»   » ಕೆಬಿಸಿ: 50 ಲಕ್ಷ ಗೆದ್ದುಕೊಂಡ ಮೈಕ್ರೋಸಾಫ್ಟ್ ಟೆಕ್ಕಿ ವಿಕ್ರಂ

ಕೆಬಿಸಿ: 50 ಲಕ್ಷ ಗೆದ್ದುಕೊಂಡ ಮೈಕ್ರೋಸಾಫ್ಟ್ ಟೆಕ್ಕಿ ವಿಕ್ರಂ

Posted By:
Subscribe to Filmibeat Kannada
<ul id="pagination-digg"><li class="next"><a href="/tv/kbc-vikram-fails-to-answer-simple-question-aid0135.html">Next »</a></li></ul>
kbc-vikram-bhadravathi-win-50-lakh
ಬೆಂಗಳೂರು, ಸೆ. 02: ಭದ್ರಾವತಿಯ ವಿಕ್ರಂ ಹೊಸ ವಿಕ್ರಮ ಸ್ಥಾಪಿಸಿದ್ದಾರೆ. ಬೆಂಗಳೂರಿನಲ್ಲಿ ಮೈಕ್ರೋಸಾಫ್ಟ್ ಕಂಪನಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ 25 ವರ್ಷದ ವಿಕ್ರಂ ಲಕ್ಷ್ಮೀಕಾಂತ ಅವರು ಪ್ರಸಿದ್ಧ 'ಕೌನ್ ಬನೇಗಾ ಕರೋಡ್ ಪತಿ'ಯಲ್ಲಿ ಬುಧವಾರ 50 ಲಕ್ಷ ರುಪಾಯಿ ಗೆದ್ದುಕೊಂಡಿದ್ದಾರೆ. ಪೌರೋಹಿತ್ಯ ಕುಲಕಸುಬು ನಡೆಸುವ ವಿಕ್ರಂ ಅವರ ತಂದೆ ಲಕ್ಷೀಕಾಂತ ಅವರಿಗಂತೂ ಈ ಬಾರಿ ಗಣೇಶ ಹಬ್ಬ ಭರ್ಜರಿಯಾಗಿದೆ.

ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಬಾಲಿವುಡ್ ಬಾದ್ ಷಾ ಅಮಿತಾಭ್ ಬಚ್ಚನ್ ಸಾರಥ್ಯದ 'ಕೌನ್ ಬನೇಗಾ ಪಂಚ್ ಕೋಟಿ ಮಹಾ ಮನಿ' ಟಿವಿ ಕ್ವಿಜ್ ಕಾರ್ಯಕ್ರಮದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಬಹುಮಾನ ಗಳಿಸಿದ ಮೊದಲ ವ್ಯಕ್ತಿ ಎಂಬ ಗೌರವಕ್ಕೂ ವಿಕ್ರಂ ಲಕ್ಷ್ಮೀಕಾಂತ ಪಾತ್ರರಾದರು.

ಆದರೆ ಅವರಿಗೆ 16,50,000 ರುಪಾಯಿ ಮುರಿದುಕೊಂಡು ಉಳಿದ ಹಣ ಅಂದರೆ 33,50,000 ರುಪಾಯಿಯಷ್ಟೇ ಸಂದಾಯವಾಗಲಿದೆ. ಏಕೆಂದರೆ ಬಹುಮಾನದ ಮೊತ್ತದಲ್ಲಿ ಶೇ. 33 ರಷ್ಟು ತೆರಿಗೆ ರೂಪದಲ್ಲಿ ಕೇಂದ್ರ ಸರಕಾರ ಸ್ವಾಹಾ ಎನ್ನಲಿದೆ. ಆದರೂ ವಿಕ್ರಂಗೆ ಇದು (33,50,000 ರೂ.) 'ಬಹು'ಮಾನವೇ!

ಅಂದಹಾಗೆ ಎಸ್‌ಎಸ್‌ಎಲ್‌ಸಿ ಓದುವಾಗಿನಿಂದಲೂ 'ಕೌನ್‌ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂಬುದು ವಿಕ್ರಂ ಕನಸು. ಅದಕ್ಕಾಗಿ ಅವರು ನಿರಂತರ ಎಸ್‌ಎಂಎಸ್‌ ಮಾಡುತ್ತಲೇ ಬಂದಿದ್ದರು. ಈ ಆಸೆ ಕೈಗೂಡಿದ್ದು ಮೇ 29ರಂದು. 5 ದಿನದಲ್ಲಿ 100 ಸಂದೇಶ ಕಳುಹಿಸಿದ ಬಳಿಕ 6 ನೇ ದಿನ 3 ಪ್ರಶ್ನೆ ಕೇಳಲಾಯಿತು. ಪೂರಕ ಉತ್ತರ ನೀಡಿದ್ದಕ್ಕಾಗಿ ಮತ್ತೆ 4 ಸುತ್ತು ಪ್ರಶ್ನೆ ಕೇಳಲಾಯಿತು. ಅದರಲ್ಲೂ ಸಹ ಇವರು ಸಫ‌ಲರಾದರು.

ನಂತರ ಒಂದು ವಾರ ಕೊಲ್ಹಾಪುರದಲ್ಲಿ ನಡೆಯವ ಆಡಿಷನ್‌ ಚಿತ್ರೀಕರಣಕ್ಕೆ ಕರೆ ಬಂತು. ಸುಮಾರು 150 ಸ್ಪರ್ಧಿಗಳು ಪಾಲ್ಗೊಂಡ ಈ ಆಡಿಷನ್‌ನಲ್ಲಿ ಪ್ರತ್ಯೇಕವಾಗಿ ವೀಕ್ಷಿಸಿದ ಮುಖ್ಯ ತೀರ್ಪುಗಾರರು 5ನೇ ಅದೃಷ್ಟವಂತ ಸ್ಪರ್ಧಿಯಾಗಿ ವಿಕ್ರಂರನ್ನು ಮುಂಬೈನಲ್ಲಿ ನಡೆಯುವ ಹಾಟ್‌ಸೀಟ್‌ ಚಿತ್ರೀಕರಣಕ್ಕೆ ಆಹ್ವಾನಿಸಿದ್ದರು. ಇದೀಗ ಅಮಿತಾಭ್‌ ಬಚ್ಚನ್‌ ಅವರಿಂದ 50 ಲಕ್ಷ ರುಪಾಯಿ ಚೆಕ್ ಸ್ವೀಕರಿಸಿ ಬೀಗುತ್ತಿದ್ದಾರೆ. ಆದರೆ ...

<ul id="pagination-digg"><li class="next"><a href="/tv/kbc-vikram-fails-to-answer-simple-question-aid0135.html">Next »</a></li></ul>
English summary
In Amitabh Bachchan hosted Sony TV Quiz programme Kaun Banega Crorepati-5, Vikram Bhadravati Laxmikant from Karnataka has won 50 lakh prize money. Congrats to Vikram Bhadravati.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada