ಪ್ರೇಮಾ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದ ಆ ಎರಡು ಘಟನೆ ಬಗ್ಗೆ ಮಾತನಾಡ್ತಾರಾ?

Recommended Video

Weekend With Ramesh Season 4: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತೋರಿಸದ ರಾಘಣ್ಣ ಇವರೇ..

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ರಾಘವೇಂದ್ರ ರಾಜ್ ಕುಮಾರ್ ನಂತರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಿರಿಯ ನಟಿ ಪ್ರೇಮಾ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಈಗಾಗಲೇ ಪ್ರೋಮೋ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಸವ್ಯಸಾಚಿ' ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ಪ್ರೇಮಾ ಎರಡನೇ ಸಿನಿಮಾದಲ್ಲೇ ರಾಜ್ಯ ಪ್ರಶಸ್ತಿ ಪಡೆದುಕೊಂಡರು. ಅಲ್ಲಿಂದ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡ ಪ್ರೇಮಾ, 90ರ ದಶಕದಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದು ನಿಂತರು.

ನಂತರ ಉದ್ಯಮಿ ಜೀವನ್ ಅಪ್ಪಚ್ಚು ಅವರನ್ನ ಮದುವೆಯಾದ ಬಳಿಕ ಬಣ್ಣದ ಲೋಕದಿಂದ ನಿಧಾನವಾಗಿ ದೂರ ಸರಿದರು. ಅಲ್ಲಿಂದ ಪ್ರೇಮಾ ಹೆಚ್ಚಾಗಿ ಸಿನಿಮಾನೂ ಮಾಡಲಿಲ್ಲ. ಈ ನಡುವೆ ಪ್ರೇಮ ಕುರಿತು ಗಾಸಿಪ್ ಗಳು ಹರಿದಾಡಿದವು. ಆದ್ರೆ, ಇದುವರೆಗೂ ಈ ಬೆಳವಣಿಗೆ ಬಗ್ಗೆ ಮುಕ್ತವಾಗಿ ಪ್ರೇಮಾ ಮಾತನಾಡಿಲ್ಲ. ಇದೀಗ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದರಿಂದ ಆ ಘಟನೆಗಳ ಬಗ್ಗೆ ಮಾತನಾಡಬಹುದು ಎಂಬ ಕುತೂಹಲ ಕಾಡುತ್ತಿದೆ. ಮುಂದೆ ಓದಿ.....

ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಬಹುದು

ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಬಹುದು

ನಟಿ ಪ್ರೇಮ ಅವರ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಹರಿದಾಡಿದ್ವು. ಸಿನಿಮಾರಂಗದಿಂದ ಪ್ರೇಮಾ ದೂರವಾಗಲು ಅವರ ಅನಾರೋಗ್ಯ ಕಾರಣ ಎಂದು ಹೇಳಲಾಗುತ್ತಿದೆ. ಒಂದು ಮೂಲದ ಪ್ರಕಾರ ಪ್ರೇಮಾಗೆ ಕ್ಯಾನ್ಸರ್ ಇತ್ತು ಎಂದು ದೊಡ್ಡ ಚರ್ಚೆಯಾಗಿತ್ತು.

ಶಾರ್ಟ್ ಹೇರ್ ಮಾಡಿಸಿದ್ದು ಚರ್ಚೆಗೆ ಪುಷ್ಠಿ ನೀಡಿತ್ತು

ಶಾರ್ಟ್ ಹೇರ್ ಮಾಡಿಸಿದ್ದು ಚರ್ಚೆಗೆ ಪುಷ್ಠಿ ನೀಡಿತ್ತು

ಇದೇ ಸಮಯದಲ್ಲಿ ಪ್ರೇಮಾ ಅವರು ಶಾರ್ಟ್ ಹೇರ್ ಸ್ಟೈಲ್ ಬೇರೆ ಮಾಡಿಸಿದ್ದರು. ಇದು ಅವರ ಅನಾರೋಗ್ಯಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು. ಅದೇ ಸಮಯದಲ್ಲಿ 'ಶಿಶಿರ' ಸಿನಿಮಾದಲ್ಲಿ ನಟಿಸಿದ್ದರು. ಪ್ರೇಮಾ ಆರೋಗ್ಯದ ಬಗ್ಗೆ ಹರಿದಾಡಿದ್ದ ಸುದ್ದಿ ನಿಜಾ ಇರಬಹುದು ಎಂದು ಅನೇಕರು ನಂಬಿದರು. ಆದ್ರೆ, ಖಾಸಗಿ ವಾಹಿನಿಯೊಂದಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರೇಮಾ ''ಇದೆಲ್ಲಾ ಸುಳ್ಳು, ನಾನು ಆರೋಗ್ಯವಾಗಿದ್ದೀನಿ'' ಎಂದಿದ್ದರು.

ಸಾಂಸಾರಿಕ ಜೀವನದಲ್ಲಿ ಬಿರುಕು ಇದ್ಯಾ?

ಸಾಂಸಾರಿಕ ಜೀವನದಲ್ಲಿ ಬಿರುಕು ಇದ್ಯಾ?

2006ರಲ್ಲಿ ಜೀವನ್ ಅಪ್ಪಚ್ಚು ಅವರನ್ನ ನಟಿ ಪ್ರೇಮಾ ಮದುವೆ ಆಗಿದ್ದರು. ಆದ್ರೆ, ಇವರಿಬ್ಬರ ಸಂಸಾರ ಅಂದುಕೊಂಡಂತೆ ಚೆನ್ನಾಗಿರಲಿಲ್ಲ ಎಂಬ ಮಾತಿದೆ. ದಾಂಪತ್ಯದಲ್ಲಿ ಬಿರುಕು ಇದ್ದ ಕಾರಣ ವಿಚ್ಛೇದನಕ್ಕೆ ಮುಂದಾಗಿದ್ದರು ಎಂಬ ಚರ್ಚೆಯೂ ಆಗಿತ್ತು. ಈ ಬಗ್ಗೆ ಸ್ಪಷ್ಟ ಮಾಹಿತಿ ಪ್ರೇಮಾ ಅವರೇ ಹೇಳಬೇಕಿದೆ.

ಪ್ರೋಮೋದಲ್ಲಿ ಸುಳಿವು ನೀಡಲಾಗಿದೆ

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪ್ರೇಮಾ ಭಾಗವಹಿಸಿರುವ ಪ್ರೋಮೋ ಬಿಡುಗಡೆಯಾಗಿದ್ದು, ಈ ಎರಡು ವಿಷ್ಯದ ಬಗ್ಗೆ ನಟಿ ಮಾತನಾಡಿದ್ದಾರೆ. ಆ ಪ್ರೋಮೋದಲ್ಲಿ ಇದು ಬಹಿರಂಗವಾಗಿದ್ದು, ಸಹಜವಾಗಿ ಕುತೂಹಲ ಕಾಡುತ್ತಿದೆ. ಈ ವಾರ ಪ್ರೇಮಾ ಎಪಿಸೋಡ್ ಟೆಲಿಕಾಸ್ಟ್ ಆಗುತ್ತಿದ್ದು, ಸತ್ಯಾಂಶ ಏನೂ ಎಂಬುದು ಅವರಿಂದಲೇ ತಿಳಿಯಲಿದೆ.

More from Filmibeat

English summary
Kannada actress prema participate in weekend with ramesh 4. Episode will telecasting this weekend. will prema clarified about her health gossip?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X