»   » 'ಡಬ್ಬಿಂಗ್, ರೀಮೇಕ್ ಬ್ಯಾನ್ ಮಾಡಿ' ಎಂದ ನಟ ಅನಂತ್ ನಾಗ್

'ಡಬ್ಬಿಂಗ್, ರೀಮೇಕ್ ಬ್ಯಾನ್ ಮಾಡಿ' ಎಂದ ನಟ ಅನಂತ್ ನಾಗ್

Posted By:
Subscribe to Filmibeat Kannada

'ಡಬ್ಬಿಂಗ್ ಬೇಡ' ಎಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದ್ದರೂ, ಹೋರಾಟಗಳು ನಡೆಯುತ್ತಿದ್ದರೂ, ಕನ್ನಡ ಚಿತ್ರರಂಗದಲ್ಲಿ 'ಡಬ್ಬಿಂಗ್' ನಡೆಯುತ್ತಲೇ ಇದೆ.

'ಡಬ್ಬಿಂಗ್ ಬೇಕು-ಬೇಡ' ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿರುವಾಗಲೇ, ನಟ ಅನಂತ್ ನಾಗ್ ''ನಾನು ಡಬ್ಬಿಂಗ್ ಗೆ ಸಪೋರ್ಟ್ ಮಾಡುವುದಿಲ್ಲ'' ಎಂದಿದ್ದಾರೆ.

'ಶೋ ಆಫ್', 'ಬಿಲ್ಡಪ್' ಎಂದು ನಟ ಅನಂತ್ ನಾಗ್ ಕರೆದಿದ್ದು ಯಾರಿಗೆ.?

ಹಾಗೇ ''ರೀಮೇಕ್ ಮಾಡುವುದನ್ನೂ ಬ್ಯಾನ್ ಮಾಡಿ'' ಎಂಬ ಹೇಳಿಕೆಯನ್ನ ನಟ ಅನಂತ್ ನಾಗ್ ನೀಡಿದ್ದಾರೆ. ಮುಂದೆ ಓದಿರಿ...

'ಸೂಪರ್ ಟಾಕ್ ಟೈಮ್'ನಲ್ಲಿ ನಟ ಅನಂತ್ ನಾಗ್

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟ ಅನಂತ್ ನಾಗ್ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಡಬ್ಬಿಂಗ್ ಹಾಗೂ ರೀಮೇಕ್ ವಿರುದ್ಧ ನಟ ಅನಂತ್ ನಾಗ್ ಮಾತನಾಡಿದ್ದಾರೆ.

ಡಬ್ಬಿಂಗ್ ಬಗ್ಗೆ ನಟ ಅನಂತ್ ನಾಗ್ ಮಾತು

''ನಾನು ಡಬ್ಬಿಂಗ್ ಗೆ ಸಪೋರ್ಟ್ ಮಾಡುವುದಿಲ್ಲ. ಡಬ್ಬಿಂಗ್ ಮಾಡಬೇಕು ಅಂತ ಯಾವ ಚಿತ್ರಗಳನ್ನು ಸೆಲೆಕ್ಟ್ ಮಾಡುತ್ತಾರೆ, ಆ ಚಿತ್ರಗಳನ್ನು ಆಯಾ ಭಾಷೆಗಳಲ್ಲಿ ನೋಡಲು ಯಾವುದೇ ಅಡ್ಡಿ ಇಲ್ಲ'' - ಅನಂತ್ ನಾಗ್, ನಟ

ಆಯಾ ಭಾಷೆಯ ಚಿತ್ರಗಳನ್ನೇ ನೋಡಲಿ..

''ಕರ್ನಾಟಕದಲ್ಲಿ ಎಲ್ಲ ಭಾಷೆಗಳ ಚಿತ್ರಗಳು ಬಿಡುಗಡೆ ಆಗುತ್ತವೆ. ಆದ್ದರಿಂದ ಅವುಗಳನ್ನು ಡಬ್ ಮಾಡುವ ಅವಶ್ಯಕತೆ ಇಲ್ಲ. ಯಾರಿಗೆ ಅಂಥ ಚಿತ್ರಗಳನ್ನು ನೋಡಬೇಕು ಎನಿಸುತ್ತದೆಯೋ, ಅವರು ಆ ಭಾಷೆಯಲ್ಲಿಯೇ ಚಿತ್ರಗಳನ್ನು ನೋಡುತ್ತಾರೆ'' ಎಂದು 'ಡಬ್ಬಿಂಗ್' ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ ನಟ ಅನಂತ್ ನಾಗ್.

ರೀಮೇಕ್ ಬ್ಯಾನ್ ಮಾಡಿ

ಹಾಗೇ, ''ರೀಮೇಕ್ ಕೂಡ ಬೇಡ. ರೀಮೇಕ್ ನೂ ಬ್ಯಾನ್ ಮಾಡಬೇಕು'' ಎಂದಿದ್ದಾರೆ ಅನಂತ್ ನಾಗ್.

English summary
'I don't support Dubbing' says Kannada Actor Anant Nag in Colors Super channel's popular show 'Super Talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada