ್ದ ಹುಚ್ಚ ವೆಂಕಟ್, ಪ್ರಥಮ್ ಅವರ ಮೇಲೆ ದೈಹಿಕ ಹಲ್ಲೆ ಮಾಡಿದ್ದರು.['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]

ಇಬ್ಬರ ಮಧ್ಯೆ 'ಫೋನ್'ನಲ್ಲಿ ಕಿರಿಕ್ ಆಗಿತ್ತು

ಇದಕ್ಕೂ ಮುಂಚೆ, ಪ್ರಥಮ್ ಹಾಗೂ ಹುಚ್ಚ ವೆಂಕಟ್ ಮಧ್ಯೆ ಚಿತ್ರವೊಂದಕ್ಕೆ ಸಂಬಂಧಿಸಿದಂತೆ ಫೋನ್ ನಲ್ಲಿ ಕಿರಿಕ್ ಮಾಡಿಕೊಂಡಿದ್ದರು. ನಾನಾ? ನೀನಾ? ಎಂದು ದೊಡ್ಡ ಜಗಳವಾಡಿಕೊಂಡಿದ್ದರು.

ಇದು ಟ್ರೈಲರ್ ಮಾತ್ರ, ಫುಲ್ ಫಿಕ್ಚರ್ ಬಾಕಿಯಿದೆ

ಸದ್ಯ, ಹುಚ್ಚ ವೆಂಕಟ್ ಮತ್ತು ಪ್ರಥಮ್ ದೋಸ್ತಿಯ ಟೀಸರ್ ಮಾತ್ರ ಬಹಿರಂಗವಾಗಿದೆ, ಫುಲ್ ಫಿಕ್ಚರ್ ಬಾಕಿಯಿದೆ. ಈ ಶನಿವಾರ ಮತ್ತು ಭಾನುವಾರ ಸ್ಟಾರ್ ಸುವರ್ಣವಾಹಿನಿಯಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗುವ 'ಸೂಪರ್ ಜೋಡಿ-2' ಕಾರ್ಯಕ್ರಮದಲ್ಲಿ ಈ ಫುಲ್ ಎಪಿಸೋಡ್ ನೋಡಬಹುದು.

ಈ ಲಿಂಕ್ ಕ್ಲಿಕ್ ಮಾಡಿ ಪ್ರೋಮೋ ನೋಡಿ

English summary
Kannada Actor-Director Huccha Venkat and Director- Biggboss kannada 4 Winner Pratham Become Friends. Venkat and Pratham Bought are Participate Super Jodi 2 Reality show in Star suvarna. here is the details.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada