»   » 'ಬಿಗ್ ಬಾಸ್' ಮನೆಗೆ ಹೋಗಲ್ಲ ಎಂದ 'ಲಕ್ಷ್ಮಿ ಬಾರಮ್ಮ' ಚಿನ್ನು ಕವಿತಾ

'ಬಿಗ್ ಬಾಸ್' ಮನೆಗೆ ಹೋಗಲ್ಲ ಎಂದ 'ಲಕ್ಷ್ಮಿ ಬಾರಮ್ಮ' ಚಿನ್ನು ಕವಿತಾ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಓಪನ್ನಿಂಗ್ ಗೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ 6 ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಬಿಗ್ ಬಾಸ್' ಐದನೇ ಆವೃತ್ತಿಗೆ ಅಧಿಕೃತ ಚಾಲನೆ ಸಿಗಲಿದೆ. ಈ ಬಾರಿ 'ಬಿಗ್ ಬಾಸ್' ಮನೆಯಲ್ಲಿ ಯಾರೆಲ್ಲ ಇರ್ತಾರೆ ಎಂಬುದನ್ನ ಕಣ್ಣಾರೆ ನೋಡಲು ನೀವು ಆರು ಗಂಟೆ ವರೆಗೂ ಕಾಯಲೇಬೇಕು.

ಇಲ್ಲಿಯವರೆಗೂ 'ಬಿಗ್ ಬಾಸ್' ಮನೆಗೆ 'ಇವರು' ಹೋಗ್ತಾರೆ, 'ಅವರು' ಹೋಗ್ತಾರೆ ಅಂತ ಹಲವಾರು ಪಟ್ಟಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಅದರಲ್ಲಿ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ 'ಚಿನ್ನು' ಪಾತ್ರದ ಮೂಲಕ ಖ್ಯಾತಿ ಗಳಿಸಿದ ಕವಿತಾ ಗೌಡ ಹೆಸರೂ ಕೇಳಿ ಬಂದಿತ್ತು.

Im not going to bigg boss says Kavitha Gowda

ಆರು ಜನ 'ಕಾಮನ್ ಮ್ಯಾನ್'ಗೆ ಒಲಿದ 'ದೊಡ್ಮನೆ' ಅವಕಾಶ

'ಫಸ್ಟ್ ಲವ್' ಚಿತ್ರದ ವಿವಾದದಿಂದ ಸುದ್ದಿ ಮಾಡಿದ್ದ ಕವಿತಾ ಗೌಡ ಈ ಬಾರಿ 'ಬಿಗ್ ಬಾಸ್' ಮನೆಗೆ ಹೋಗೋದು ಗ್ಯಾರೆಂಟಿ ಅಂತ ಹಲವರು ಲೆಕ್ಕಾಚಾರ ಹಾಕಿದ್ದರು. ಆದ್ರೆ, ಆ ಲೆಕ್ಕಾಚಾರ ಈಗ ಉಲ್ಟಾ ಆಗಿದೆ.

'ಬಿಗ್ ಬಾಸ್' ಮನೆಗೆ ಬರ್ತಾರೆ ಹೊರನಾಡ ಕನ್ನಡಿಗ.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕವಿತಾ ಗೌಡ ಭಾಗವಹಿಸುತ್ತಿಲ್ಲ. ಹಾಗಂತ ಸ್ವತಃ ಕವಿತಾ ಗೌಡ ಸ್ಪಷ್ಟ ಪಡಿಸಿದ್ದಾರೆ.

ಹೊಸ ಪಟ್ಟಿ: ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಹೋಗೋರು 'ಇವರೇ'!?

''ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಲು ನನಗೆ ಆಹ್ವಾನ ಬಂದಿಲ್ಲ. ಹೀಗಾಗಿ ನಾನು 'ಬಿಗ್ ಬಾಸ್' ಮನೆಗೆ ಹೋಗುತ್ತಿಲ್ಲ. ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸದ್ಯ ನಾನು 'ಜೀ ಕನ್ನಡ' ವಾಹಿನಿಯ 'ವಿದ್ಯಾ ವಿನಾಯಕ' ಕಾರ್ಯಕ್ರಮದಲ್ಲಿ ನಟಿಸುತ್ತಿದ್ದೇನೆ. ಧಾರಾವಾಹಿ ಶೀಘ್ರದಲ್ಲಿ ಪ್ರಸಾರ ಆಗಲಿದೆ'' ಎಂದು ಫೇಸ್ ಬುಕ್ ನಲ್ಲಿ ಕವಿತಾ ಗೌಡ ಬರೆದುಕೊಂಡಿದ್ದಾರೆ.

ಅಂತೂ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕವಿತಾ ಗೌಡ ಇರಲ್ಲ ಅನ್ನೋದು ಪಕ್ಕಾ ಆಯ್ತು. ಬೇರೆ ಯಾರೆಲ್ಲ ಇರ್ತಾರೆ ಅಂತ ಕಾದು ನೋಡೋಣ.

English summary
'I'm not going to Bigg Boss'' clarifies Serial Actress Kavitha Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada