For Quick Alerts
  ALLOW NOTIFICATIONS  
  For Daily Alerts

  ಸುವರ್ಣ ವಿಶೇಷ ಕಾರ್ಯಕ್ರಮ ಕನ್ನಡವೇ ನಮ್ಮಮ್ಮ

  By Rajendra
  |

  ಸ್ಟಾರ್ ನೆಟ್ ವರ್ಕ್ ನ ಕನ್ನಡ ಮನರಂಜನಾ ಸುವರ್ಣ ವಾಹಿನಿಯು ಸದಾ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನೇ ನೀಡುತ್ತಾ ಬರುತ್ತಿರುವುದು ಹೆಮ್ಮೆಯ ಸಂಗತಿ. ಈಗ ಅದೇ ಹಾದಿಯಲ್ಲಿ ಹೆಜ್ಜೆಯಿಟ್ಟು, ಕನ್ನಡಿಗರ ಹೆಮ್ಮೆಯ ದಿನ, ಕರುನಾಡಿಗೆ ನಮನ ಸಲ್ಲಿಸುವ ರಾಜ್ಯೋತ್ಸವ ದಿನದ ವಿಶೇಷ ಕಾರ್ಯಕ್ರಮವಾಗಿ "ಕನ್ನಡವೇ ನಮ್ಮಮ್ಮ" ಕಾರ್ಯಕ್ರಮವನ್ನು ನವೆಂಬರ್ 01 ರಂದು ಮಧ್ಯಾಹ್ನ 1.30 ಕ್ಕೆ ಪ್ರಸಾರ ಮಾಡಲಿದೆ.

  ಸುವರ್ಣ ವಾಹಿನಿಯು ತಾಯ್ನಾಡಿಗೆ ನಮನ ಸಲ್ಲಿಸುವುದಕ್ಕಾಗಿ ತನ್ನ ಧಾರಾವಾಹಿ ತಂಡದವರನ್ನು ಒಗ್ಗೂಡಿಸಿ ನಾಡಿನ ಸಂಸ್ಕೃತಿಯ ಪ್ರತೀಕವಾದ ಡೊಳ್ಳು ಕುಣಿತ, ಕೋಲಾಟ, ಕಂಸಾಳೆ ಹಾಗೂ ಯಕ್ಷಗಾನ ಮೊದಲಾದವುಗಳೊಂದಿಗೆ ಕೆಲ ಕನ್ನಡ ಗೀತೆಗಳಿಗೂ ಹೆಜ್ಜೆ ಹಾಕಿಸುವುದರ ಮೂಲಕ ಕರ್ನಾಟಕ ರಾಜ್ಯೋತ್ಸವಕ್ಕೆ ನಮನ ಸಲ್ಲಿಸಿ, ಕರುನಾಡಿನ ವೀಕ್ಷಕರಿಗೆ ಕನ್ನಡದ ಮಹಿಮೆಯನ್ನು ಸಾರಲಿದ್ದಾರೆ.

  ಅಮೃತಳಿಂದ ಯಕ್ಷಗಾನ ಪ್ರದರ್ಶನ

  ಅಮೃತಳಿಂದ ಯಕ್ಷಗಾನ ಪ್ರದರ್ಶನ

  ಕರ್ನಾಟಕದ ನಂ.1 ಧಾರಾವಾಹಿ 'ಅಮೃತವರ್ಷಿಣಿ'ಯ ಮುಖ್ಯ ಪಾತ್ರಧಾರಿ ಅಮೃತಳಿಂದ ಯಕ್ಷಗಾನ ಪ್ರದರ್ಶನ. ಪಲ್ಲವಿ ಅನುಪಲ್ಲವಿ, ಆಕಾಶದೀಪ, ಅರಗಿಣಿ, ಪ್ರಿಯದರ್ಶಿನಿ, ಸರಸ್ವತಿ, ಕರ್ಪೂರದ ಗೊಂಬೆ ಮೊದಲಾದ ತಂಡದವರಿಂದ ನೃತ್ಯ ಪ್ರದರ್ಶನ, ಆಕಾಶದೀಪ ಧಾರಾವಾಹಿಯ ಆಕಾಶ್ ಮತ್ತು ದೀಪಾರ ಸುಂದರವಾದ ನಿರೂಪಣೆಯಲ್ಲಿ ಕನ್ನಡವೇ ನಮ್ಮಮ್ಮ ಕಾರ್ಯಕ್ರಮ ಮೂಡಿಬರಲಿದೆ.

  ನವೆಂಬರ್ 3ರಂದು ಸುವರ್ಣ ಕಾಮಿಡಿ ಅವಾರ್ಡ್ಸ್

  ನವೆಂಬರ್ 3ರಂದು ಸುವರ್ಣ ಕಾಮಿಡಿ ಅವಾರ್ಡ್ಸ್

  ಅಲ್ಲದೇ ಇದೇ ನವೆಂಬರ್ 3 ರಂದು ದೀಪಾವಳಿ ಹಬ್ಬದ ವಿಶೇಷವಾಗಿ "ಸುವರ್ಣ ಕಾಮಿಡಿ ಅವಾರ್ಡ್ಸ್" ಕಾರ್ಯಕ್ರಮವನ್ನು ಸಂಜೆ 5.30 ಕ್ಕೆ ಪ್ರಸಾರ ಮಾಡುತ್ತಿದೆ. ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದರನ್ನು ಗುರುತಿಸಿ, ಗೌರವಿಸಿ, ಸನ್ಮಾನಿಸಿ, ಸ್ಮರಿಸಿ ಒಂದಷ್ಟು ನಕ್ಕು ನಲಿಯುವ ಕಾರ್ಯಕ್ರಮ ಸುವರ್ಣ ಕಾಮಿಡಿ ಅವಾರ್ಡ್ಸ್ ಆಗಿದೆ. ಇದರಲ್ಲಿ 18 ಕೆಟಗೆರಿಗಳನ್ನಾಗಿ ಮಾಡಿದ್ದು, ಬೆಸ್ಟ್ ಕೆಟಗೆರಿ, ಸ್ಪೆಷಲ್ ಕೆಟಗೆರಿ ಹಾಗೂ ಫೆವರೇಟ್ ಕೆಟಗೆರಿ ಎಂದು ವಿಂಗಡಿಸಲಾಗಿದೆ.

  ಉಮೇಶ್ ಅವರಿಂದ ಲುಂಗಿ ಡಾನ್ಸ್

  ಉಮೇಶ್ ಅವರಿಂದ ಲುಂಗಿ ಡಾನ್ಸ್

  ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಕ್ಕು ನಲಿಯಲು ಒಂದಷ್ಟು ಹಾಸ್ಯ ತುಣುಕುಗಳು, ಅದರೊಂದಿಗೆ ಹಾಸ್ಯ ಕಲಾವಿದ ದ್ವಾರಕೀಶ್ ಮತ್ತು ಲಕ್ಷ್ಮೀದೇವಮ್ಮರ ಡ್ಯುಯಟ್, ಉಮೇಶ್ ರವರಿಂದ ಲುಂಗಿ ಡಾನ್ಸ್, ಗುರುಪ್ರಸಾದ್ ಕಾಮಿಡಿ, ನಿಂಬೆಹುಳಿ ಚಿತ್ರತಂಡದಿಂದ ಸ್ಕಿಟ್, ನಮ್ಮಣ್ಣ ಡಾನ್ ಚಿತ್ರದ ನಾಯಕಿ ಸನಾತನಿ ಡಾನ್ಸ್ ಹಾಗೂ ವಿಜಯ್ ಪ್ರಕಾಶ್ ಅವರಿಂದ ಖಾಲಿ ಕ್ವಾಟ್ರು ಬಾಟಲ್, ತುಂಡ ಹೈಕಳ್ ಸಹವಾಸ ಹಾಡು ವೀಕ್ಷಕರನ್ನು ರಂಜಿಸಲಿದೆ.

  ಪಂಚರಂಗಿ ಪೋಂ ಪೋಂ ಡಾನ್ಸ್

  ಪಂಚರಂಗಿ ಪೋಂ ಪೋಂ ಡಾನ್ಸ್

  ಇನ್ನೊಂದು ಕಡೆ ಸುವರ್ಣ ಪರಿವಾರದ ಪಂಚರಂಗಿ ಪೊಂಪೊಂ ಧಾರಾವಾಹಿಯ ಮೀನಾನಾಥ್, ಮೀನಾಕುಮಾರಿ, ಮೈಲಾರಿ, ರೇಣುಕಾ ಹಾಗೂ ಪುಟಾಣಿ ಪಂಟ್ರು ಕಾರ್ಯಕ್ರಮ ಸ್ಪರ್ಧಿ ಮಧು ಡಾನ್ಸ್ ಮೂಲಕ ವೀಕ್ಷಕರ ಮನಮೆಚ್ಚುಗೆ ಗಳಿಸಲಿದ್ದಾರೆ.

  ತಪ್ಪದೇ ನೋಡಿ ಎಂಜಾಯ್ ಮಾಡಿ

  ತಪ್ಪದೇ ನೋಡಿ ಎಂಜಾಯ್ ಮಾಡಿ

  ಹೀಗೆ ಸುವರ್ಣವಾಹಿನಿಯು ರಾಜ್ಯೋತ್ಸವ, ದೀಪಾವಳಿ ಎರಡೂ ಹಬ್ಬದ ಸಡಗರ ಸಂಭ್ರಮದ ಸಿಹಿಯನ್ನು ವೀಕ್ಷಕರಿಗೆ ಉಣಬಡಿಸುತ್ತಿದೆ. ನಿಮ್ಮ ನೆಚ್ಚಿನ ನಿಮಗಿಷ್ಟವಾಗುವ, ನಿಮಗೆಂದೇ ನಿರೂಪಿಸಿದ ಈ ವಿಶೇಷ ಕಾರ್ಯಕ್ರಮಗಳನ್ನು ತಪ್ಪದೇ ನೋಡಿ ಎಂಜಾಯ್ ಮಾಡಿ.

  English summary
  Star Network's Suvarna Channel all set to air special Programmmes on Kannada Rajyotsava and Deepawali. Kannadave Nammamma on November 1 st and Suvarna Comedy Awards on November 3rd as Diwali Special.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X