»   » ಇನ್ಮುಂದೆ ಪ್ರತಿ ದಿನ ನಿಮ್ಮ ಮನೆಗೆ ಜೆ.ಕೆ ಬರೋದು ಡೌಟೇ.!

ಇನ್ಮುಂದೆ ಪ್ರತಿ ದಿನ ನಿಮ್ಮ ಮನೆಗೆ ಜೆ.ಕೆ ಬರೋದು ಡೌಟೇ.!

Posted By:
Subscribe to Filmibeat Kannada

'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ಜೆ.ಕೆ ಪಾತ್ರ ನಿರ್ವಹಿಸಿದ್ದ ಕಾರ್ತಿಕ್ ಜಯರಾಂ ಅಕ್ಷರಶಃ ಕಿರುತೆರೆ ದುನಿಯಾದ 'ಸೂಪರ್ ಸ್ಟಾರ್' ಆದ್ರು.

ಕನ್ನಡ ಮಾತ್ರವಲ್ಲದೆ ಹಿಂದಿಯ 'ಸಿಯಾ ಕೆ ರಾಮ್' ಧಾರಾವಾಹಿಯಲ್ಲಿ ರಾವಣನ ಪಾತ್ರ ನಿರ್ವಹಿಸಿದ ಕಾರ್ತಿಕ್ ಜಯರಾಂಗೆ ಭಾರತದಾದ್ಯಂತ ಫ್ಯಾನ್ ಫಾಲೋವಿಂಗ್ ಶುರು ಆಯ್ತು.

Karthik Jayaram concentrates on movies than serial

ರಾವಣನ ಪಾತ್ರ ನಿರ್ವಹಿಸಿ ಕೋಟ್ಯಾಂತರ ವೀಕ್ಷಕರಿಂದ 'ಭೇಷ್' ಎನಿಸಿಕೊಂಡಿರುವ ಕಾರ್ತಿಕ್ ಜಯರಾಂಗೆ ಹಿಂದಿಯ ಅನೇಕ ಸೀರಿಯಲ್ ಗಳಿಗಾಗಿ ಆಫರ್ಸ್ ಬರುತ್ತಿದೆ.

ಕನ್ನಡದಲ್ಲೂ ಕಮ್ಮಿ ಇಲ್ಲ. ತಮ್ಮ ಸೀರಿಯಲ್ ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುವಂತೆ ಅನೇಕ ಪ್ರೊಡಕ್ಷನ್ ಕಂಪನಿಗಳು ಕಾರ್ತಿಕ್ ಜಯರಾಂ ಬೆನ್ನು ಬಿದ್ದಿವೆ. ಹೀಗಿದ್ದರೂ, ಯಾವುದಕ್ಕೂ ಜೆ.ಕೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

ಯಾಕೆ ಅಂತ ನಾವು ಕೇಳಿದ್ರೆ, ''ಏಣಿ ಹತ್ತ ಬೇಕು. ಸದ್ಯಕ್ಕೆ ಸೀರಿಯಲ್ ಬೇಡ ಅಂತ ಇದ್ದೀನಿ. ಸಿನಿಮಾಗಳ ಬಗ್ಗೆ ಗಮನ ಹರಿಸುತ್ತಿದ್ದೇನೆ. ಹಿಂದಿ ಸೀರಿಯಲ್ ಗಳಿಂದ ತುಂಬಾ ಆಫರ್ಸ್ ಬರುತ್ತಿದೆ. ಆದರೆ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ'' ಅಂತ ಹೇಳುತ್ತಾರೆ ಕಾರ್ತಿಕ್ ಜಯರಾಂ. ['ಫಿಲ್ಮಿಬೀಟ್'ಗೆ ಸೂಪರ್ ಸ್ಟಾರ್ ಜೆ.ಕೆ ಎಕ್ಸ್ ಕ್ಲೂಸಿವ್ ಸಂದರ್ಶನ]

ಅಲ್ಲಿಗೆ, ಧಾರಾವಾಹಿಗಳ ಮೂಲಕ ಇನ್ಮೇಲೆ ಪ್ರತಿ ದಿನ ಜೆ.ಕೆ ನಿಮ್ಮ ಮನೆಗೆ ಬರುವುದು ಡೌಟೇ.!

ಅಂದ್ಹಾಗೆ, ಜೆ.ಕೆ ಅಭಿನಯಿಸಿರುವ ಸಸ್ಪೆನ್ಸ್ - ಥ್ರಿಲ್ಲರ್ ಸಿನಿಮಾ 'ಸ' ನಾಳೆ (ಆಗಸ್ಟ್ 25) ತೆರೆ ಕಾಣುತ್ತಿದೆ. ಮಿಸ್ ಮಾಡದೆ 'ಸ' ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ....

English summary
'Ashwini Nakshatra' fame Super Star J.K (Karthik Jayaram) is concentrating on his Film Career more than Serials.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada