Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೊದಲ ಬಾರಿಗೆ 'ಕೋಟ್ಯಧಿಪತಿ'ಯಲ್ಲಿ ಗಂಡ-ಹೆಂಡತಿ ಭಾಗಿ: ಇಬ್ಬರಲ್ಲಿ ಹೆಚ್ಚು ಗೆದ್ದಿದ್ಯಾರು?
ಕನ್ನಡದ ಕೋಟ್ಯಧಿಪತಿಯಲ್ಲೊಂದು ಅಚ್ಚರಿ ಸಂಗತಿ ನಡೆದಿದೆ. ತಮ್ಮ ಕುಟುಂಬದಿಂದ ಯಾರೋ ಒಬ್ಬರು ಕೋಟ್ಯಧಿಪತಿ ಹಾಟ್ ಸೀಟ್ ನಲ್ಲಿ ಕೂರುತ್ತಿದ್ದಾರೆ ಎಂದಾಗ ಎಷ್ಟು ಖುಷಿ ಆಗುತ್ತೆ. ಚೆನ್ನಾಗಿ ಆಡಿ, ಹೆಚ್ಚು ಹಣ ಗೆಲ್ಲಲಿ ಎಂದು ಕೇಳಿಕೊಳ್ಳುತ್ತಾರೆ. ಅದೇ ಒಂದೇ ಕುಟುಂಬದಿಂದ ಇಬ್ಬರು ಹಾಟ್ ಸೀಟ್ ನಲ್ಲಿ ಕುಳಿತುಕೊಂಡರೇ?
ಹೌದು, ಇಂತಹದೊಂದು ಘಟನೆ ನಡೆದಿದೆ. ಇದೇ ಮೊದಲ ಬಾರಿಗೆ ಕನ್ನಡದ ಕೋಟ್ಯಧಿಪತಿಯಲ್ಲಿ ಒಂದೇ ಕುಟುಂಬದ ಇಬ್ಬರು ಅಂದ್ರೆ ಗಂಡ ಮತ್ತು ಹೆಂಡತಿ ಇಬ್ಬರು ಕೂಡ ಸ್ಪರ್ಧಿಗಳಾಗಿ ಭಾಗವಹಿಸಿದ್ದಾರೆ. ಹೀಗೆ ಆಗುತ್ತಿರುವುದು ನಾಲ್ಕು ಆವೃತ್ತಿಗಳಲ್ಲಿ ಮೊದಲ ಸಲ.
ಕೋಟ್ಯಧಿಪತಿಯಲ್ಲಿ ರಾಷ್ಟ್ರೀಯ ಕ್ವಿಜ್ ಮಾಸ್ಟರ್ ಹರ್ಷ ಗಳಿಸಿದ್ದೆಷ್ಟು?
ಮೈಸೂರಿನಿಂದ ಪತ್ನಿ ಹಾಗೂ ತಿಪಟೂರಿನಿಂದ ಪತಿ ಕೋಟ್ಯಧಿಪತಿ ಪ್ರಶ್ನೆಗಳಿಗೆ ಉತ್ತರಿಸಿ ಇಬ್ಬರು ಆಯ್ಕೆಯಾಗಿದ್ದಾರೆ. ವಿಶೇಷ ಅಂದ್ರೆ ಇಬ್ಬರು ಕೂಡ ಹಾಟ್ ಸೀಟ್ ನಲ್ಲಿ ಕುಳಿತು ಆಟವಾಡಿದ್ದಾರೆ. ಅಷ್ಟಕ್ಕೂ, ಈ ಪತಿ ಮತ್ತು ಪತ್ನಿ ಯಾರು? ಇಬ್ಬರಲ್ಲಿ ಯಾರೂ ಜಾಸ್ತಿ ಗೆದ್ದರು? ಮುಂದೆ ಓದಿ....

ಮೊದಲ ಸಲ ದಂಪತಿ ಭಾಗಿ
ಇದೇ ಮೊದಲ ಬಾರಿಗೆ ಕನ್ನಡದ ಕೋಟ್ಯಧಿಯಲ್ಲಿ ಒಂದೇ ಕುಟುಂಬದ ಇಬ್ಬರು ಹಾಟ್ ಸೀಟ್ ನಲ್ಲಿ ಭಾಗವಹಿಸಿದ್ದಾರೆ. ತಿಪಟೂರು ಮೂಲದ ಜ್ಯೋತಿ ಬಿಪಿ ಮತ್ತು ಹರ್ಷ ಕೆ ದಂಪತಿ ಇಬ್ಬರು ಸರಿಯಾಗಿ ಉತ್ತರ ನೀಡಿ ಅದೃಷ್ಟದ ಆಟಕ್ಕೆ ಆಯ್ಕೆಯಾಗಿದ್ದಾರೆ. ಇಬ್ಬರು ಉಪನ್ಯಾಸಕರು ಎಂಬುವುದು ಮತ್ತೊಂದು ವಿಶೇಷ.
ಕನ್ನಡದ ಕೋಟ್ಯಧಿಪತಿಯಲ್ಲಿ ಸಿಕ್ಕ ಅವಕಾಶ ಕೈ ಚೆಲ್ಲಿದ ವಿಕಾಸ್

ಇಬ್ಬರಿಗೂ ಸಿಕ್ತು ಅವಕಾಶ
ಒಟ್ಟು ಆರು ಜನ ಈ ವಾರ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಆರು ಜನರಲ್ಲಿ ಗಂಡ ಮತ್ತು ಹೆಂಡತಿ ಇಬ್ಬರಿಗೂ ಅವಕಾಶ ಸಿಗುತ್ತಾ ಎಂಬ ಕುತೂಹಲ ಕಾಡ್ತಿತ್ತು. ಅದೃಷ್ಟ ಅನ್ಸುತ್ತೆ ಪತಿ ಮತ್ತು ಪತ್ನಿ ಇಬ್ಬರಿಗೂ ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳುವ ಅವಕಾಶ ಸಿಕ್ತು. ಇಬ್ಬರು ದುಡ್ಡ ಗೆದ್ದುಕೊಂಡು ಹೋದರು.

ಹರ್ಷ ಗೆದ್ದಿದ್ದೆಷ್ಟು?
ತಿಪಟೂರು ದಂಪತಿಯಲ್ಲಿ ಮೊದಲ ಹಾಟ್ ಸೀಟ್ ಗೆ ಅವಕಾಶ ಪಡೆದುಕೊಂಡಿದ್ದ ಹರ್ಷ ಕೆ. ಎರಡು ಸೇಫ್ ಝೋನ್ ಗಳನ್ನ ಯಶಸ್ವಿಯಾಗಿ ತಲುಪಿದ ಹರ್ಷ 3.20 ಲಕ್ಷ ಗೆದ್ದರು. ಹನ್ನೊಂದನೇ ಪ್ರಶ್ನೆಗೆ (6.40 ಲಕ್ಷದ ಪ್ರಶ್ನೆ) ತಪ್ಪು ಉತ್ತರ ನೀಡಿ ಆಟದಿಂದ ನಿರ್ಗಮನವಾದರು.

ಜ್ಯೋತಿ ಗಳಿಸಿದ ಹಣವೆಷ್ಟು?
ಪತಿ ಹರ್ಷ ಕೆ ಅವರು 3.20 ಲಕ್ಷ ಗೆದ್ದು ಖುಷಿಯಾದರು. ನಂತರ ವಿಕಾಸ್ ಎಂಬ ಸ್ಪರ್ಧಿ ಭಾಗವಹಿಸಿದರು. ಹೆಚ್ಚು ಸಮಯ ಆಡದ ವಿಕಾಸ್ ಬೇಗ ನಿರ್ಗಮಿಸಿದರು. ಅದಾದ ಬಳಿಕ ಮೂರನೇ ಸ್ಪರ್ಧಿಯಾಗಿ ಹಾಟ್ ಸೀಟ್ ಅಲಂಕರಿಸಿದ ಜ್ಯೋತಿ ಅವರು ನಿರೀಕ್ಷೆಯ ಮಟ್ಟ ತಲುಪಿಲಿಲ್ಲ. ಏಳನೇ ಪ್ರಶ್ನೆಗೆ ತಪ್ಪು ಉತ್ತರ ನೀಡಿ ಸೋಲು ಕಂಡರು.
ಕನ್ನಡದ ಕೋಟ್ಯಧಿಪತಿಯಲ್ಲಿ ಭರ್ಜರಿ ಬೇಟೆ ಮಾಡಿದ ಲಾರಿ ಡ್ರೈವರ್ ಈರಪ್ಪ

ಒಬ್ಬರಿಗೆ ಬೆಲ್ಲ, ಒಬ್ಬರಿಗೆ ಬೇವು
ಹಾಗ್ನೋಡಿದ್ರೆ ತಿಪಟೂರು ದಂಪತಿ ಇಬ್ಬರು ಸೇರಿ ದೊಡ್ಡ ಮೊತ್ತವನ್ನ ಗಳಿಸಿಕೊಂಡು ಹೋಗ್ತಾರೆ ಎಂಬ ನಿರೀಕ್ಷೆ ಇತ್ತು. ಅದರಂತೆ ಪತಿ ಹರ್ಷ 3.20 ಲಕ್ಷ ತನ್ನ ಖಾತೆಗೆ ಹಾಕಿಕೊಂಡರು. ಆದರೆ, ಪತ್ನಿ ಜ್ಯೋತಿ ಮಾತ್ರ ಕೇವಲ 10 ಸಾವಿರ ರೂಪಾಯಿಗೆ ತನ್ನ ಆಟ ಮುಗಿಸಿದರು. ಅಲ್ಲಿಗೆ ತಿಪಟೂರು ದಂಪತಿ 3.30 ಲಕ್ಷಕ್ಕೆ ತೃಪ್ತಿಯಾಗಬೇಕಾಯಿತು.