»   » ಶಿವಣ್ಣನ 'ನಂ 1 ಯಾರಿ' ಕಾರ್ಯಕ್ರಮಕ್ಕೆ ಬಂದ ತಮಿಳು ಸ್ಟಾರ್ !

ಶಿವಣ್ಣನ 'ನಂ 1 ಯಾರಿ' ಕಾರ್ಯಕ್ರಮಕ್ಕೆ ಬಂದ ತಮಿಳು ಸ್ಟಾರ್ !

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಒಂದು ಕಡೆ ಸಿನಿಮಾದ ಮೂಲಕ ರಂಜಿಸುತ್ತಿದ್ದಾರೆ. ಇತ್ತ ಕಿರುತೆರೆಯಲ್ಲಿಯೂ ಅವರು 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಮಾಡುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಈ ಕಾರ್ಯಕ್ರಮ ಈಗಾಗಲೇ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದೆ. ಸಿಕ್ಕಾಪಟ್ಟೆ ಮನರಂಜನೆ ಇರುವ ಈ ಶೋ ಎಲ್ಲರಿಗೂ ಇಷ್ಟ ಆಗುವಂತಿದೆ. ವೀಕೆಂಡ್ ನಲ್ಲಿ ಪ್ರಸಾರ ಆಗುವ ಬೆಸ್ಟ್ ಶೋ ಗಳಲ್ಲಿ ಇದು ಕೂಡ ಒಂದಾಗಿದೆ.

ಸಾಮಾನ್ಯನಾಗಿ ಪ್ರತಿ ವಾರ ಕೂಡ ಶಿವಣ್ಣನ ಯಾರಿ ಮನೆಗೆ ಒಬ್ಬರು ಅತಿಥಿ ಬರುತ್ತಾರೆ. ಕನ್ನಡ ನಟರಾದ ಉಪೇಂದ್ರ, ಶರಣ್, ಧನಂಜಯ್, ವಸಿಷ್ಟ, ಈಗಾಗಲೇ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಇನ್ನು ನಟ ಸುದೀಪ್ ಮತ್ತು ರಮೇಶ್ ಅರವಿಂದ್ ಅವರ ಸಂಚಿಕೆಯ ಚಿತ್ರೀಕರಣ ಈಗಾಗಲೇ ನಡೆದಿದೆ. ಇವುಗಳ ನಡುವೆ ಈಗ ತಮಿಳಿನ ಸ್ಟಾರ್ ನಟರೊಬ್ಬರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

'ನಂ 1 ಯಾರಿ' ಶೋನಲ್ಲಿ ಸುದೀಪ್ ಜೊತೆ ಆಗಮಿಸಿರುವ ಸ್ನೇಹಿತ ಯಾರು.?

ಇದುವರೆಗೆ ಕನ್ನಡದ ನಟರು ಮಾತ್ರ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಈಗ ಮೊದಲ ಬಾರಿಗೆ ಕಾಲಿವುಡ್ ನಟ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಂದಹಾಗೆ, ಆ ನಟ ಯಾರು ಎನ್ನುವ ಕುತೂಹಲ ಇದ್ದರೆ ಹಾಗೆ ಮುಂದೆ ಓದಿ...

ಆರ್ಯ

ತಮಿಳಿನಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿರುವ 'ರಾಜ ರಾಣಿ' ಚಿತ್ರದ ಖ್ಯಾತಿಯ ನಟ ಆರ್ಯ ಈ ಮೊದಲ ಬಾರಿಗೆ ಕನ್ನಡ ಕಿರುತೆರೆಯ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಶಿವರಾಜ್ ಕುಮಾರ್ ಮುಂದೆ ಕುಳಿತು ಅವರು ಕೇಳುವ ತಮಾಷೆ ಪ್ರಶ್ನೆಗಳಿಗೆ ಆರ್ಯ ಉತ್ತರಿಸಲಿದ್ದಾರೆ.

'ರಾಜರಥ' ತಂಡ ಹಾಜರಿ

'ರಾಜರಥ' ಚಿತ್ರ ಕಳೆದ ಶುಕ್ರವಾರ ರಿಲೀಸ್ ಆಗಿತ್ತು. ಈ ಹಿನ್ನಲೆಯಲ್ಲಿ 'ರಾಜರಥ' ಚಿತ್ರತಂಡ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಬೇಟಿ ನೀಡಿತ್ತು. ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ, ನಾಯಕ ನಿರೂಪ್ ಭಂಡಾರಿ, ನಟಿ ಅವಾಂತಿಕ ಶೆಟ್ಟಿ ಇವರ ಜೊತೆಗೆ ಆರ್ಯ ಕಾರ್ಯಕ್ರಮದ ವಿಶೇಷ ಅತಿಥಿ ಆಗಿದ್ದಾರೆ.

ನಂಬರ್ 1 ಯಾರಿ ವಿತ್ ಶಿವಣ್ಣ ಶೋ ಗೆ ಬಂದ ಸುದೀಪ್

ಕನ್ನಡಕ್ಕೆ ಎಂಟ್ರಿ

ಕಾಲಿವುಡ್ ಸಿನಿಮಾ ಮೂಲಕ ಸೌತ್ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಆರ್ಯ ಈಗ ಕನ್ನಡಕ್ಕೆ ಕಾಲಿಟ್ಟಿದ್ದಾರೆ. 'ರಾಜರಥ' ಸಿನಿಮಾ ಅವರ ಮೊದಲ ಕನ್ನಡ ಸಿನಿಮಾವಾಗಿದೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ ಅವರ ಅಣ್ಣನ ಪಾತ್ರದಲ್ಲಿ ಆರ್ಯ ಅಬ್ಬರಿಸಿದ್ದಾರೆ.

ಈ ಭಾನುವಾರ ಪ್ರಸಾರ

ಆರ್ಯ ಅವರ ಈ ವಿಶೇಷ ಸಂಚಿಕೆ ಇದೇ ಭಾನುವಾರ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಈಗಾಗಲೇ ಈ ಸಂಚಿಕೆಯ ಪ್ರೊಮೋ ಹೊರಬಂದಿದೆ. ಕಾರ್ಯಕ್ರಮದ ನಡುವೆ ಶಿವಣ್ಣ ಇಡೀ ಟೀಂ ಜೊತೆಗೆ ಸೇರಿ ಡ್ಯಾನ್ಸ್ ಮಾಡಿದ್ದಾರೆ.

'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಆದ ರಮೇಶ್

ಸುದೀಪ್ ಸಂಚಿಕೆ

ನಟ ಸುದೀಪ್ ಸಹ 'ನಂ 1 ಯಾರಿ ವಿತ್ ಶಿವಣ್ಣ' ವೇದಿಕೆ ಏರಿದ್ದಾರೆ. ಸುದೀಪ್ ಸಂಚಿಕೆ ಈಗಾಗಲೇ ಚಿತ್ರೀಕರಣವಾಗಿದೆ. ಸುದೀಪ್ ಜೊತೆಗೆ ಯಾರಿ ಆಗಿ ನಿರ್ದೇಶಕ ಪ್ರೇಮ್ ಸಾಥ್ ನೀಡಿದ್ದಾರೆ. ಮುಂದಿನ ಭಾನುವಾರ ಈ ಸಂಚಿಕೆ ಪ್ರಸಾರ ಆಗುವ ಸಾಧ್ಯತೆ ಇದೆ.

English summary
Kollywood actor Arya in Star Suvarna's new show 'No1 yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X