Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೊಂದು ಮಗುವಿದೆ ಎನ್ನುವ ಸತ್ಯ ಮುದ್ದು ಲಕ್ಷ್ಮಿಗೆ ಗೊತ್ತಾಗುತ್ತಾ?
ಎರಡು ವರ್ಷಗಲ ಹಿಂದೆ ಅಂದ್ರೆ 2017 ಜನವರಿ 22 ರಂದು ಕನ್ನಡ ಕಿರುತೆರೆ ವೀಕ್ಷಕರಿಗೆ ಮುದ್ದು ಮನಸಿನ ಕೃಷ್ಣ ಸುಂದರಿಯನ್ನು ಪರಿಚಯಿಸಿತ್ತು ಸ್ಟಾರ್ ಸುವರ್ಣ ವಾಹಿನಿ. ಕಪ್ಪು ಬಣ್ಣದವಳೆಂಬ ಕಾರಣಕ್ಕೆ ಕೀಳರಿಮೆಗೆ ತಳ್ಳಿದ ಸಮಾಜವನ್ನು ಧೈರ್ಯದಿಂದ ಎದುರಿಸಿ, ಅಪರಂಜಿಯಂತಹ ವ್ಯಕ್ತಿತ್ವದ ಮೂಲಕ ಮನೆಮಾತದವಳು ಮುದ್ದುಲಕ್ಷ್ಮಿ.
ಅಲ್ಲಿಂದ ಇಲ್ಲಿಯವರೆಗಿನ ಮುದ್ದುಲಕ್ಷ್ಮಿಯ ಪಯಣ ಭಾವುಕ, ಸ್ಫೂ ರ್ತಿ ಮತ್ತು ರೋಚಕ. ಪ್ರಪಂಚವೇ ಎದುರಾದರು ನಾನು ನಿನ್ನ ಜೊತೆಯಿದ್ದೀನಿ ಎಂದು ಲಕ್ಷ್ಮೀಯನ್ನು ಪ್ರೀತಿಸಿ ಮದುವೆಯಾದ ಡಾ.ಧೃವಂತ್ ಈಗ ಅವಳನ್ನೆ ಅನುಮಾನಿಸಿ ಮನೆಯಿಂದ ಹೊರದೂಡಿದ್ದಾನೆ.
'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯ ನಟಿ ಐಶ್ವರ್ಯಾಗೆ ಕೂಡಿ ಬಂತು ಕಂಕಣ ಭಾಗ್ಯ
ಆದರೆ ಇಷ್ಟು ದಿನ ಯಾರು ಎಷ್ಟೇ ಹೇಳಿದರು ಆಕೆಯನ್ನು ಸೊಸೆಯಾಗಿ ಸ್ವೀಕರಿಸಿದ ಅತ್ತೆ ಸೌಂದರ್ಯ ಈಗ ಬದಲಾಗಿದ್ದಾರೆ. ಮುದ್ದುಲಕ್ಷ್ಮಿ ಈಗ ಎರಡು ಮುದ್ದಾದ ಮಕ್ಕಳ ತಾಯಿ. ಆದರೆ ಲಕ್ಷ್ಮಿಗೆ ತಾನು ಅವಳಿ ಮಕಳಿಗೆ ಜನ್ಮ ನೀಡಿದ್ದೇನೆ ಎಂಬ ಸಂಗತಿಯೆ ಗೊತ್ತಿಲ್ಲ. ಮುಂದೆ ಓದಿ..

ಮಗುವನ್ನು ಕದ್ದು ಸಾಕುತ್ತಿದ್ದಾರೆ ಸೌಂದರ್ಯ
ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಅವಳ ಅರಿವಿಗೆ ಬಾರದಂತೆ ಆಸ್ಪತ್ರೆಯಿಂದನೆ ತೆಗೆದುಕೊಂಡು ಹೋಗಿ ಅತ್ತೆ ಸೌಂದರ್ಯ ಅಕ್ಕರೆಯಿಂದ ಪೋಷಿಸುತ್ತಿದ್ದಾರೆ. ಕಪ್ಪು ಬಣ್ಣದವಳು ಎಂಬ ಕಾರಣಕ್ಕೆ ಮುದ್ದುಲಕ್ಷ್ಮಿಯನ್ನು ತಿರಸ್ಕರಿಸಿದ್ದ ಅತ್ತೆ ಸೌಂದರ್ಯ ಈಗ, ಪ್ರಾಯಶ್ಟಿತವಾಗಿ ಲಕ್ಷ್ಮಿಯ ಕಪ್ಪಾಗಿರುವ ಮಗುವನ್ನು ತನ್ನ ಮನೆಯಲ್ಲಿಯೆ ಪ್ರೀತಿಯಿಂದ ಬೆಳೆಸುವ ನಿರ್ಣಯ ತೆಗೆದುಕೊಂಡಿದ್ದಾರೆ.
ಮುದ್ದುಲಕ್ಷ್ಮಿಗೆ ಸಿಕ್ತು ಮೊದಲ ಗೆಲುವು

ಲಕ್ಷ್ಮಿಗೆ ಇನ್ನೊಂದು ಮಗುವಿರುವ ಸತ್ಯವೆ ತಿಳಿದಿಲ್ಲ
ಲಕ್ಷ್ಮಿಗೂ ಮತ್ತೊಂದು ಮಗುವಿರುವ ಸತ್ಯಾ ಗೊತ್ತಿಲ್ಲ. ಮತ್ತೊಂದೆಡೆ ಧೃವಂತ್ ತಾಯಿ ತಂದು ಸಾಕುತ್ತಿರುವ ಮಗು ಅನಾಥಮಗು ಎಂದು ತಿಳಿದು ಕೊಂಡಿದ್ದಾನೆ. ಅವನ ಮಗು ಎನ್ನುವ ಸತ್ಯ ಧೃವಂತ್ ಗೆ ಗೊತ್ತಿಲ್ಲ. ತಾನು ಹೆತ್ತಿರುವ ಮಗು ಧೃವಂತ್ ದೆ ಎಂಬ ಸತ್ಯವನ್ನು ಗಂಡನಿಗೆ ಮನವರಿಗೆ ಮಾಡಿಕೊಡುವ ಸಂಕಟದ ಸ್ಥಿತಿಯಲ್ಲಿದ್ದಾಳೆ ಮುದ್ದುಲಕ್ಷ್ಮಿ.

ಗೆಲುವಿನ ಹಿಂದೆಯೆ ಮತ್ತೊಂದು ಸವಾಲು
ಆದರೆ ಮುದ್ದು ಲಕ್ಷ್ಮಿಗೆ ಈಗ ಗೆಲುವಿನ ಹಿಂದೆಯೇ ಮತ್ತೊಂದು ಸವಾಲು ಎದುರಾಗಿದೆ. ಹೆಣ್ಣಿನ ಆತ್ಮಾಭಿಮಾನ ಮತ್ತು ಅಸ್ತಿತ್ವವನ್ನೆ ಪ್ರಶ್ನಿಸಿದ್ದಾನೆ ಡಾ.ಧೃವಂತ್. ಲಕ್ಷ್ಮಿ ಜನ್ಮ ನೀಡಿರುವುದು ತನ್ನದೆ ಕೂಸು ಎಂಬುದುನ್ನು ಒಪ್ಪಿಕೊಳ್ಳದೇ ಮನಸ್ಸಿನಲ್ಲಿ ಅನುಮಾನದ ಹುತ್ತ ಬೆಳೆಸಿಕೊಂಡಿದ್ದಾನೆ.

ಕುಟುಂಬದ ಪ್ರೀತಿ ಸಿಗುತ್ತಾ ಲಕ್ಷ್ಮಿಗೆ?
ಲಕ್ಷ್ಮಿ ತನ್ನ ಕುಟಂಬದ ಜೊತೆ ಮತ್ತೆ ಒಂದಾಗುತ್ತಾಳಾ? ತನ್ನ ಮತ್ತೊಂದು ಮಗುವಿನ ಸತ್ಯ ಅವಳಿಗೆ ತಿಳಿಯುತ್ತಾ? ಏನು ಅರಿಯದ ಲಕ್ಷ್ಮಿಯ ಪುಟಾಣಿ ಕಂದಮ್ಮಗಳಿಗೆ ತಂದೆ-ತಾಯಿ ಇಬ್ಬರ ಪ್ರಿತಿಯೂ ಸಿಗುತ್ತಾ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಇದೆಲ್ಲ ಗೊತ್ತಾಗಬೇಕಾದೆ ಇನ್ನು ಸ್ವಲ್ಪ ದಿನಗಳು ಕಾಯಲೆ ಬೇಕು.