»   » ಬಿಗ್ ಬಾಸ್‌ಗೆ ಮಾದಕ ತಾರೆ ಕಿಮ್ ಕರ್ದಶಿಯನ್

ಬಿಗ್ ಬಾಸ್‌ಗೆ ಮಾದಕ ತಾರೆ ಕಿಮ್ ಕರ್ದಶಿಯನ್

Posted By:
Subscribe to Filmibeat Kannada
ಸಾಕಷ್ಟು ಸಲ ವಿವಾದಕ್ಕೆ, ಚರ್ಚೆಗೆ ಕಾರಣವಾಗಿದ್ದ 'ಬಿಗ್ ಬಾಸ್' ರಿಯಾಲಿಟಿ ಶೋ ಸೀಸನ್‌ನಿಂದ ಸೀಸನ್‌ಗೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಸಿನಿಮಾ ತಾರೆಗಳನ್ನು, ಹಾಟ್ ಬೆಡಗಿಯರನ್ನು ಕರೆತರುವಲ್ಲಿ ಶೋನ ನಿರ್ವಾಹಕರು ಉಳಿದೆಲ್ಲಾ ರಿಯಾಲಿಟಿ ಶೋಗಳಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎಂದೇ ಹೇಳಬೇಕು.

'ಬಿಗ್ ಬಾಸ್' ಸೀಸನ್ 4ರಲ್ಲಿ ಪಮೇಲಾ ಆಂಡರ್‌ಸನ್‌ರನ್ನು ಕರೆಸಿದ್ದರು. ಸೀಸನ್ 5ಕ್ಕೆ ಬಂದರು ನೋಡು ವಯಸ್ಕರ ಚಿತ್ರಗಳ ತಾರೆ ಸನ್ನಿ ಲಿಯೋನ್. ಈಗ ಮಾದಕ ಪೃಷ್ಠಗಳಿಗೆ ಹೆಸರಾಗಿರುವ ಹಾಲಿವುಡ್‌ನ ಜನಪ್ರಿಯ ತಾರೆ ಕಿಮ್ ಕರ್ದಶಿಯನ್‌ರನ್ನು ಸೀಸನ್ 6ಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಕಿಮ್ ಕರ್ದಶಿಯನ್ ಎಂಟ್ರಿ ಮೂಲಕ ಈ ಬಾರಿಯ ಬಿಗ್ ಬಾಸ್ ಮನೆ ಮತ್ತಷ್ಟು ಕಾವೇರುವುದು ಗ್ಯಾರಂಟಿ. ಕಿಮ್ ಕರ್ದಶಿಯನ್ ಕಿರುತೆರೆಗೆ ಲಗ್ಗೆ ಇಡುತ್ತಿರುವುದು ಇದೇ ಮೊದಲಲ್ಲ. ಈಗಾಗಲೆ ಆಕೆ ಕಿರುತೆರೆಯ 'Keeping Up With The Kardashians' ಎಂಬ ಸೀರೀಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಶೋನಲ್ಲಿ ಭಾಗವಹಿಸುವಷ್ಟು ದಿನಗಳ ಕಾಲ ಕಿಮ್‌ಗೆ ಭಾರತೀಯ ಆಹಾರ ಬಿಲ್ ಕುಲ್ ಬೇಡ ಎಂದಿದ್ದಾರೆ. ಆಕೆಗೆ ಭಾರತೀಯ ಆಹಾರ ಎಂದರೆ ಆಕೆಗೆ ಇಷ್ಟವಿಲ್ಲವಂತೆ. ಭಾರತೀಯ ಆಹಾರ ಎಂದರೆ ಆಕೆಗೆ ಅಸಹ್ಯ ಹುಟ್ಟಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ.

ಆಹಾರ ಪೊಟ್ಟಣಗಳನ್ನು ತೆಗೆದುಕೊಂಡು ಬಂದಿರುವ ಈಕೆ ಫ್ರಿಜ್‌ನಲ್ಲಿ ಇಟ್ಟುಕೊಂಡು ತಿನ್ನುತ್ತಾರಂತೆ. ಈ ಶೋಗಾಗಿ ಆಕೆ ಪಡೆದಿರುವ ಸಂಭಾವನೆ ರು.4.5 ಕೋಟಿ. ಈ ಬಾರಿಯ ಶೋ ಸಂಪೂರ್ಣ ಹಿಂದಿಯಲ್ಲಿರುತ್ತದೆ ಎನ್ನಲಾಗಿದೆ. ಹಿಂದಿ ಭಾಷೆ ಬರದ ಕಿಮ್ ಶೋನಲ್ಲಿ ಕಮಕ್ ಕಿಮಕ್ ಎನ್ನದೆ ಇರುತ್ತಾರೋ ಏನೋ?

ಈ ಹಿಂದೆ ವಿವಾದಿತ ಸ್ವಾಮೀಜಿ ಎಂದೇ ಖ್ಯಾತರಾಗಿರುವ ಸ್ವಾಮಿ ಅಗ್ನಿವೇಷ್ (72) ಅವರು 'ಬಿಗ್ ಬಾಸ್ 5'ಕ್ಕೆ ಪಾದಾರ್ಪಣೆ ಮಾಡಿದ್ದರು. ಅವರ ಪಾದಸ್ಪರ್ಶದಿಂದ ರಿಯಾಲಿಟೋ ಶೋ ಮತ್ತಷ್ಟು ರಂಗೇರಿತ್ತು. ಕಿರುತೆರೆ ನಟಿ ಜೂಹಿ ಪರ್ಮಾರ್ ಬಿಗ್ ಬಾಸ್ 5 ರ ವಿಜೇತೆಯಾಗಿ ಆಯ್ಕೆಯಾಗಿದ್ದರು.

ವಿವಾದಿತ ರಿಯಾಲಿಟಿ ಶೋನ ಅಂತಿಮ ಹಂತದಲ್ಲಿ ಜೂಹಿಗೆ ಸ್ಕೈ ಅಲಿಯಾಸ್ ಆಕಾಶ್ ದೀಪ್ ಸೈಗಲ್, ಅಮರ್ ಉಪಾಧ್ಯಾಯ್, ಸಿದ್ದಾರ್ಥ್ ಭಾರದ್ವಾಜ್, ಮೆಹೆಕ್ ಚಾಹಾಲ್ ತೀವ್ರ ಸ್ಪರ್ಧೆ ಒಡ್ಡಿದ್ದರು.ಅಂತಿಮ ಹಣಾಹಣಿಯಲ್ಲಿ ಗೆದ್ದ ಜೂಹಿ ಕೈಗೆ ನಿರೂಪಕ ಸಲ್ಮಾನ್ ಖಾನ್ ರು.1 ಕೋಟಿ ನೀಡಿ ಶುಭ ಹಾರೈಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಏಜೆನ್ಸೀಸ್)

English summary
Actress Kim Kardashian to joining Bigg Boss 6. And when it comes to her food, it can’t be Indian, for the star finds Indian food ’disgusting’. And she has even said that she is a cleanliness freak and eats only from freezer bags. Kim’s price is said to be Rs 4.5 crore.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada