»   » ಚಿತ್ರಗಳು: ಹುಬ್ಬಳ್ಳಿಯಲ್ಲಿ ನಡೆದ ವರ್ಣರಂಜಿತ 'ಮಜಾಭಾರತ' ಭರ್ಜರಿ ಫಿನಾಲೆ

ಚಿತ್ರಗಳು: ಹುಬ್ಬಳ್ಳಿಯಲ್ಲಿ ನಡೆದ ವರ್ಣರಂಜಿತ 'ಮಜಾಭಾರತ' ಭರ್ಜರಿ ಫಿನಾಲೆ

Posted By:
Subscribe to Filmibeat Kannada

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಜನರನ್ನು ನಕ್ಕು ನಗಿಸುವ ಕಾರ್ಯಕ್ರಮ 'ಮಜಾಭಾರತ' ಈಗ ಫಿನಾಲೆ ಹಂತವನ್ನು ತಲುಪಿದೆ.

'ಮಜಾಭಾರತ' ಭರ್ಜರಿ ಫಿನಾಲೆ ಕಾರ್ಯಕ್ರಮ ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿತ್ತು. ಕಿಕ್ಕಿರಿದ ಜನರ ಮಧ್ಯದಲ್ಲಿ ಕುಣಿದು ಕುಪ್ಪಳಿಸಿ, ಹುಬ್ಬಳ್ಳಿ ಜನತೆಯನ್ನು ರಂಜಿಸಿರುವ ಫಿನಾಲೆ ಕಾರ್ಯಕ್ರಮ ಅಕ್ಟೋಬರ್ 9, 10, 11 ರಂದು ಸೋಮವಾರ, ಮಂಗಳವಾರ ಮತ್ತು ಬುಧವಾರ ದಂದು ರಾತ್ರಿ 9 ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಮುಂದೆ ಓದಿರಿ....

'ಬಹದ್ದೂರ್' ಹುಡುಗನ 'ಭರ್ಜರಿ' ಡ್ಯಾನ್ಸ್

'ಮಜಾಭಾರತ' ಫಿನಾಲೆಯಲ್ಲಿ 'ಭರ್ಜರಿ' ಸಿನಿಮಾ ತಂಡ ಭಾಗವಹಿಸಿ, ನಟ ಧ್ರುವ ಸರ್ಜಾ ಹಾಗೂ ನಟಿ ವೈಶಾಲಿ ದೀಪಕ್ ಭರ್ಜರಿ ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದ್ದಾರೆ.

'ಅಶ್ವಿನಿ ನಕ್ಷತ್ರ' ಮಯೂರಿ

ನಟಿ ಮಯೂರಿ ಕೂಡ 'ಮಜಾಭಾರತ' ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ.

ತೀರ್ಪುಗಾರರ ಡ್ಯಾನ್ಸ್ ಪರ್ಫಾಮೆನ್ಸ್

ಇದೇ ಮೊಟ್ಟಮೊದಲ ಬಾರಿಗೆ 'ಮಜಾಭಾರತ' ತಂಡ, ಪ್ರೇಕ್ಷಕರ ಮುಂದೆ ಲೈವ್ ಸ್ಕಿಟ್ ಪ್ರಸ್ತುತ ಪಡಿಸಿದೆ. ತೀರ್ಪುಗಾರರಾದ ಶ್ರುತಿ ಹಾಗೂ ಎಸ್.ನಾರಾಯಣ್ ಮಸ್ತ್ ಡ್ಯಾನ್ಸ್ ಪರ್ಫಾಮೆನ್ಸ್ ಮೂಲಕ ನೆರೆದಿದ್ದವರನ್ನ ರಂಜಿಸಿದ್ದಾರೆ. ಜೊತೆಗೆ ಒಂದು ಲಕ್ಷ ಮೌಲ್ಯದ ಸೀರೆ ಹುಬ್ಬಳಿಯ ಅದೃಷ್ಟವಂತ ಪ್ರೇಕ್ಷಕರೊಬ್ಬರ ಪಾಲಾಗಿದೆ.

ಮಿಸ್ ಮಾಡದೆ ನೋಡಿ

ಆ ಒಂದು ಲಕ್ಷ ರೂಪಾಯಿ ಮೌಲ್ಯದ ಸೀರೆ ಹೇಗಿದೆ.? ಎಂತೆಂಥ ಸ್ಕಿಟ್ ಗಳು ಉತ್ತರ ಕರ್ನಾಟಕದ ನಾಡಿನಲ್ಲಿ ರಾರಾಜಿಸಿದವು ಎಂಬುದನ್ನ ತಿಳಿಯಲು ತಪ್ಪದೆ 'ಮಜಾಭಾರತ' ಫಿನಾಲೆ ನೋಡಿ.

English summary
Colors Super Channel's popular show 'Majabharatha' grand finale to telecast on October 9th, 10th and 11th at 9PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada