»   » ನಟ ಸೂರಜ್ ಗೌಡ ಬಗ್ಗೆ ಅನೇಕರಿಗೆ ತಿಳಿಯದ ಸತ್ಯ ಸಂಗತಿ ಬಯಲು

ನಟ ಸೂರಜ್ ಗೌಡ ಬಗ್ಗೆ ಅನೇಕರಿಗೆ ತಿಳಿಯದ ಸತ್ಯ ಸಂಗತಿ ಬಯಲು

Posted By:
Subscribe to Filmibeat Kannada
Suraj Gowda, Kannada Actor speaks about his Cinema Journey | Filmibeat Kannada

ಪ್ರತಿಷ್ಟಿತ 'ತೂಗುದೀಪ ಪ್ರೊಡಕ್ಷನ್ಸ್'ನಲ್ಲಿ ಮೂಡಿಬಂದ 'ಮದುವೆಯ ಮಮತೆಯ ಕರೆಯೋಲೆ' ಚಿತ್ರವನ್ನ ನೋಡಿರುವವರಿಗೆ ನಟ ಸೂರಜ್ ಗೌಡ ಪರಿಚಯ ಇದ್ದೇ ಇರುತ್ತೆ.

ನಟನಾಗುವುದಕ್ಕೂ ಮುನ್ನ ಮಾಡೆಲಿಂಗ್ ಮಾಡುತ್ತಿದ್ದ ಸೂರಜ್, 'ಮಿಸ್ಟರ್ ಮೈಸೂರು', 'ಮಿಸ್ಟರ್ ಕರ್ನಾಟಕ' ಆಗಿ ಮೆರೆದಿದ್ದರು. ಅನೇಕ ಜಾಹೀರಾತುಗಳಲ್ಲೂ ಮಿಂಚಿದ್ದ ಸೂರಜ್ ಗೆ ದೊಡ್ಡ ನಟನಾಗಬೇಕು ಎಂಬ ಆಸೆ ಇತ್ತು. ಆ ಆಸೆ ಈಡೇರಿಸಿಕೊಳ್ಳಲು ಸೂರಜ್ ಪಟ್ಟ ಪಾಡು ಅಷ್ಟಿಷ್ಟಲ್ಲ.

ಯಾವುದೇ ಗಾಡ್ ಫಾದರ್ ಇಲ್ಲದೇ ಚಿತ್ರರಂಗಕ್ಕೆ ಕಾಲಿಡಲು ಮುಂದಾದ ಸೂರಜ್, ಒಂದಲ್ಲ ಎರಡಲ್ಲ ಬರೋಬ್ಬರಿ 84 ಆಡಿಷನ್ ಗಳನ್ನ ನೀಡಿದ್ದರು ಅನ್ನೋದು ನಿಮಗೆ ಗೊತ್ತಾ.?

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಸೂರಜ್ ಗೌಡ

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟ ಸೂರಜ್ ಗೌಡ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಚಿತ್ರರಂಗಕ್ಕೆ ತಾವು ಕಾಲಿಟ್ಟಿದ್ದು ಹೇಗೆ ಹಾಗೂ 84 ಆಡಿಷನ್ ಗಳಲ್ಲಿ ತಮಗಾದ ಕೆಲ ಕಹಿ ಅನುಭವಗಳನ್ನ ನಟ ಸೂರಜ್ ಗೌಡ ಹಂಚಿಕೊಂಡರು.

85 ಬಾರಿ ಆಡಿಷನ್ ಎದುರಿಸಿರುವ ಸೂರಜ್

ನಟ ಸೂರಜ್ ಗೌಡ ಮೂಲತಃ ಮೈಸೂರಿನವರು. ದೊಡ್ಡ ಸ್ಟಾರ್ ಆಗಬೇಕೆಂದು ಕನಸು ಕಂಡಿದ್ದ ಸೂರಜ್ ಗೌಡ, ನಟನಾಗಿ ಆಯ್ಕೆ ಆಗಲು ಬರೋಬ್ಬರಿ 85 ಬಾರಿ ಆಡಿಷನ್ ನೀಡಿದ್ದರಂತೆ.

ದುಡ್ಡು ಕೇಳ್ತಿದ್ರಂತೆ.!

ಕೆಲವು ಆಡಿಷನ್ ಗಳಲ್ಲಿ ಸೆಲೆಕ್ಟ್ ಆದರೂ, ನಟನಾಗಿ ಸೂರಜ್ ರನ್ನ ಲಾಂಚ್ ಮಾಡಲು ಚಿತ್ರತಂಡದವರು ದುಡ್ಡು ಕೇಳಿದ್ದರಂತೆ. 50 ಸಾವಿರದಿಂದ 5 ಕೋಟಿ ವರೆಗೂ ದುಡ್ಡು ಕೊಡಿ ಅಂತ ಡಿಮ್ಯಾಂಡ್ ಮಾಡಿದ್ದರಂತೆ.

ಆಡಿಷನ್ ನಲ್ಲಿ ಏನು ನಡೆಯುತ್ತಿತ್ತು.?

''ಆಡಿಷನ್ ನಲ್ಲಿ ಒಂದು ಸೀನ್ ಕೊಟ್ಟು ಆಕ್ಟ್ ಮಾಡಲು ಹೇಳುತ್ತಾರೆ. ನಂತರ ನಿಮ್ಮ ಕಡೆಯಿಂದ ನಮಗೇನು ಸಹಾಯ ಆಗುತ್ತೆ, ದುಡ್ಡು ಕೊಡ್ತೀರಾ ಅಂತೆಲ್ಲ ಕೇಳ್ತಾರೆ. ನಾವು ತುಂಬಾ ಚೆನ್ನಾಗಿ ಬಟ್ಟೆ ಹಾಕೊಂಡ್ ಹೋಗಿದ್ದರೆ, ಕೋಟಿಯಲ್ಲೇ ಮಾತನಾಡುತ್ತಾರೆ'' ಎಂದು ಸೂರಜ್ ಗೌಡ ಹೇಳಿದರು.

85ನೇ ಆಡಿಷನ್....

''ಮೈಸೂರಿನಿಂದ ಬಸ್ ಹತ್ತಿ ಬೆಂಗಳೂರಿಗೆ ಬಂದು 85 ಬಾರಿ ಆಡಿಷನ್ ಕೊಟ್ಟಿದ್ದೇನೆ. 85ನೇ ಆಡಿಷನ್ ತೂಗುದೀಪ ಪ್ರೊಡಕ್ಷನ್ ಗೆ ಕೊಟ್ಟಿದ್ದು. ಮೊದಲನೇ genuine ಆಡಿಷನ್ ನೋಡಿದ್ದು ಅಲ್ಲೇ. ಒಟ್ಟು 4800 ಜನ ಬಂದಿದ್ದರು. ಚೆನ್ನಾಗಿ ಆಕ್ಟಿಂಗ್ ಮಾಡುವವರು 1000 ಕ್ಕೂ ಹೆಚ್ಚು ಜನ ಇದ್ದರು. ಚೆನ್ನಾಗಿ ಕಾಣುವವರು 1500 ಕ್ಕೂ ಹೆಚ್ಚು ಜನ ಇದ್ದರು. ಆದ್ರೆ ಆಕ್ಟಿಂಗ್ ಮಾಡೋಕೆ ಬರುವವರು ನೋಡಲು ಚೆನ್ನಾಗಿರಲಿಲ್ಲ. ಚೆನ್ನಾಗಿರುವವರಿಗೆ ಆಕ್ಟಿಂಗ್ ಮಾಡಲು ಬರುತ್ತಿರಲಿಲ್ಲ. ಮಧ್ಯದಲ್ಲಿ ಇದ್ದದ್ದು ನಾನೊಬ್ಬನೇ. ನನ್ನ ಟೈಮ್ ಚೆನ್ನಾಗಿತ್ತು. ಸೆಲೆಕ್ಟ್ ಆದೆ'' ಎಂದರು ಸೂರಜ್ ಗೌಡ.

ಕನಸು ನನಸಾಯಿತು

''ಚಿಕ್ಕವಯಸ್ಸಿನಿಂದಲೂ ದರ್ಶನ್ ಸರ್ ನ ನೋಡಿಕೊಂಡು ಬೆಳೆದಿದ್ದೇವೆ. ನಮಗೆಲ್ಲ ಅವರು ರೋಲ್ ಮಾಡೆಲ್ ಇದ್ದ ಹಾಗೆ. ಅವರ ತರಹ ಬೆಳೆಯಬೇಕು ಎಂಬ ಆಸೆ ಇರುವವರಿಗೆ ಅವರದ್ದೇ ಪ್ರೊಡಕ್ಷನ್ ನಲ್ಲಿ ಲಾಂಚ್ ಆಗಿದ್ದು ನನ್ನ ಕನಸು ನನಸು ಆದ ಹಾಗೆ'' - ಸೂರಜ್ ಗೌಡ, ನಟ

English summary
Kannada Actor Suraj Gowda spoke about his 85 auditions in Colors Super Channel's popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada