Just In
Don't Miss!
- News
ಪೊಲೀಸ್ ಆಯುಕ್ತರ ಕಚೇರಿಯಿಂದ ಕಾಲ್ ಬರುತ್ತೆ
- Automobiles
ಸ್ಪ್ಲೆಂಡರ್ ಬೈಕುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ ಹೀರೋ ಮೋಟೊಕಾರ್ಪ್
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವ್ಹೀಲ್ ಚೇರ್‌ನಲ್ಲಿ ಬಂದ ಕಪಿಲ್ ಶರ್ಮಾ: ಕಾರಣವೇನು?
ಖ್ಯಾತ ಕಮಿಡಿಯನ್, ನಟ ಕಪಿಲ್ ಶರ್ಮಾ ನಿನ್ನೆ ಏರ್‌ಪೋರ್ಟ್‌ನಿಂದ ವ್ಹೀಲ್ ಚೇರ್ ಮೇಲೆ ಬಂದರು. ಅವರಿಗೆ ಏನಾಯಿತು ಎಂದು ಅಭಿಮಾನಿಗಳು ಆತಂಕಕ್ಕೆ ಸಿಲುಕಿದ್ದರು. ಆದರೆ ಏಕೆ ತಾವು ವ್ಹೀಲ್ ಚೇರ್ ಮೇಲೆ ಬರುವಂತಾಯಿತು ಎಂದು ಕಾರಣ ನೀಡಿದ್ದಾರೆ ಕಪಿಲ್ ಶರ್ಮಾ.
ನಟ ಕಪಿಲ್ ಶರ್ಮಾ ದಾದಾ ಸಾಹೆಬ್ ಪಾಲ್ಕೆ ಪ್ರಶಸ್ತಿ ಸಮಾರಂಭ ಮುಗಿಸಿ ಮುಂಬೈ ಏರ್ಪೋರ್ಟ್‌ಗೆ ಬಂದವರು ಕಾರಿನ ವರೆಗೆ ವ್ಹೀಲ್ ಚೇರ್ ಮೇಲೆ ಬಂದರು. ಕಾರಿಗೆ ಹತ್ತಲೂ ಸಹ ಅವರು ಸಾಕಷ್ಟು ಕಷ್ಟಪಡಬೇಕಾಯಿತು. ಕಪಿಲ್ ಶರ್ಮಾರ ವ್ಹೀಲ್ ಚೇರ್ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.
ಈ ಬಗ್ಗೆ ಮ್ಯಾಗಜೀನ್ ಒಂದಕ್ಕೆ ಮಾಹಿತಿ ನೀಡಿರುವ ಕಪಿಲ್ ಶರ್ಮಾ, 'ಜಿಮ್‌ನಲ್ಲಿ ವ್ಯಾಯಾಮ ಮಾಡಬೇಕಾದರೆ ಬೆನ್ನಿಗೆ ಗಾಯ ಮಾಡಿಕೊಂಡಿದ್ದು, ಹಾಗಾಗಿಯೇ ಏರ್‌ಪೋರ್ಟ್‌ನಲ್ಲಿ ವ್ಹೀಲ್ ಚೇರ್ ಬಳಸಿದ್ದಾಗಿ ಹೇಳಿದ್ದಾರೆ ಕಪಿಲ್.
ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ಕೆಲವೇ ದಿನಗಳಲ್ಲಿ ಹುಷಾರಾಗುತ್ತೇನೆ. ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ, ಶುಭ ಹಾರೈಕೆ ತಿಳಿಸಿದ ಅಭಿಮಾನಿಗಳಿಗೆ ಧನ್ಯವಾದ ಎಂದು ಹೇಳಿದ್ದಾರೆ ಕಪಿಲ್ ಶರ್ಮಾ.
ನಟ ಕಪಿಲ್ ಶರ್ಮಾ ರ ದಿ ಕಪಿಲ್ ಶರ್ಮಾ ಶೋ ಮುಂದಿನ ಸೀಸನ್ ಶೀಘ್ರವಾಗಿಯೇ ಪ್ರಾರಂಭವಾಗಲಿದೆ. ಸುನಿಲ್ ಗ್ರೋವರ್ ಮತ್ತೆ ಈ ಶೋ ನಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿತ್ತು, ಆದರೆ ಅವರು ಭಾಗವಹಿಸುವುದಿಲ್ಲ ಎಂಬುದು ಖಾತ್ರಿಯಾಗಿದೆ.
ಕಪಿಲ್ ಶರ್ಮಾ ಹಾಗೂ ಗಿನ್ನಿ ದಂಪತಿಗೆ ಇದೇ ತಿಂಗಳ ಒಂದನೇ ತಾರೀಖು ಗಂಡು ಮಗು ಜನಿಸಿದೆ. ಈ ಮೊದಲು 2019 ರಲ್ಲಿ ಹೆಣ್ಣು ಮಗು ಜನಿಸಿತ್ತು.