Don't Miss!
- Automobiles
ಭಾರತದಲ್ಲಿ ಆಕರ್ಷಕ ವಿನ್ಯಾಸದ 2023ರ ಬಿಎಂಡಬ್ಲ್ಯು X1 ಎಸ್ಯುವಿ ಬಿಡುಗಡೆ
- News
ನಾವು ಜಾಗರೂಕರಾಗಿದ್ದೇವೆ: ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಉನ್ನತ ಬ್ಯಾಂಕ್ಗಳು ಹೇಳಿದ್ದೇನು?
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಪಿಲ್ ಮೇಲೆ ಅಕ್ಷಯ್ ಸಿಟ್ಟು: ವಿವಾದ ಬಗೆಹರಿಸಿಕೊಂಡ ಕಪಿಲ್
ಬಾಲಿವುಡ್ ಜನಪ್ರಿಯ ಖಾನ್‌ಗಳಾದ ಶಾರುಖ್, ಸಲ್ಮಾನ್ ಖಾನ್ ಅವರುಗಳು ಸಹ ತಮ್ಮ ಸಿನಿಮಾಗಳ ಪ್ರಚಾರಕ್ಕೆ ಕಪಿಲ್ ಶರ್ಮಾ ಶೋಗೆ ಬಂದಿದ್ದಾರೆ. ಇತರೆ ಸ್ಟಾರ್‌ಗಳಾದ ಅಕ್ಷಯ್ ಕುಮಾರ್, ಖ್ಯಾತ ನಟ ಅಮಿತಾಬ್ ಬಚ್ಚನ್, ಹೃತಿಕ್ ರೋಷನ್, ಅನಿಲ್ ಕಪೂರ್, ಕರಣ್ ಜೋಹರ್ ಬಾಲಿವುಡ್‌ನ ಎಲ್ಲ ಎ ಗ್ರೇಡ್ ಸೆಲೆಬ್ರಿಟಿಗಳು ಹಲವು ಬಾರಿ ಕಪಿಲ್ ಶರ್ಮಾ ಶೋಕ್ಕೆ ಅತಿಥಿಗಳಾಗಿ ಆಗಮಿಸಿದ್ದಾರೆ.
ಆದರೆ ಇತ್ತೀಚಿಗೆ ನಟ ಅಕ್ಷಯ್ ಕುಮಾರ್, ಕಪಿಲ್ ಶರ್ಮಾ ವಿರುದ್ಧ ಮುನಿಸಿಕೊಂಡಿದ್ದರು. ಇದಕ್ಕೆ ಬಹುಮುಖ್ಯ ಕಾರಣವೂ ಇತ್ತು. ಅಕ್ಷಯ್ ಕುಮಾರ್‌ಗೆ ಕಪಿಲ್ ಶರ್ಮಾ ನಂಬಿಕೆ ದ್ರೋಹ ಎಸಗಿದ್ದರಿಂದ ಅವರು ಸಿಟ್ಟಾಗಿದ್ದರು. ಆ ಬಗ್ಗೆ ಹಲವು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈಗ ಕಪಿಲ್ ಶರ್ಮಾ ಅವರು ಅಕ್ಷಯ್‌ಕುಮಾರ್‌ಗೆ ಕರೆ ಮಾಡಿ ವಿವಾದ ಬಗೆಹರಿಸಿಕೊಂಡಿದ್ದಾರೆ.

ಅಕ್ಷಯ್‌ಗೆ ಕರೆ ಮಾಡಿದ್ದಾಗಿ ಹೇಳಿದ ಕಪಿಲ್
ತಾವು ಅಕ್ಷಯ್ ಕುಮಾರ್‌ಗೆ ಕರೆ ಮಾಡಿ ಮಾತನಾಡಿದ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕಪಿಲ್ ಶರ್ಮಾ, ''ಗೆಳೆಯರೇ, ಅಕ್ಷಯ್ ಕುಮಾರ್ ಹಾಗೂ ನನ್ನ ಬಗ್ಗೆ ಹಲವು ಸುದ್ದಿಗಳು ಪ್ರಸಾರವಾಗಿರುವುದನ್ನು ನಾನು ಗಮನಿಸಿದೆ. ನಾನು ಈಗಷ್ಟೆ ಅಕ್ಷಯ್ ಕುಮಾರ್ ಅವರೊಟ್ಟಿಗೆ ಮಾತನಾಡಿ ಎಲ್ಲ ಗೊಂದಲಗಳನ್ನು ಬಗೆಹರಿಸಿಕೊಂಡಿದ್ದೇನೆ. ಇದೊಂದು ಸಣ್ಣ ಗೊಂದಲವಷ್ಟೆ. ಎಲ್ಲವೂ ಸರಿ ಹೋಗಿದೆ. ಶೀಘ್ರವೇ ನಾವು 'ಬಚ್ಚನ್ ಪಾಂಡೆ' ಎಪಿಸೋಡ್ ಅನ್ನು ಚಿತ್ರೀಕರಣ ಮಾಡಲಿದ್ದೇವೆ. ಅಕ್ಷಯ್ ಕುಮಾರ್ ನನ್ನ ಅಣ್ಣ, ನನ್ನ ಮೇಲೆ ಅವರು ಮುನಿಸಿಕೊಳ್ಳುವುದಿಲ್ಲ'' ಎಂದು ಕಪಿಲ್ ಶರ್ಮಾ ಬರೆದುಕೊಂಡಿದ್ದಾರೆ.

ಅಕ್ಷಯ್ ಮುನಿಸಿಕೊಳ್ಳಲು ಕಾರಣವೇನು?
ಕಪಿಲ್ ಶರ್ಮಾ ಶೋ ಹಾಗೂ ಅದರ ತಂಡದೊಂದಿಗೆ ಅಕ್ಷಯ್ ಕುಮಾರ್ ಮುನಿಸಿಕೊಂಡಿದ್ದಾರೆ. ನಟ ಅಕ್ಷಯ್ ಕುಮಾರ್ ಕಳೆದ ಬಾರಿ ಕಪಿಲ್ ಶರ್ಮಾ ಶೋಗೆ ಹೋಗಿದ್ದಾಗ ತಾವು ನರೇಂದ್ರ ಮೋದಿ ಅವರ ಸಂದರ್ಶನ ಮಾಡಿದ್ದರ ಬಗ್ಗೆ ಜೋಕ್ ಒಂದನ್ನು ಮಾಡಿದ್ದರು. ಆ ಜೋಕ್ ಅನ್ನು ಪ್ರಸಾರ ಮಾಡದಂತೆ ಕಪಿಲ್‌ಗೆ ಹೇಳಿದ್ದರು. ಅಂತೆಯೇ ಆ ಜೋಕ್ ಟಿವಿಯಲ್ಲಿ ಪ್ರಸಾರವಾಗಿರಲಿಲ್ಲ. ಆದರೆ ಆ ದೃಶ್ಯದ ಕ್ಲಿಪ್ಪಿಂಗ್ ಅನ್ನು ಯಾರೋ ಅಂತರ್ಜಾಲದಲ್ಲಿ ಹರಿಬಿಟ್ಟಿದ್ದರು. ಇದು ಅಕ್ಷಯ್‌ಗೆ ಸಿಟ್ಟು ತರಿಸಿತ್ತು.

ಕಪಿಲ್ ಶೋ ನಲ್ಲಿ ನಡೆದಿದ್ದೇನು?
''ನನಗೆ ಪ್ರಶ್ನೆ ಕೇಳುವಾಗ ಯಾವಾಗಲು ಯಾರೋ ಮಕ್ಕಳು ಕೇಳಿದ ಪ್ರಶ್ನೆ ಇದು, ಇನ್ಯಾರೊ ಕೇಳಿದ ಪ್ರಶ್ನೆ ಇದು ಎಂದು ಹೇಳಿ ನನಗೆ ಪ್ರಶ್ನೆ ಕೇಳುತ್ತೀಯ. ನೇರವಾಗಿ ಏಕೆ ನಾನೇ ಪ್ರಶ್ನೆ ಕೇಳುತ್ತಿದ್ದೀನಿ ಎಂದು ನೀನು ಹೇಳುವುದಿಲ್ಲ ಎಂದು ಅಕ್ಷಯ್ ಕುಮಾರ್ ಕಪಿಲ್ ಅನ್ನು ಕೇಳುತ್ತಾರೆ. ಆಗ ಕಪಿಲ್, ನೀವು ಒಮ್ಮೆ ದೇಶದ ದೊಡ್ಡ ರಾಜಕಾರಣಿಯ (ಮೋದಿ) ಸಂದರ್ಶನ ಮಾಡಿದ್ದಿರಿ ಅಂದು ನನ್ನ ಡ್ರೈವರ್‌ನ ಮಗ ಪ್ರಶ್ನೆ ಕೇಳಿದ್ದಾನೆ, ನೀವು ಮಾವಿನ ಹಣ್ಣನ್ನು ಕಟ್ ಮಾಡಿ ತಿನ್ನುತ್ತೀರೊ ಹಾಗೆಯೇ ತಿನ್ನುತ್ತೀರೋ ಎಂದು ಪ್ರಶ್ನೆ ಕೇಳಿದ್ದಿರಿ'' ಎಂದು ಕಪಿಲ್ ಹೇಳುತ್ತಾರೆ. ಇದಕ್ಕೆ ಜನರೆಲ್ಲ ನಗುತ್ತಾರೆ. ಇದರಿಂದ ಮುಜುಗರಗೊಳ್ಳುವ ಅಕ್ಷಯ್ ಕುಮಾರ್, ಆ ರಾಜಕಾರಣಿಯ ಹೆಸರನ್ನು ಧೈರ್ಯವಾಗಿ ಹೇಳು ಎಂದು ಕಪಿಲ್‌ಗೆ ಸವಾಲು ಹಾಕುತ್ತಾರೆ. ಆದರೆ ಕಪಿಲ್ ಮೋದಿಯವರ ಹೆಸರು ಹೇಳುವುದಿಲ್ಲ.

ಟೀಕೆಗೆ ಗುರಿಯಾಗಿದ್ದ ಮೋದಿ ಸಂದರ್ಶನ
ಅಕ್ಷಯ್ ಕುಮಾರ್ ಮಾಡಿದ್ದ ಮೋದಿಯವರ ಸಂದರ್ಶನ ಟೀಕೆಗೆ ಗುರಿಯಾಗಿತ್ತು. ಮಾವಿನ ಹಣ್ಣು ಹೇಗೆ ತಿನ್ನುತ್ತೀರಿ, ಇನ್ನಿತರೆ ಬಾಲಿಶ ಪ್ರಶ್ನೆಗಳನ್ನು ಅಕ್ಷಯ್ ಕೇಳಿದ್ದಾರೆ. ಮೋದಿಯವರ ಪ್ರಚಾರ ಮಾಡಲಷ್ಟೆ ಈ ಸಂದರ್ಶನ ಮಾಡಲಾಗಿದೆ ಎಂದು ನೆಟ್ಟಿಗರು ಟೀಕಿಸಿದ್ದರು. ಹಾಗಾಗಿಯೇ ಕಪಿಲ್ ಶರ್ಮಾ ಶೋನಲ್ಲಿ ಆ ಸಂದರ್ಶನದ ಬಗ್ಗೆ ಮಾಡಲಾದ ಜೋಕ್ ಅನ್ನು ತೆಗೆಯುವಂತೆ ಅಕ್ಷಯ್ ಹೇಳಿದ್ದರು. ಕಪಿಲ್ ಆ ಜೋಕ್ ಅನ್ನು ತೆಗೆದಿದ್ದರು. ಆದರೆ ಕಪಿಲ್‌ರ ಎಡಿಟಿಂಗ್ ತಂಡದಿಂದ ಆ ದೃಶ್ಯ ಲೀಕ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಇದು ಅಕ್ಷಯ್ ಕುಮಾರ್ ಅಸಮಾಧಾನಕ್ಕೆ ಕಾರಣವಾಗಿದೆ.