Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಝೇಂಡೇ ಲೆಕ್ಕಾಚಾರದಂತೆ ಎಲ್ಲವೂ ನಡೆಯುತ್ತಿದೆ: ಅನು ಆರ್ಯನನ್ನು ಕಳೆದುಕೊಳ್ಳುತ್ತಾಳಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಪುಷ್ಪಾ ಮತ್ತು ಸುಬ್ಬು ಅನುಳನ್ನು ನೋಡಲು ರಾಜನಂದಿನಿ ವಿಲಾಸಕ್ಕೆ ಬರುತ್ತಾರೆ. ಬರುತ್ತಿದ್ದಂತೆ ಆರಾಧನಾ ಇಬ್ಬರನ್ನೂ ತನ್ನ ರೂಮಿಗೆ ಕರೆದುಕೊಂಡು ಹೋಗುತ್ತಾಳೆ.
ನೀವಿಬ್ಬರು ನನ್ನ ಗಂಡನ ತಲೆಗೆ ಏನೇನೋ ತುಂಬಿದ್ದೀರಾ. ಹಾಗಾಗಿ ಈಗ ವಿಶು ತಾನು ಆರ್ಯವರ್ಧನ್ ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ. ನಿಮ್ಮಿಂದ ನನಗೆ ನನ್ನ ಗಂಡನಿಗೆ ತೊಂದರೆಯಾಗುತ್ತಿದೆ ಎಂದು ಹೇಳುತ್ತಾಳೆ.
'ಅವತಾರ್'
ಸಿನಿಮಾಕ್ಕೆ
ಹಿಂದೂ
ಧರ್ಮದ
ಜೊತೆ
ಕನೆಕ್ಷನ್:
ನಿರ್ದೇಶಕ
ಜೇಮ್ಸ್
ಕ್ಯಾಮರನ್
ಹೇಳಿದ್ದೇನು?
ಆರಾಧನಾ ಮಾತುಗಳನ್ನು ಕೇಳಿದ ಸುಬ್ಬು ಮತ್ತು ಪುಷ್ಪಾ ಶಾಕ್ ಆಗುತ್ತಾರೆ. ಆದರೆ ಅಷ್ಟರಲ್ಲಿ ಬಂದು ಶಾರದಾ ದೇವಿ ಅವರಿಬ್ಬರಿಗೆ ನಿಮ್ಮದೇನು ತಪ್ಪಿಲ್ಲ ಎಂಬಂತೆ ಮಾತನಾಡುತ್ತಾಳೆ. ಇನ್ನು ಅನುಗೆ ಈ ವಿಚಾರವನ್ನು ಹೇಳಲು ಸುಬ್ಬು ಅವಕಾಶ ಮಾಡಿಕೊಡುವುದಿಲ್ಲ.

ಝೇಂಡೇ ಮೋಸ ಮೀರಾಗೆ ಗೊತ್ತಾಯ್ತಾ..?
ಇತ್ತ ಝೇಂಡೇ, ಮೀರಾಳ ತಲೆ ಕೆಡಿಸುತ್ತಿದ್ದಾನೆ. ವರ್ಧನ್ ಕಂಪನಿಯ ಸೀಲ್ ಅನ್ನು ತರಿಸಿಕೊಂಡು ಖಾಲಿ ಹಾಳೆಗೆ ಸೀಲ್ ಹಾಕುತ್ತಾನೆ. ಮೀರಾ ಕೈನಲ್ಲಿ ಸಹಿ ಕೂಡ ಹಾಕಿಸಿಕೊಳ್ಳುತ್ತಾನೆ. ಮೀರಾಗೆ ಝೇಂಡೇ ಮಾತುಗಳ ಮೇಲೆ ಪೂರ ನಂಬಿಕೆ ಬರುವುದಿಲ್ಲ. ಆದರೂ ಝೇಂಡೇ ಹೇಳಿದ ಕಡೆ ಸಹಿ ಹಾಕುತ್ತಾಳೆ. ಏನೇ ಆದರೂ ಆರ್ಯ ಸರ್‌ಗೆ ಒಳ್ಳೆಯದಾಗಲಿ ಎಂದು ಹೇಳಿ ಮೀರಾ, ಝೇಂಡೇ ಹೇಳಿದ್ದನ್ನೆಲ್ಲಾ ಮಾಡುತ್ತಿರುತ್ತಾಳೆ. ಆದರೆ, ಝೇಂಡೇ ಖಾಲಿ ಹಾಳೆಗಳಿಗೆ ಸಹಿ ಹಾಕಿಸಿಕೊಂಡು ಮೋಸ ಮಾಡುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.

ಗೊಂದಲದಲ್ಲಿ ಸಿಲುಕಿದ ಮೀರಾ
ಇನ್ನು ಮೀರಾ, ಅನುಗೆ ಕಾಲ್ ಮಾಡುತ್ತಾಳೆ. ಝೇಂಡೇ ಹೇಳುತ್ತಿರುವುದು ಸತ್ಯ ಹೌದಾ ಇಲ್ಲವಾ ಎಂದು ಚೆಕ್ ಮಾಡುತ್ತಾಳೆ. ಆರ್ಯ ಸರ್ ಬಗ್ಗೆ ಎಲ್ಲಾ ಕಡೆ ಸುದ್ದಿಯಾಗುತ್ತಿರುವುದು ಸತ್ಯನಾ ಎಂದು ಅನುಳನ್ನು ಕೇಳುತ್ತಾಳೆ. ಅನು ಅನ್ನು ಸತ್ಯ ಎಂದು ಹೇಳುವುದೂ ಕಷ್ಟ. ಆದರೆ ನಿಜ ಎಂದು ಒಪ್ಪಿಕೊಳ್ಳದೇ ಇರಲು ಕೂಡ ಸಾಧ್ಯವಿಲ್ಲ. ಸದ್ಯಕ್ಕೆ ಆ ವಿಚಾರದ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳುತ್ತಾಳೆ. ಅನು ಮಾತನ್ನು ಕೇಳಿದ ಮೇಲೆ ಮೀರಾ ಇನ್ನಷ್ಟು ಗೊಂದಲಕ್ಕೆ ಒಳಗಾಗುತ್ತಾಳೆ. ಝೇಂಡೇ ಮಾತನ್ನು ನಂಬಬೇಕಾ, ಬೇಡವಾ ಎಂದು ತಲೆ ಕೆಡಿಸಿಕೊಳ್ಳುತ್ತಾಳೆ. ಮೀರಾ ಗೊಂದಲದಲ್ಲೇ ಮುಂದುವರಿಯುತ್ತಾಳೆ.

ಝೇಂಡೇ ಪ್ಲ್ಯಾನ್ ಸಕ್ಸಸ್ ಆಗುತ್ತಿದೆಯಾ..?
ಆರ್ಯವರ್ಧನ್ ಬದುಕಿರುವ ವಿಚಾರ ಅನುಗಾಗಲೀ, ವರ್ಧನ್ ಕುಟುಂಬಕ್ಕಾಗಲಿ ತಿಳಿಯಬಾರದು ಎಂದು ಝೇಂಡೇ ಫೇಕ್ ಡೆತ್ ಸರ್ಟಿಫಿಕೇಟ್ ಅನ್ನು ಕಳಿಸುತ್ತಾನೆ. ಅನು ಡೆತ್ ಸರ್ಟಿಫಿಕೇಟ್ ಅನ್ನು ಪಡೆಯುತ್ತಾಳೆ. ಆದರೂ ಅವಳಿಗೆ ವೈದ್ಯರು ಮಾತನಾಡಿದ ಮಾತುಗಳ ಮೇಲಿನ ಅನುಮಾನ ಕಡಿಮೆ ಆಗುವುದಿಲ್ಲ. ಈ ಬಗ್ಗೆ ಹರ್ಷವರ್ಧನ್ ಬಳಿಯೂ ಮಾತನಾಡುತ್ತಾಳೆ. ಆದರೆ ಝೇಂಡೇ ಪ್ಲ್ಯಾನ್ ಸಕ್ಸಸ್ ಆಗುತ್ತಿದೆ. ಅವನು ಅಂದುಕೊಂಡಂತೆಯೇ ಎಲ್ಲಾ ಕೆಲಸಗಳು ಸರಾಗವಾಗಿ ನಡೆಯುತ್ತಿದೆ. ಶಾರದಾಳನ್ನು ಭೇಟಿ ಮಾಡುತ್ತಾನೆ. ಮೀರಾ ಸಹಿ ಹಾಕಿದ ಪೇಪರ್‌ಗಳಿಗೆ ಶಾರದಾ ಬಳಿ ಸಹಿ ತೆಗೆದುಕೊಳ್ಳುತ್ತಾನೆ. ಸಂಜು ಮತ್ತು ಅನು ಮೇಲೆ ಅನುಮಾನ ಬರುವಂತೆ ಮಾತನಾಡುತ್ತಾನೆ.

ಸಂಜು ಅನು ಕೈ ತಪ್ಪುತ್ತಾನಾ..?
ಸಂಜುಗೆ ಎಚ್ಚರವಾದಾಗ ಆ ಡೆತ್ ಸರ್ಟಿಫಿಕೇಟ್ ಸುಳ್ಳು ಎಂದು ವಾದಿಸುತ್ತಾನೆ. ನಂತರ ಝೇಂಡೇ ತಿಂಡಿಯನ್ನು ತೆಗೆದುಕೊಂಡು ಹೋಗುತ್ತಾನೆ. ಸಂಜು ಬೇಸರದಲ್ಲಿರುತ್ತಾನೆ. ಆಗ ಝೇಂಡೇ, ಆರ್ಯ ಎಂದು ಸಂಜುನನ್ನು ಮಾತನಾಡಿಸುತ್ತಾನೆ. ಇದರಿಂದ ಸಂಜು ಶಾಕ್ ಆಗುತ್ತಾನೆ. ಸಂಜುನನ್ನು ತನ್ನತ್ತ ಸೆಳೆದುಕೊಳ್ಳುವುದೇ ಝೇಂಡೇಯ ಹೊಸ ಪ್ಲ್ಯಾನ್. ಇದು ಸಕ್ಸಸ್ ಆದರೆ ಅನು ಸಂಪೂರ್ಣವಾಗಿ ಆರ್ಯನನ್ನು ಕಳೆದುಕೊಳ್ಳುತ್ತಾಳಾ..?