»   » ಗಾಬರಿಗೊಂಡ ಅಂಜಲಿ: ಏನಾಗುವುದು ಇಂದು 'ಕಣ್ಮಣಿ'ಯಲ್ಲಿ.?

ಗಾಬರಿಗೊಂಡ ಅಂಜಲಿ: ಏನಾಗುವುದು ಇಂದು 'ಕಣ್ಮಣಿ'ಯಲ್ಲಿ.?

Posted By:
Subscribe to Filmibeat Kannada

ಕಿಶನ್ ಗೆ ಬಂದ ಪ್ರಾಜೆಕ್ಟ್ ಡಿಕೆ ಕಂಪನಿಯದ್ದು ಎಂದು ತಿಳಿದ ಅಂಜಲಿ ಗಾಬರಿಯಾಗುತ್ತಾಳೆ. ಡಿಕೆ 'ಕಾವ್ಯ ಗರ್ಮೆಂಟ್ಸ್' ಅಂತ ಹೆಸರಿಟ್ಟು ಅದರ ಮೊದಲ ಆಮಂತ್ರಣ ಪತ್ರವನ್ನ ಅವಳಿಗೆ ಕೊಟ್ಟ ಹಿಂದಿನ ಘಟನೆಗೆ ಜಾರುತ್ತಾಳೆ. ಕಿಶನ್ ಅವಳನ್ನ ಎಚ್ಚರಿಸಿ ಪ್ರಾಜೆಕ್ಟ್ ಬಗ್ಗೆ ಮಾತನಾಡಿದಾಗ ಅವನಿಗೆ ಉತ್ತರ ಕೊಡದೆ ಹೋಗುತ್ತಾಳೆ. ಅಂಜಲಿ ನಡವಳಿಕೆ ನೋಡಿ ಕಿಶನ್ ಗೆ ಗೊಂದಲ ಶುರು ಆಗುತ್ತೆ.

ಡಿಕೆ ತನಗಾಗಿ ಒಡವೆ ಮಾಡಿಸಿ, ತನಗೆ ಹಿಂಸೆ ಮಾಡಿ ತೊಡಿಸಿದ್ದನ್ನು ನೆನಪಿಸಿಕೊಂಡು ನಿದ್ದೆಯಿಂದ ಎದ್ದು ಕುಳಿತುಕೊಳ್ಳುತ್ತಾಳೆ. ಆಗ ಭಾವನ ಅವಳಿಗೆ ಸಮಾಧಾನ ಮಾಡುತ್ತಾಳೆ. 'ಕಾವ್ಯ ಗಾರ್ಮೆಂಟ್ಸ್' ಬಗ್ಗೆ ಗೂಗಲ್ ಸರ್ಚ್ ಮಾಡ್ತಾಳೆ ಅಂಜಲಿ, ಅದರ ಒಡೆಯ ಡಿಕೆ ಅನ್ನುವುದನ್ನ ಪಕ್ಕ ಮಾಡಿಕೊಳ್ತಾಳೆ.

ಡಿಕೆ ಕೊಟ್ಟ ಚೆಕ್ ಅವನಿಗೆ ತಲುಪಿಸಲು ಮತ್ತು ಅವನಿಂದ ಪಾರಾಗಲು ಜಗದೀಶ್ ಸನ್ಯಾಸಿ ವೇಷ ಹಾಕಿಕೊಳ್ಳುತ್ತಾನೆ. ಆ ವೇಷದಲ್ಲಿ ತಂದೆಯೂ ಕೂಡ ಅವನನ್ನ ಗುರುತು ಹಿಡಿಯದೇ ಹೋದಾಗ, ಇನ್ನೂ ಡಿಕೆ ಕಂಡು ಹಿಡಿಯೋಕೆ ಸಾಧ್ಯಾನೇ ಇಲ್ಲ ಅಂತ ಖುಷಿ ಪಡುತ್ತಾನೆ.

Kanmani serial: Anjali is shocked after knowing the truth about Kavya Garments

'ಕಣ್ಮಣಿ' ಧಾರಾವಾಹಿಯಲ್ಲಿ ಇಂದು ಅಂಜಲಿಗೆ ಕಾದಿದೆ ಅಚ್ಚರಿ.!

ಇತ್ತ ಡಿಕೆ ಕಾವ್ಯಾಳಿಗೆ ಒಡವೆ ತಂದದ್ದು, ಅವಳಿಗೆ ತೊಡಸಿ, ಅವಳ ಸೌಂದರ್ಯ ನೋಡಿ ಖುಷಿ ಪಟ್ಟಿದ್ದನ್ನ ನೆನಪಿಕೊಳ್ಳುತ್ತ, ಅವಳ ಒಡವೆಗಳನ್ನ ತಾನು ಸಾಯೋವರೆಗೂ ಜೋಪಾನವಾಗಿ ಇಟ್ಟಿರ್ತೀನಿ ಎಂದು ಭಾವುಕನಾಗುತ್ತಾನೆ.

ತನ್ನ ತಾಯಿಗೆ ಕಣ್ಣು ದಾನ ಮಾಡೋರು ಸಿಕ್ಕಿರುವ ವಿಷಯ ಆಶ್ರಮದವರು ತಿಳಿಸಿದಾಗ ಅಂಜಲಿ ಸಂತೋಷ ಪಡುತ್ತಾಳೆ. ಹಾಗೆ ತಾನು ಕಿಶನ್ ಆಫೀಸ್ ಗೆ ಹೋಗೋಕೆ ಹಿಂದೇಟು ಹಾಕುವಾಗ ಭಾವನ ಅವಳನ್ನ ಪ್ರಶ್ನಿಸುತ್ತಾಳೆ. ಕಿಶನ್ ಗೆ ಸಿಕ್ಕಿರುವ ಪ್ರಾಜೆಕ್ಟ್ 'ಡಿಕೆ'ದು ಎಂದು ಅಂಜಲಿ ಹೇಳಿದಾಗ ಭಾವನ ಗಾಬರಿಯಾಗುತ್ತಾಳೆ.

ಹಾಗಾದ್ರೆ, ಅಂಜಲಿ ಕಿಶನ್ ಜೊತೆ ಡಿಕೆ ಪ್ರಾಜೆಕ್ಟ್ ಮಾಡಲು ಒಪ್ಪುತ್ತಾಳ.? ತಪ್ಪದೇ ವೀಕ್ಷಿಸಿ ಇವತ್ತಿನ ಕುತೂಹಲ ಭರಿತ ಸಂಚಿಕೆ, ಕಣ್ಮಣಿ ರಾತ್ರಿ 10ಕ್ಕೆ.

English summary
Udaya TV's popular serial 'Kanmani' written update: Anjali is shocked after knowing the truth about Kavya Garments.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X