For Quick Alerts
  ALLOW NOTIFICATIONS  
  For Daily Alerts

  ಈ ಇಬ್ಬರು ಖ್ಯಾತ ನಟಿಯರಲ್ಲಿ ಯಾರಾಗ್ತಾರೆ ಆರ್ಯವರ್ಧನ್ ಪತ್ನಿ ರಾಜನಂದಿನಿ

  By ಫಿಲ್ಮ್ ಡೆಸ್ಕ್
  |

  ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಕೂಡ ಒಂದು. ಆರ್ಯವರ್ಧನ್ ಮತ್ತು ಅನು ಸಿರಿಮನೆ ಪಾತ್ರ ಪ್ರೇಕ್ಷಕರ ಮನೆಮಾತಾಗಿದೆ. ಈ ಎರಡು ಪ್ರಮುಖ ಪಾತ್ರಗಳ ನಡುವೆ ಈಗ ಮತ್ತೊಂದು ಪಾತ್ರ ಭಾರಿ ಕುತೂಹಲ ಮೂಡಿಸಿದೆ. ಅದೆ ರಾಜನಂದಿನಿ ಪಾತ್ರ.

  ಆರ್ಯವರ್ಧನ್ ಮೊದಲ ಪತ್ನಿ ರಾಜನಂದಿನಿ ಪಾತ್ರ ಈಗ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ರಾಜನಂದಿನಿ, ಆರ್ಯವರ್ಧನ್ ಪತ್ನಿ ಎನ್ನುವ ಸತ್ಯ ಈಗಾಗಲೇ ಹೊರಬಿದ್ದಿದೆ. ಆದರೆ ರಾಜನಂದಿನಿ ಪಾತ್ರ ಇನ್ನೂ ಪ್ರೇಕ್ಷಕರ ಮುಂದೆ ಬಂದಿಲ್ಲ. ಸದ್ಯದಲ್ಲೇ ರಾಜನಂದಿನಿ ಪ್ರೇಕ್ಷಕರ ಮುಂದೆ ಬರುತ್ತಿದ್ದು, ರಾಜನಂದಿನಿ ಯಾರಾಗ್ತಾರೆ ಎನ್ನುವ ಕುತೂಹಲಕ್ಕೆ ತೆರೆಬೀಳಲಿದೆ. ಮುಂದೆ ಓದಿ...

  ಇಬ್ಬರು ನಟಿಯರಲ್ಲಿ ಯಾರಾಗ್ತಾರೆ ರಾಜನಂದಿನಿ

  ಇಬ್ಬರು ನಟಿಯರಲ್ಲಿ ಯಾರಾಗ್ತಾರೆ ರಾಜನಂದಿನಿ

  ಈ ರಾಜನಂದಿನಿ ಪಾತ್ರ ಮಾಡುತ್ತಿರುವವರು ಯಾರು ಎನ್ನುವ ಸತ್ಯ ಬಹಿರಂಗವಾಗಿಲ್ಲ. ಈಗಾಗಲೇ ಸಾಕಷ್ಟು ನಟಿಯರ ಹೆಸರು ಕೇಳಿಬರುತ್ತಿದೆ. ಪುನೀತ್ ರಾಜ್ ಕುಮಾರ್ ಜೊತೆ ನಿನ್ನಿಂದಲೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಎರಿಕಾ ಫರ್ನಾಂಡಿಸ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಈಗ ಮತ್ತಿಬ್ಬರು ನಟಿಯರ ಹೆಸರು ಕೇಳಿ ಬರುತ್ತಿದೆ.

  'ಜೊತೆ ಜೊತೆಯಲಿ' ಬದಲು ಮತ್ತೊಂದು ಧಾರಾವಾಹಿಯಲ್ಲಿ ಪುನೀತ್ ನಾಯಕಿ ಎರಿಕಾ ಫರ್ನಾಂಡಿಸ್

  ಆರ್ಯವರ್ಧನ್ ಪತ್ನಿ ಆಗ್ತಾರಾ ಕಾವ್ಯಾ ಅಥವಾ ಕವಿತಾ

  ಆರ್ಯವರ್ಧನ್ ಪತ್ನಿ ಆಗ್ತಾರಾ ಕಾವ್ಯಾ ಅಥವಾ ಕವಿತಾ

  ರಾಜನಂದಿನಿ ಪಾತ್ರಕ್ಕೆ ಕಿರುತೆರೆಯ ಖ್ಯಾತ ನಟಿಯರಾದ ಕಾವ್ಯಾ ಗೌಡ ಮತ್ತು ಕವಿತಾ ಗೌಡ ಇಬ್ಬರು ಹೆಸರು ಕೇಳಿಬರುತ್ತಿದೆ. ಇವರಿಬ್ಬರಲ್ಲಿ ರಾಜನಂದಿನಿ ಯಾರಾಗ್ತಾರೆ ಎನ್ನುವುದು ಸದ್ಯದ ಕುತೂಹಲ. ನಟಿ ಕಾವ್ಯಾ ರಾಧ ರಮಣ ಧಾರಾವಾಹಿ ಬಳಿಕ ಮತ್ತೆ ಕಿರುತೆರೆಯಲ್ಲಿ ಮಿಂಚಿಲ್ಲ. ಇದೀಗ ರಾಜನಂದಿನಿ ಆಗಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

  ಕವಿತಾ ಗೌಡ ನಟಿಸುತ್ತಾರಾ?

  ಕವಿತಾ ಗೌಡ ನಟಿಸುತ್ತಾರಾ?

  ಇನ್ನು ಮತ್ತೋರ್ವ ಖ್ಯಾತ ನಟಿ ಕವಿತಾ ಗೌಡ ಹೆಸರು ಸಹ ಕೇಳಿಬರುತ್ತಿದೆ. ಕವಿತಾ ಗೌಡ ಸಹ ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಹಾಗಾಗಿ ರಾಜನಂದಿನಿ ಆಗಿ ಕಾಣಿಸಿಕೊಂಡರು ಅಚ್ಚರಿ ಇಲ್ಲ. ಈ ಬಗ್ಗೆ ಇಬ್ಬರೂ ನಟಿಯರು ಅಥವಾ ಧಾರಾವಾಹಿ ತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ರಾಜನಂದಿನಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಸದ್ಯದ ಕುತೂಹಲ.

  'ಜೊತೆ ಜೊತೆಯಲ್ಲಿ' ಧಾರಾವಾಹಿಯಲ್ಲಿ 'ನಿನ್ನಿಂದಲೇ' ನಾಯಕಿ: ಎರಿಕಾ ಎಂಟ್ರಿ ಬಗ್ಗೆ ನಿರ್ದೇಶಕರು ಹೇಳಿದ್ದೇನು?

  ಆರ್ಯವರ್ಧನ್ ಹಿನ್ನಲೆ ತಿಳಿಯುವ ಪ್ರಯತ್ನದಲ್ಲಿ ಅನು

  ಆರ್ಯವರ್ಧನ್ ಹಿನ್ನಲೆ ತಿಳಿಯುವ ಪ್ರಯತ್ನದಲ್ಲಿ ಅನು

  ಆರ್ಯವರ್ಧನ್ ಮನೆಯ ಮಗನಲ್ಲ, ಅಳಿಯ ಎನ್ನುವ ವಿಚಾರ ಅನು ಸಿರಿಮನೆಗೆ ಗೊತ್ತಾಗಿದೆ. ಎಲ್ಲಾ ಆಸ್ತಿ ರಾಜನಂದಿನಿ ಹಾಗೂ ಹರ್ಷವರ್ಧನ್ ಗೆ ಸೇರಿದ್ದು ಎನ್ನುವ ಸತ್ಯ ಗೊತ್ತಾಗಿದೆ. ಅಲ್ಲದೆ ಆರ್ಯವರ್ಧನ್ ನಿಜವಾದ ಹೆಸರು ಸಂಜಯ್ ಪಾಟೀಲ್ ಎನ್ನುವುದು ಸಹ ಅನು ಸಿರಿಮನೆಗೆ ಗೊತ್ತಾಗಿದೆ. ಆರ್ಯವರ್ಧನ್ ಬಗ್ಗೆ ಸಂಪೂರ್ಣ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆರ್ಯವರ್ಧನ್ ಯಾರು, ಪತ್ನಿಯಾರು ಮತ್ತು ಜೇಂಡೆ ಬಗ್ಗೆ ರಿವೀಲ್ ಆಗುವ ಸಮಯ ಸಮೀಪ ಬಂದಿದೆ.

  English summary
  Serial Actress Kavya Gowda or Kavitha Gowda will playing Rajanandini role in jothe jotheyali serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X