For Quick Alerts
  ALLOW NOTIFICATIONS  
  For Daily Alerts

  'ರಿಯಲ್ ಗುರು' ಕಾಶೀನಾಥ್ ಗೆ ರಿಯಲ್ ಸ್ಟಾರ್ ಉಪೇಂದ್ರ ಕ್ಷಮೆ ಕೇಳಿದ್ಯಾಕೆ?

  |

  'ಪ್ರತಿಭೆಯನ್ನ ಗುರುತಿಸುವುದು ನಿಜವಾದ ದೊಡ್ಡ ಪ್ರತಿಭೆ ಅದು ನಮ್ಮ ಕಾಶೀ ಸರ್ ಬಳಿ ಜಾಸ್ತಿನೆ ಇದೆ'... ಇದು ರಿಯಲ್ ಸ್ಟಾರ್ ಉಪೇಂದ್ರ ತಮ್ಮ ರಿಯಲ್ ಗುರು ಕಾಶೀನಾಥ್ ಅವರ ಬಗ್ಗೆ ಆಡಿದ ಒಂದು ಮಾತು.[ಶಿಷ್ಯ ಉಪೇಂದ್ರ ಆಡಿದ ಮಾತಿಗೆ ಕಣ್ಣೀರಿಟ್ಟ ಗುರು ಕಾಶೀನಾಥ್! ]

  ಈ ವಾರದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ಕಾಶೀನಾಥ್ ಆಗಮಿಸಿದ್ದರು. ಈ ಸಂಚಿಕೆಯ ದೊಡ್ಡ ಹೈಲೈಟ್ ಅಂದರೆ ಉಪೇಂದ್ರ ಮತ್ತು ಕಾಶೀನಾಥ್ ಎಂಬ ಗುರು ಶಿಷ್ಯರ ಮಾತುಗಳು.[ಪುಟ್ಟಣ್ಣ ಕಣಗಲ್' ಬಳಿ ಅಸಿಸ್ಟಂಟ್ ಆಗಲು ಕಾಶೀನಾಥ್ ನಿರಾಕರಿಸಿದ್ದೇಕೆ?]

  ಉಪೇಂದ್ರ ತಮ್ಮ ಗುರು ಕಾಶೀನಾಥ್ ಬಗ್ಗೆ ಮಾತನಾಡಿದ ಒಂದು ಪ್ರೋಮೋ ದೊಡ್ಡ ಮಟ್ಟದಲ್ಲಿ ಕ್ಲಿಕ್ ಆಗಿತ್ತು. ಕಾರ್ಯಕ್ರಮದಲ್ಲಿ ಕೂಡ ಅವರ ಒಂದೊಂದು ಮಾತಿನಲ್ಲಿಯೂ 'ನಮ್ಮ ಕಾಶೀ ಸರ್'.. ಎನ್ನುವ ಪ್ರೀತಿ ಎದ್ದು ಕಾಣುತ್ತಿತ್ತು. ಈ ಅಪೂರ್ವ ಗುರು ಶಿಷ್ಯರ ಆ ದಿನಗಳ ಪಯಣ ಮುಂದಿದೆ ಓದಿ...

  ನೀವು ಅರ್ಹವಾದ ವ್ಯಕ್ತಿ

  ನೀವು ಅರ್ಹವಾದ ವ್ಯಕ್ತಿ

  ''ಸರ್... ನಮಸ್ಕಾರ ನನಗೆ ತುಂಬ ಸಂತೋಷ ಆಗುತ್ತಿದೆ... ನೀವು ಆ ಸೀಟ್ ನಲ್ಲಿ ಕೂರಲು ನಿಜವಾದ ಅರ್ಹವಾದ ವ್ಯಕ್ತಿ. ತುಂಬ ಖುಷಿ ಅನಿಸುತ್ತಿದೆ ಸರ್'' - ಉಪೇಂದ್ರ, ನಟ, ನಿರ್ದೇಶಕ ['ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಿನಲ್ಲಿ 'ಮನ್ಮಥ ರಾಜ' ಕಾಶೀನಾಥ್]

  ಮೊದಲ ಸಲ ನೋಡಿದ್ದು…

  ಮೊದಲ ಸಲ ನೋಡಿದ್ದು…

  ''ನಾನು ಫಸ್ಟ್ ಟೈಂ ಕಾಶೀ ಸರ್ ಅವರನ್ನ ನೋಡಿದ್ದು ಅವರ ಮನೆಗೆ ಹೋದಾಗ... ಆಗ ಅವರಿಗೆ ನಾನು ಬರೆದಿರುವುದನೆಲ್ಲ ತೋರಿಸಿದ್ದೆ. ಎಲ್ಲ ನೋಡಿ ಬೆನ್ನು ತಟ್ಟಿದರು. ಪ್ರತಿಭೆಯನ್ನ ಗುರುತಿಸುವುದು ದೊಡ್ಡ ಪ್ರತಿಭೆ. ಅದು ನಮ್ಮ ಕಾಶೀ ಸರ್ ಬಳಿ ಜಾಸ್ತಿನೆ ಇದೆ''. - ಉಪೇಂದ್ರ, ನಟ, ನಿರ್ದೇಶಕ. ['ರಾಜಕುಮಾರ' ಕಲೆಕ್ಷನ್ ಬಗ್ಗೆ ರಿಯಲ್ ಸ್ಟಾರ್ ಮೆಚ್ಚುಗೆ]

  ಸಿನಿಮಾ ಮಾಡುವುದರಲ್ಲಿ ಫರ್ಫೆಕ್ಟ್

  ಸಿನಿಮಾ ಮಾಡುವುದರಲ್ಲಿ ಫರ್ಫೆಕ್ಟ್

  ''ಇವತ್ತಿಗೂ ಒಂದು ಸಿನಿಮಾ ಅಂದ್ರೆ ತುಂಬ ಪ್ಲಾನ್ ಮಾಡುತ್ತಾರೆ. ಎಡಿಟೆಡ್ ಸ್ಕ್ರಿಪ್ಟ್ ಅಂತ ಮಾಡುತ್ತಿದ್ದರು. ಡೈಲಾಗ್ ಮತ್ತು ಶಾಟ್ ಗಳನ್ನ ಲೆಕ್ಕಾ ಹಾಕಿ ಫಫೆಕ್ಟ್ ಆಗಿ ಶೂಟಿಂಗ್ ಮಾಡುತ್ತಿದರು''. - ಉಪೇಂದ್ರ, ನಟ, ನಿರ್ದೇಶಕ.

  ಟ್ರೆಂಡ್ ಹುಟ್ಟುಹಾಕಿದ್ದ ಕಾಶೀನಾಥ್

  ಟ್ರೆಂಡ್ ಹುಟ್ಟುಹಾಕಿದ್ದ ಕಾಶೀನಾಥ್

  ''ಅನುಭವ, ಅನಂತನ ಅವಂತಾರ, ಅಜಗಜಾಂತರ ಸಿನಿಮಾಗಳು ಬಂದಾಗ ಅವರ ದೊಡ್ಡ ಟ್ರೆಂಡ್ ಇತ್ತು. ಆ ಕಾಲದಲ್ಲೇ ದೊಡ್ಡ ಫ್ಯಾನ್ ಫಾಲೋಯಿಂಗ್ ಅವರಿಗೆ ಇತ್ತು.'' - ಉಪೇಂದ್ರ, ನಟ, ನಿರ್ದೇಶಕ.

  ಕಾಶೀನಾಥ್ ಗೆ ತಾಳ್ಮೆ ಹೆಚ್ಚಿದೆ

  ಕಾಶೀನಾಥ್ ಗೆ ತಾಳ್ಮೆ ಹೆಚ್ಚಿದೆ

  ''ಎಂತಹ ಸಂದರ್ಭ ಬಂದರು ನಗುತ್ತಿರುತ್ತಾರೆ. ಅವರ ಆ ತಾಳ್ಮೆ ನಮಗೆ ಕಲಿಯುವುದಕ್ಕೆ ಆಗಲಿಲ್ಲ. ಕೆಲವು ಸಲ ಕೆಲಸದ ಟೈಂ ನಲ್ಲಿ ನಾನು ಅವರಿಗೆ ಏನಾದ್ರೂ ಅಂದು ಬಿಡುತ್ತಿದೆ. ಆಗ ಸುಮ್ಮನೆ ಕ್ಷಮಿಸುತ್ತಿದ್ದರು. ಅದು ಅವರ ದೊಡ್ಡ ಗುಣ''.- ಉಪೇಂದ್ರ, ನಟ, ನಿರ್ದೇಶಕ.[ಕಾಶೀನಾಥ್ 50 ನಾಟೌಟ್: ಕನ್ನಡ ಸಿನಿ ಪ್ರೇಮಿಗಳಿಂದ ಸಲ್ಯೂಟ್]

  ಅವರಿಂದ ಹೊರಬಂದಾಗ ನಾನು ನಿರ್ದೇಶಕ ಆದಾಗ....

  ಅವರಿಂದ ಹೊರಬಂದಾಗ ನಾನು ನಿರ್ದೇಶಕ ಆದಾಗ....

  ''ಅವರಿಂದ ಹೊರಬಂದು ನಾನು ನಿರ್ದೇಶಕನಾಗುವಾಗ ತುಂಬ ನೋವಾಯಿತು. ನಾನು ಒಂದು ಸಿನಿಮಾ ನಿರ್ದೇಶನ ಮಾಡುತ್ತೇನೆ ಅಂತ ಅವರಿಗೆ ಹೇಳಿದ್ದಾಗ ಒಳ್ಳೆಯ ಸಿನಿಮಾ ಮಾಡು.. ಅಂತ ಖುಷಿಯಿಂದ ಆಶೀರ್ವಾದ ಮಾಡಿ ಕಳುಹಿಸಿದರು''. - ಉಪೇಂದ್ರ, ನಟ, ನಿರ್ದೇಶಕ.

  ಮತ್ತೆ ಅವರ ಶಿಷ್ಯ ಆಗಿ ಬಿಡುತ್ತೇನೆ

  ಮತ್ತೆ ಅವರ ಶಿಷ್ಯ ಆಗಿ ಬಿಡುತ್ತೇನೆ

  ''ಇವತ್ತು ನಾನೊಬ್ಬ ಉಪೇಂದ್ರ ಆಗುವುದಕ್ಕೆ ಮುಖ್ಯ ಕಾರಣ ಅಂದರೆ ನಮ್ಮ ಗುರುಗಳು ಕಾಶೀ ಸರ್. ಈಗಲು ಅವರ ಮನೆ ನೋಡಿದಾಗ, ಕಾಶೀ ಸರ್ ನೆನಪಿಸಿಕೊಂಡಾಗ ಮತ್ತೆ ಅದೇ ತರ ಹುಡುಗನಾಗಿ ಬಿಡುತ್ತೇನೆ.. ಅವರ ಶಿಷ್ಯ ಆಗಿ ಬಿಡುತ್ತೇನೆ..'' - ಉಪೇಂದ್ರ, ನಟ, ನಿರ್ದೇಶಕ.

  ಕ್ಷಮಿಸಿ ಬಿಡಿ ಸರ್....

  ಕ್ಷಮಿಸಿ ಬಿಡಿ ಸರ್....

  ''ನಿಮ್ಮ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಆದರೆ ಈಗ ಮಾತಾಡುವುದಕ್ಕೆ ಒಂದು ಚಾನ್ಸ್ ಸಿಕ್ಕಿದೆ. ಅಕಸ್ಮತ್ ನಾನು ಏನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ಬಿಡಿ ಸರ್''... ಹೀಗೆ ಹೇಳಿ ಉಪೇಂದ್ರ ಕಣ್ಣೀರಿಟ್ಟರು.

  ಉಪ್ಪಿ ಬಗ್ಗೆ ಕಾಶೀನಾಥ್ ಹೇಳಿದ್ದೇನು?

  ಉಪ್ಪಿ ಬಗ್ಗೆ ಕಾಶೀನಾಥ್ ಹೇಳಿದ್ದೇನು?

  ಉಪೇಂದ್ರ ಬಳಿ ನಾಟಕೀಯತೆ ಇರಲಿಲ್ಲ. ಅವನು ಚಮಚಗಿರಿ ಮಾಡುತ್ತಿರಲಿಲ್ಲ, ಅವನು ಹೃದಯದಿಂದ ಮಾತನಾಡುತ್ತಿದ್ದ. -ಕಾಶೀನಾಥ್, ನಿರ್ದೇಶಕ

  ಇದು ಕಾರ್ಯಕ್ರಮದ ಅತ್ಯುತ್ತಮ ದೃಶ್ಯ

  ಇದು ಕಾರ್ಯಕ್ರಮದ ಅತ್ಯುತ್ತಮ ದೃಶ್ಯ

  ಉಪೇಂದ್ರ ಆಡಿದ ಮಾತುಗಳನ್ನ ಕೇಳಿ ಕಾಶೀನಾಥ್ ಸಹ ಭಾವುಕರಾದರು. ಇಂತಹ ಶಿಷ್ಯರನ್ನ ಪಡೆದಿರುವುದಕ್ಕೆ ನಾನು ಪುಣ್ಯ ಮಾಡಿದ್ದೇನೆ ಅಂತ ಕಾಶೀನಾಥ್ ಹೇಳಿದರು. ಇದು ಇಡೀ ಕಾರ್ಯಕ್ರಮದ ಅತ್ಯುತ್ತಮ ದೃಶ್ಯವಾಗಿತ್ತು.

  English summary
  Kannada Actor, Director Kashinath and Real Star Upendra becomes emotional in Zee Kannada Channel's popular show Weekend with Ramesh-3

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X