»   » ಡ್ಯಾನ್ಸ್ ಶೋಗೆ ಚಂದನ್ ಶೆಟ್ಟಿ ಯಾಕೆ.? ವಿನೋದ್ ರಾಜ್ ಕಣ್ಣಿಗೆ ಬೀಳ್ಲಿಲ್ವಾ.?

ಡ್ಯಾನ್ಸ್ ಶೋಗೆ ಚಂದನ್ ಶೆಟ್ಟಿ ಯಾಕೆ.? ವಿನೋದ್ ರಾಜ್ ಕಣ್ಣಿಗೆ ಬೀಳ್ಲಿಲ್ವಾ.?

Posted By:
Subscribe to Filmibeat Kannada
ಚಂದನ್ ಶೆಟ್ಟಿ ವಿನೋದ್ ರಾಜ್ ಅವರಿಗಿಂತ ಒಳ್ಳೆಯ ಡ್ಯಾನ್ಸರ್ ! ಹೌದಾ ? | Filmibeat Kannada

'ಬಿಗ್ ಬಾಸ್' ಕಾರ್ಯಕ್ರಮದ ವಿನ್ನರ್ ಆಗಿರುವ ಕಾರಣ ಚಂದನ್ ಶೆಟ್ಟಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿರಬಹುದು. ಚಂದನ್ ಶೆಟ್ಟಿ ಕಂಡ್ರೆ ಇಷ್ಟ ಪಡುವವರ ಸಂಖ್ಯೆ ದೊಡ್ಡದಿರಬಹುದು. ಆದ್ರೆ, ಅದೊಂದೇ ನೆಪಕ್ಕೆ ಸಂಬಂಧಪಡದ ಕ್ಷೇತ್ರಕ್ಕೆ ತೀರ್ಪುಗಾರರಾಗಿ ಚಂದನ್ ಶೆಟ್ಟಿ ರವರನ್ನ ಕರೆತಂದರೆ.? ಯಾರು ತಾನೆ ಸಹಿಸಿಕೊಳ್ತಾರೆ ಹೇಳಿ.!

ಹೌದು, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಬಿಗ್ ಬಾಸ್' ಕಾರ್ಯಕ್ರಮದ ವಿಜೇತರಾದ ಚಂದನ್ ಶೆಟ್ಟಿ ಇದೀಗ ಅದೇ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಾಸ್ಟರ್ ಡ್ಯಾನ್ಸರ್' ಶೋಗೆ ತೀರ್ಪುಗಾರರಾಗಿದ್ದಾರೆ.

ಚಂದನ್ ಶೆಟ್ಟಿ... ಕನ್ನಡ Rapper, ಪ್ರತಿಭಾವಂತ ಗಾಯಕ, ಸಂಗೀತ ಸಂಯೋಜಕ. ಇಂತಿಪ್ಪ ಚಂದನ್ ಶೆಟ್ಟಿ ಸಿಂಗಿಂಗ್ ಶೋಗೆ ಜಡ್ಜ್ ಆಗುವುದು ಬಿಟ್ಟು, ಡ್ಯಾನ್ಸ್ ಶೋ ಜಡ್ಜ್ ಆಗಿರುವುದು ಹಲವರಲ್ಲಿ ಬೇಸರ ಮೂಡಿಸಿದೆ.

ಚಂದನ್ ಶೆಟ್ಟಿ ಬದಲು ಸ್ಯಾಂಡಲ್ ವುಡ್ ನಲ್ಲಿ ಡ್ಯಾನ್ಸ್ ಕಿಂಗ್ ಅಂತಲೇ ಜನಪ್ರಿಯತೆ ಗಳಿಸಿರುವ ವಿನೋದ್ ರಾಜ್ ಅವರನ್ನ 'ಮಾಸ್ಟರ್ ಡ್ಯಾನ್ಸ್' ಕಾರ್ಯಕ್ರಮದ ತೀರ್ಪುಗಾರರ ಸ್ಥಾನಕ್ಕೆ ಕಲರ್ಸ್ ಸೂಪರ್ ಕರೆತರಬೇಕಿತ್ತು ಅಂತ ಹಲವರು ಫೇಸ್ ಬುಕ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿರಿ...

ಶುರು ಆಗಿದೆ ಟ್ರೋಲ್ ಗಳು

''ಚಂದನ್ ಶೆಟ್ಟಿ ಬದಲು ವಿನೋದ್ ರಾಜ್ ಅವರನ್ನ ಜಡ್ಜ್ ಆಗಿ ಕೂರಿಸಿ'' ಎಂಬ ಸಂದೇಶ ಸಾರುವ ಟ್ರೋಲ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿವೆ.

'ಮಾಸ್ಟರ್ ಡ್ಯಾನ್ಸರ್' ಶೋಗೆ ಚಂದನ್ ಶೆಟ್ಟಿ ಜಡ್ಜ್ ಆಗಿರೋದು ಈ ಕಾರಣಕ್ಕೆ.!

ಚಂದನ್ ಶೆಟ್ಟಿ ವಿರೋಧಿ ಅಲ್ಲ

''ನಾವು ಚಂದನ್ ಶೆಟ್ಟಿ ವಿರೋಧಿ ಅಲ್ಲ. ಆದ್ರೆ, ಚಂದನ್ ಶೆಟ್ಟಿ ಅವರನ್ನ ಡ್ಯಾನ್ಸಿಂಗ್ ಜಡ್ಜ್ ಆಗಿ ಸ್ವೀಕರಿಸಲು ಸಾಧ್ಯ ಆಗುತ್ತಿಲ್ಲ'' ಎಂಬುದು ಹಲವರ ಅಭಿಪ್ರಾಯ.

ಚಂದನ್ ಶೆಟ್ಟಿ ಆಯ್ಕೆ ಬಗ್ಗೆ ಶುರುವಾಯ್ತು ಪರ ವಿರೋಧ ಚರ್ಚೆ !

ಅಂದು ಅರ್ಜುನ್ ಜನ್ಯ ಇಂದು ಚಂದನ್ ಶೆಟ್ಟಿ

''ಬೇರೊಂದು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಅರ್ಜುನ್ ಜನ್ಯ ಅವರನ್ನು ಜಡ್ಜ್ ಆಗಿ ಸ್ವೀಕರಿಸಿದ್ದರೆ, ಚಂದನ್ ಶೆಟ್ಟಿ ಅವರನ್ನೂ ಸ್ವೀಕರಿಸಬೇಕು'' ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ.

ವಿನೋದ್ ರಾಜ್ ಇರಬೇಕಿತ್ತು

'ಮಾಸ್ಟರ್ ಡ್ಯಾನ್ಸರ್' ಶೋನಲ್ಲಿ ವಿನೋದ್ ರಾಜ್ ಇದ್ದಿದ್ದರೆ, ಶೋಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿತ್ತು ಎಂಬುದು ಹಲವರ ಅಭಿಪ್ರಾಯ.

ಈ ಪ್ರಶ್ನೆಗೆ ವಾಹಿನಿ ಬಳಿ ಉತ್ತರ ಇದ್ಯಾ.?

''ಒಬ್ಬ ಕಂಪೋಸರ್, ಸಾಹಿತಿ, ಹಾಡುಗಾರ ಹೇಗೆ ತಾನೇ ನೃತ್ಯ ಕಲೆಯನ್ನು ವಿಶ್ಲೇಷಿಸಿ ತೀರ್ಪುನೀಡಬಲ್ಲ.?'' ಎಂಬುದೇ ಅನೇಕರ ಪ್ರಶ್ನೆ ಆಗಿದೆ.

'ರಾಕ್ ಅಂಡ್ ರೋಲ್' ಶೋಗೆ ತೀರ್ಪುಗಾರರಾಗಿದ್ದರು

ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗಿದ್ದ 'ರಾಕ್ ಅಂಡ್ ರೋಲ್' ಕಾರ್ಯಕ್ರಮಕ್ಕೆ ವಿನೋದ್ ರಾಜ್ ತೀರ್ಪುಗಾರರಾಗಿದ್ದರು.

English summary
Instead of Kannada Rapper Chandan Shetty, Dance King Vinod Raj should have been judge for 'Master Dancer'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada