»   » ತಾಯಿ ಕಂಡಂತೆ ಗೋಲ್ಡನ್ ಸ್ಟಾರ್ ಗಣೇಶ್ ಅಂದು ಹೇಗಿದ್ದರು?

ತಾಯಿ ಕಂಡಂತೆ ಗೋಲ್ಡನ್ ಸ್ಟಾರ್ ಗಣೇಶ್ ಅಂದು ಹೇಗಿದ್ದರು?

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಈ ವಾರ ವೀಕೆಂಡ್ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳಲಿದ್ದಾರೆ. ತಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕನ್ನ ಕನ್ನಡ ಜನತೆಯ ಮುಂದೆ ಬಿಚ್ಚಿಡಲಿದ್ದಾರೆ. 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯ ಕೊನೆಯ ಅತಿಥಿ ನಟ ಗಣೇಶ್ ಆಗಿದ್ದು, ವೀಕೆಂಡ್ ಕಾರ್ಯಕ್ರಮಕ್ಕೆ ಗ್ರ್ಯಾಂಡ್ ಆಗಿ ಬೀಳ್ಕೊಡುಗೆ ನೀಡುವ ತಯಾರಿಯಲ್ಲಿದೆ ಜೀ ಕನ್ನಡ ತಂಡ.

ಈ ಮಧ್ಯೆ ಗಣೇಶ್ ಅವರ ಎಪಿಸೋಡ್ ನ ಪ್ರೋಮೋ ಒಂದು ಬಿಡುಗಡೆಯಾಗಿದ್ದು, ಗಣೇಶ್ ಅವರ ತಾಯಿ ಸುಲೋಚನಾ ಅವರು, ತಮ್ಮ ಮಗನ ಬಗ್ಗೆ ಮಾತನಾಡಿದ್ದಾರೆ. ಗಣೇಶ್ ಚಿಕ್ಕ ವಯಸ್ಸಿನಲ್ಲಿ ಹೇಗಿದ್ದರು, ಗಣೇಶ್ ಅವರ ಸಿನಿಮಾ ಕನಸು ಏನಾಗಿತ್ತು, ಅದಕ್ಕಾಗಿ ಅವರು ಏನೂ ಮಾಡುತ್ತಿದ್ದರು ಎಂಬ ಕೆಲವೊಂದು ಇಂಟ್ರೆಸ್ಟಿಂಗ್ ವಿಷ್ಯಗಳನ್ನ ವೀಕೆಂಡ್ ಟೆಂಟ್ ನಲ್ಲಿ ಹಂಚಿಕೊಂಡಿದ್ದಾರೆ.

ಗೋಲ್ಡನ್ ಸ್ಟಾರ್ ಅವರ ತಾಯಿ ಗಣೇಶ್ ಬಗ್ಗೆ ಏನಂದ್ರು ಎಂಬುದನ್ನ ಮುಂದೆ ಓದಿ.....

ಸಿನಿಮಾ ಅಂದ್ರೆ ಹುಚ್ಚು ಪ್ರೀತಿ

''ಚಿಕ್ಕ ವಯಸ್ಸಿನಲ್ಲಿ ಸ್ಕೂಲ್ ಗೆ ಹೋಗ್ತಿರಲಿಲ್ಲ. ಚಕ್ಕರ್ ಹಾಕಿ ಸಿನಿಮಾ ನೋಡೋಕೆ ಹೋಗ್ತಿದ್ದ. ಚಿಕ್ಕ ಹುಡುಗ ಇದ್ದಾಗಿಂದಲೂ ಅದು ಅಭ್ಯಾಸವಾಗಿ ಬಿಟ್ಟಿತ್ತು. ನೆಲಮಂಗಲ, ದಾಸರಹಳ್ಳಿಯಲ್ಲಿ ಇದೇ ಕೆಲಸ'' - ಸುಲೋಚನಾ, ಗಣೇಶ್ ತಾಯಿ

ವೀಕೆಂಡ್ ಸಾಧಕರ ಕುರ್ಚಿಯಲ್ಲಿ ಕೂರುವ ಮುಂಚೆ ಗಣೇಶ್ ಏನಂದ್ರು?

ಶಾಲೆಯಲ್ಲಿ ಒಂದು ಘಟನೆ

''ಸ್ಕೂಲ್ ನಲ್ಲಿ ಬಟ್ಟೆ ಬಿಚ್ಚಿ ಹೊರಗೆ ನಿಲ್ಲಿಸಿದ್ರು, ನಾನು ಬಿಡಿಸಿಕೊಳ್ಳೊಕೆ ಅಂತ ಹೋಗಿದ್ದೆ, ಆಗಾ ಅವನಿಗೆ ಒಂದು ಏಟು ಬೀಳಬೇಕಿತ್ತು. ಆದ್ರೆ, ಮಿಸ್ ಆಗಿ ನನಗೆ ಬಿತ್ತು. ಆ ಏಟು ಅವನಿಗೆ ಬಿದ್ದಿದ್ದರೆ, ಅವನ ಕಾಲು ಮುರಿದುಹೋಗ್ತಿತ್ತೇನೋ'' - ಸುಲೋಚನಾ, ಗಣೇಶ್ ತಾಯಿ

ಒಂದ್ಕಡೆ ಪವರ್ ಸ್ಟಾರ್, ಮತ್ತೊಂದೆಡೆ ಗೋಲ್ಡನ್ ಸ್ಟಾರ್: ಫುಲ್ ಧಮಾಕ.!

ಮನೆಯಲ್ಲಿ ಗಣೇಶ್ ಹೇಗಿದ್ದರು

''ಮನೆ ಒಂದು ರೀತಿ ಚಿಕ್ಕದು. ಅವನದೆ ಯಜಮಾನಿಕೆ. ಮನೆಯಲ್ಲಿ ಗಂಭೀರವಾಗಿರಬೇಕು. ಎಲ್ಲರು ಅವನ ಮಾತು ಕೇಳ್ಬೇಕು. ಮನೆಯಲ್ಲ ಸ್ವಚ್ಛವಾಗಿರಬೇಕು. ಅವನು ಮನೆಯಲ್ಲಿದ್ದರೇ ಪ್ರಶಾಂತವಾಗಿರಬೇಕು. ನನಗೆ ಗಜಿಬಿಜಿ ಇರಬಾರದು ಎಂದು ಹೇಳುತ್ತಿರುತ್ತಿದ್ದ'' - ಸುಲೋಚನಾ, ಗಣೇಶ್ ತಾಯಿ

'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ಮೇಲೆ ಕೂತ ನಟ ಗಣೇಶ್.!

ನನ್ನ ತಾಯಿಗೆ ಮಾತ್ರ ನಂಬಿಕೆ ಇತ್ತು

''ನಮ್ಮಪ್ಪ ಬೈದ್ರು, ನಮ್ಮ ತಾಯಿ ಹೇಳೋರು ''ಇಲ್ಲ ರೀ ಅವನೇನೋ ಮಾಡ್ತಾನೆ'' ಅಂತ. ಆಗ ನಮ್ಮಪ್ಪ ಹೇಳ್ತಿದ್ರು, ''ಅವನೇನೂ ಮಾಡಲ್ಲ ಕಣೇ'' ಅಂತ. ನಮ್ಮ ತಾಯಿನ ಬಿಟ್ಟರೇ, ನನ್ನ ಮೇಲೆ ಯಾರಿಗೂ ನಂಬಿಕೆ ಇರಲಿಲ್ಲ'' - ಗಣೇಶ್, ನಟ

ಇಂದು ಮಿಸ್ ಮಾಡ್ದೆ ನೋಡಿ

ಇದಿಷ್ಟು ಬರಿ ಪ್ರೋಮೋ. ಫುಲ್ ಎಪಿಸೋಡ್ ಇಂದು ರಾತ್ರಿ 9 ಗಂಟೆಗೆ ನಿಮ್ಮ ಜೀ ಕನ್ನಡಲ್ಲಿ ಪ್ರಸಾರವಾಗಲಿದೆ. ಇದು 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯ ಕೊನೆಯ ಸಂಚಿಕೆಯಾಗಿದ್ದು, ನಾಳೆಯೂ ಗಣೇಶ್ ಅವರ ಎಪಿಸೋಡ್ ಮುಂದುವರೆಯಲಿದೆ.

ಪ್ರೋಮೋ ನೋಡಿ

English summary
Kannada Actor Ganesh's Mother Sulochana speaks about Ganesh childhood days in Weekend With Ramesh-3

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada