Don't Miss!
- News
ದೆಹಲಿ ಮದ್ಯ ಹಗರಣದ ಹಣವನ್ನು ಗೋವಾ ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡ ಎಎಪಿ: ಇಡಿ ಹೇಳಿಕೆಯಲ್ಲಿ ಏನಿದೆ?
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡದ ಯಾವ ಧಾರಾವಾಹಿ ನಂಬರ್ 1
ಕನ್ನಡದ ಹಲವು ಟಿವಿ ಚಾನೆಲ್‌ಗಳಲ್ಲಿ ಹಲವು ಧಾರಾವಹಿಗಳು ದಿನಂಪ್ರತಿ ಪ್ರಸಾರವಾಗುತ್ತಿವೆ. ಇವುಗಳಲ್ಲಿ ಯಾವ ಧಾರಾವಾಹಿ ಮೊದಲ ಸ್ಥಾನದಲ್ಲಿದೆ, ಯಾವ ಧಾರಾವಾಹಿ ಎಷ್ಟನೇ ಸ್ಥಾನದಲ್ಲಿದೆ ಎಂದು ಪ್ರತಿ ವಾರ ಟಿಆರ್‌ಪಿ ರೇಟಿಂಗ್‌ನಿಂದ ತಿಳಿದು ಬರುತ್ತದೆ.
ಈ ವಾರ ಕನ್ನಡದ ಯಾವ ಧಾರಾವಾಹಿ ಯಾವ ಸ್ಥಾನದಲ್ಲಿದೆ ಎಂಬುದನ್ನು ತಿಳಿಸುವ ಟಿಆರ್‌ಪಿ ಪಟ್ಟಿ ಇಲ್ಲಿದೆ. ನಿಮ್ಮ ಮೆಚ್ಚಿನ ಧಾರಾವಾಹಿಯ ಟಿಆರ್‌ಪಿ ರೇಟಿಂಗ್ ಎಷ್ಟು ಎಂಬುದನ್ನು ತಿಳಿದುಕೊಳ್ಳಿ. ನೆನಪಿರಲಿ ಇದು ಒಂದು ವಾರದ ಟಿಆರ್‌ಪಿ ರೇಟಿಂಗ್ ಮಾತ್ರ.
Gattimela:
ಸಾವಿರ
ಸಂಚಿಕೆಯತ್ತ
'ಗಟ್ಟಿಮೇಳ'
ಧಾರಾವಾಹಿ
'ಗಟ್ಟಿಮೇಳ' ಧಾರಾವಾಹಿ ತನ್ನ ಸ್ಥಾನವನ್ನು ಭದ್ರಮಾಡಿಕೊಂಡು ಟಾಪ್ ಒಂದರಲ್ಲೇ ಮುನ್ನುಗ್ಗಿ ಹೋಗುತ್ತಿದೆ. ಗಟ್ಟಿಮೇಳ ಸೀರಿಯಲ್ ಟಾಪ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಕೌಟುಂಬಿಕ ಧಾರಾವಾಹಿ ಆಗಿರುವ ಕಾರಣ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಧಾರಾವಾಹಿ 10.4 ಟಿಆರ್‌ಪಿಯನ್ನು ಪಡೆದುಕೊಂಡಿದೆ.
ಟಾಪ್ ಒಂದರಲ್ಲಿ ಇದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ತನ್ನ ಟಾಪ್ ಒನ್ ಸ್ಥಾನವನ್ನು ಬಿಟ್ಟುಕೊಟ್ಟು ಟಾಪ್ 2 ಸ್ಥಾನಕ್ಕೆ ಬಂದಿದೆ. ಮಗಳ ಮದುವೆ ಮಾಡಲು ಪುಟ್ಟಕ್ಕ ಪಡಬಾರದ ಕಷ್ಟವನ್ನು ಪಡುತ್ತಿದ್ದಾಳೆ. ರಾಜಿಯ ಕುತಂತ್ರಕ್ಕೆ ಪುಟ್ಟಕ್ಕ ಬಲಿಯಾಗಿದ್ದಾಳೆ. ಈ ಧಾರಾವಾಹಿ 9.09 ಟಿಆರ್‌ಪಿಯನ್ನು ಪಡೆದುಕೊಂಡಿದೆ.

ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಧಾರಾವಾಹಿ ಯಾವುದು?
ಟಾಪ್ 2 ನಲ್ಲಿದ್ದ ಶ್ರೀರಸ್ತು ಮತ್ತು ಶುಭಮಸ್ತು ಧಾರಾವಾಹಿ ಟಾಪ್ 3 ಸ್ಥಾನವನ್ನು ಪಡೆದುಕೊಂಡಿದೆ. ಅತ್ತೆ ಸೊಸೆ ಮಗನ ನಡುವಿನ ಭಾಂದವ್ಯ ನೋಡುಗರಿಗೆ ಬಹಳ ಇಷ್ಟವಾಗಿದೆ. ಇದು ಟಿಆರ್‌ಪಿಯಲ್ಲಿ 8.08 ಪಡೆದುಕೊಂಡಿದೆ.
ಟಾಪ್ 4ರಲ್ಲಿ ಸತ್ಯ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಆರಕ್ಕೇರದೆ ಮೂರಕ್ಕಿಳಿಯದೆ ಸತ್ಯ ಧಾರಾವಾಹಿಯನ್ನು ಜನರು ನೋಡುತ್ತಿದ್ದಾರೆ. ಇದರಲ್ಲಿ ಸತ್ಯ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಇದು ಟಿಆರ್‌ಪಿಯಲ್ಲಿ 7.3ಸ್ಥಾನವನ್ನು ಪಡೆದುಕೊಂಡಿದೆ.

ಹಿಟ್ಲರ್ ಕಲ್ಯಾಣಕ್ಕೆ ಎಷ್ಟನೇ ಸ್ಥಾನ?
ಟಾಪ್ 3ರಲ್ಲಿ ಭಾಗ್ಯಲಕ್ಷ್ಮೀ ಸ್ಥಾನವನ್ನು ಪಡೆದುಕೊಂಡಿತ್ತು ಆದರೆ ಕಳೆದ ವಾರ ಬಂದ ಟಿಆರ್‌ಪಿಯಲ್ಲಿ 5ನೇ ಸ್ಥಾನವನ್ನು ಪಡೆದಿದೆ.ಅಕ್ಕ ತಂಗಿಯ ಭಾಂದವ್ಯವನ್ನು ನೋಡುವಂತೆ ಮಾಡುವಲ್ಲಿ ಭಾಗ್ಯಲಕ್ಷ್ಮೀ ಧಾರಾವಾಹಿ ಹಿಡಿದಿಟ್ಟುಕೊಂಡಿದೆ. ಇದು 7.0 ಟಿಆರ್‌ಪಿಯನ್ನು ಪಡೆದುಕೊಂಡಿದೆ. ಟಾಪ್ 6ರಲ್ಲಿ ಹಿಟ್ಲರ್ ಕಲ್ಯಾಣ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಪ್ರೇಕ್ಷಕರು ಹಿಟ್ಲರ್ ಕಲ್ಯಾಣವನ್ನು ನೋಡುತ್ತಿದ್ದಾರೆ. ಲೀಲಾ ಮಾಡದ ತಪ್ಪಿಗೆ ಶಿಕ್ಷೆ ಅನುಭನಿಸುವಂತಾಗಿದೆ. ಟಿಆರ್‌ಪಿಯಲ್ಲಿ 6.9 ಪಡೆದಿದೆ. ಹಿಟ್ಲರ್ ಕಲ್ಯಾಣ ಕಳೆದ ಬಾರಿ 5ನೇ ಸ್ಥಾನದಲ್ಲಿತ್ತು.ಈ ಬಾರಿ 6ನೇ ಸ್ಥಾನವನ್ನು ಪಡೆದಿದೆ.

'ಜೊತೆ ಜೊತೆಯಲಿ'ಗೆ ಎಷ್ಟನೇ ಸ್ಥಾನ
ಟಾಪ್ 7ರಲ್ಲಿ ಕೆಂಡಸಂಪಿಗೆ ಧಾರಾವಾಹಿ ಸ್ಥಾನವನ್ನು ಪಡೆದುಕೊಂಡಿದೆ. ಕಾರ್ಪೊರೇಟರ್ ತೀರ್ಥ ಬಡ ಹುಡುಗಿಯನ್ನು ಮದುವೆಯಾಗಿ ಹೇಗೆ ಎಂಎಲ್‌ಎ ಪಟ್ಟ ಅಲಂಕರಿಸುವ ರೀತಿ ಧಾರಾವಾಹಿ ಕಥೆಯಾಗಿದೆ. ಇದು ತನ್ನ ಟಾಪ್ 7 ಸ್ಥಾನವನ್ನು ಹಾಗೇ ಉಳಿಸಿಕೊಂಡಿದೆ. 5.5 ಟಿಆರ್‌ಪಿಯನ್ನು ಪಡೆದುಕೊಂಡಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲ್ಲಿ ಸೀರಿಯಲ್ ತನ್ನದೇ ಅದ ಪ್ರೇಕ್ಷಕರ ಬಳಗವನ್ನು ಹೊಂದಿದೆ. ಟಾಪ್ 6ರಲ್ಲಿ ಇದ್ದ ಜೊತೆ ಜೊತೆಯಲ್ಲಿ ಸೀರಿಯಲ್ ಟಾಪ್ 8ರ ಸ್ಥಾನವನ್ನು ಪಡೆದಿದೆ. ಇದು 5.0ಟಿಆರ್‌ಪಿಯನ್ನು ಪಡೆದುಕೊಂಡಿದೆ.

'ರಾಮಾಚಾರಿ'ಗೆ ಎಷ್ಟನೇ ಸ್ಥಾನ?
ಟಾಪ್ 9ರಲ್ಲಿ ಗೀತಾ ಧಾರಾವಾಹಿ ಸ್ಥಾನವನ್ನು ಪಡೆದುಕೊಂಡಿದೆ. ತಂದೆ ಸಾವಿಗೆ ಸೇಡು ತೀರಿಸಿಕೊಳ್ಳಲು ಸಾಯಿಸಿದವರನ್ನು ಹುಡುಕಾಟ ಮಾಡುತ್ತಿದ್ದಾನೆ. ಇದರ ನಡುವೆ ಗೀತಾ ಸಹ ವಿಜಿಗೆ ಬೆನ್ನೆಲುಬಾಗಿ ನಿಂತಿದ್ದಾಳೆ. ಟಿಆರ್‌ಪಿಯಲ್ಲಿ 5.0 ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಬಾರಿ ಟಾಪ್ 8ರಲ್ಲಿದ್ದ ಗೀತಾ ಈಗ 9ನೇ ಸ್ಥಾನವನ್ನು ಪಡೆದಿದೆ. ರಾಮಾಚಾರಿ ಹಾಗೂ ಚಾರು ಯಾವಾಗ ಪ್ರೀತಿಯಲ್ಲಿ ಬೀಳುತ್ತಾರೆ ಎಂದು ಜನರು ನೋಡುತ್ತಿದ್ದಾರೆ. ಇದರ ನಡುವಲ್ಲಿ ಟಾಪ್ 10ರಲ್ಲಿ ರಾಮಾಚಾರಿ ಸ್ಥಾನವನ್ನು ಪಡೆದುಕೊಂಡಿದೆ. ಟಿಆರ್‌ಪಿಯನ್ನು 4.9 ಸ್ಥಾನವನ್ನು ಪಡೆದಿದೆ. ಟಾಪ್ 11ರಲ್ಲಿದ್ದ ರಾಮಾಚಾರಿ 10ನೇ ಸ್ಥಾನವನ್ನು ಪಡೆದಿಕೊಂಡಿದೆ. ಇನ್ನೂ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ಎರಡೇ ವಾರಕ್ಕೆ ಸ್ಲಾಟ್‌ನಲ್ಲಿ ಸ್ಥಾನಪಡೆದುಕೊಂಡಿದೆ.ಹೊಸ ಧಾರಾವಾಹಿ ಪ್ರೇಕ್ಷಕರ ಮನಸನ್ನು ಗೆದ್ದಿದೆ. ಹೊಸ ಧಾರಾವಾಹಿಯನ್ನು ಪ್ರೇಕ್ಷಕರು ಬೆಂಬಲಿಸುತ್ತಿದ್ದಾರೆ.