For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಸುದೀಪ್ ಮುಂದೆ ಆಗಬಾರದೊಂದು ಘಟನೆ ಆಗೋಯ್ತು.!

  By Bharath Kumar
  |
  'ಬಿಗ್ ಬಾಸ್' ಸುದೀಪ್ ಮುಂದೆ ಆಗಬಾರದೊಂದು ಘಟನೆ ಆಗೋಯ್ತು.! | Filmibeat Kannada

  ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಚಂದನ್ ಶೆಟ್ಟಿ ಗೆದ್ದ ನಂತರ, ಬಿಗ್ ಬಾಸ್ ವಿನ್ನರ್ ಬಗ್ಗೆ ಚರ್ಚೆಯಾಗುವುದಕ್ಕಿಂತ ಬೇರೆಯದ್ದೇ ವಿಷ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಡಿಬೇಟ್ ಆಗ್ತಿದೆ. ಬಿಗ್ ಬಾಸ್ ಫಿನಾಲೆಯಲ್ಲಿ ನಡೆದ ಘಟನೆಯೊಂದು ಈಗ ಎಲ್ಲೆಡೆ ಟಾಕ್ ಆಗಿದೆ.

  ಹೌದು, ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಆಗಬಾರದೊಂದು ಘಟನೆ ಆಗೋಗಿದೆ. ಯಾರೂ ಊಹೆ ಮಾಡಿರದ ಕ್ಷಣವೊಂದಕ್ಕೆ ಸುದೀಪ್ ಸಾಕ್ಷಿಯಾಗಿದ್ದಾರೆ. ಇದು ಗೊತ್ತಿದ್ದು ಆಯ್ತಾ? ಅಥವಾ ಗೊತ್ತಿಲ್ಲದೇ ಆಯ್ತಾ ನಮ್ಗಂತೂ ಗೊತ್ತಿಲ್ಲ. ಆದ್ರೆ, ಈ ಹಾಟ್ ಟಾಪಿಕ್ ಮಾತ್ರ ಈಗ ಸಿಕ್ಕಾಪಟ್ಟೆ ಚರ್ಚೆ ಯಾಗ್ತಿದೆ.

  ಯಾವುದು ರೀ ಅಂತಹ ವಿಷ್ಯ ಅಂತ ಯೋಚನೆ ಮಾಡ್ಬೇಡಿ. ನಾವು ಹೇಳ್ತಿರೋದು 'ಒಂದು ಮತ್ತಿನ ಕಥೆ'. ಆಪ್ತ ಸ್ನೇಹಿತ ಚಂದನ್ ಶೆಟ್ಟಿ ಮತ್ತು ದಿವಾಕರ್ ಅವರ ಮಧ್ಯೆ ನಡೆದ ಲಿಪ್ ಲಾಕ್ ಕಥೆ. ಅಷ್ಟಕ್ಕೂ ಈ ಲಿಪ್ ಲಾಕ್ ಆಗಿದ್ದೇಕೆ? ಏನಿದು ಲಿಪ್ ಲಾಕ್ ಕಥೆ ಅಂತ ಪೂರ್ತಿ ತಿಳಿಯಲು ಮುಂದೆ ಓದಿ......

  ಚಂದನ್ ವಿಟಿ ನೋಡಿ ದಿವಾಕರ್ ಮೆಚ್ಚುಗೆ

  ಚಂದನ್ ವಿಟಿ ನೋಡಿ ದಿವಾಕರ್ ಮೆಚ್ಚುಗೆ

  ಫೈನಲ್ ಸ್ಪರ್ಧಿ ಚಂದನ್ ಶೆಟ್ಟಿ ಅವರ ಜರ್ನಿ ವಿಡಿಯೋ ತೋರಿಸಿದ ನಂತರ ದಿವಾಕರ್, ಸ್ನೇಹಿತನ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಈ ಖುಷಿಯ ಪ್ರತಿರೂಪವಾಗಿ ಚಂದನ್ ಗೆ ಮುತ್ತಿಟ್ಟರು.

  ಅರ್ಧ ಕೋಟಿ ಬಹುಮಾನ ಹಣದಲ್ಲಿ ಚಂದನ್ ಶೆಟ್ಟಿ ಮತ್ತು ಫ್ಯಾಮಿಲಿ ಏನ್ ಮಾಡ್ತಾರೆ ಗೊತ್ತಾ.?

  ಲಿಪ್ ಟು ಲಿಪ್ ಕಿಸ್ ಆಗೋಯ್ತು.!

  ಲಿಪ್ ಟು ಲಿಪ್ ಕಿಸ್ ಆಗೋಯ್ತು.!

  ಕೆನ್ನೆಗೆ ಮುತ್ತಿಡಲು ಹೋದ ದಿವಾಕರ್, ಆಯಾತಪ್ಪಿ ಚಂದನ್ ತುಟಿಗೆ ಮುತ್ತು ಕೊಟ್ಟರು. ಇದೊಂದು ರೀತಿಯಲ್ಲಿ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿತು. ಸ್ವತಃ ದಿವಾಕರ್ ಹಾಗೂ ಚಂದನ್ ಶೆಟ್ಟಿಗೂ ಇದು ಅಚ್ಚರಿಯಾಯಿತು. ಲಿಪ್ ಲಾಕ್ ಮಾದರಿ ಕಿಸ್ ಆಯ್ತು.

  ಶಾಕ್ ಆದ ಚಂದನ್ ಶೆಟ್ಟಿ.!

  ಶಾಕ್ ಆದ ಚಂದನ್ ಶೆಟ್ಟಿ.!

  ಈ ಮುತ್ತಿನ ನಂತರ ಸುದೀಪ್ ಅವರು ಚಂದನ್ ಹಾಗೂ ದಿವಾಕರ್ ಗೆ ಕಾಲೆಳೆದರು. ಈ ಘಟನೆಯಿಂದ ಚಂದನ್ ಶೆಟ್ಟಿ ಹೊರಬರಲು ಕೆಲ ಸಮಯ ತೆಗೆದುಕೊಳ್ಳಬೇಕಾಯಿತು.

  'ಬಿಗ್ ಬಾಸ್' ಗೆದ್ದ ಅರ್ಹ ವ್ಯಕ್ತಿ ಚಂದನ್ ಶೆಟ್ಟಿ: ವೀಕ್ಷಕರಿಗೆ ಖುಷಿಯೋ ಖುಷಿ.!

  ದಿವಾಕರ್ ಗೆ ಚಂದನ್ ಕೊಟ್ಟ ಮುತ್ತು

  ದಿವಾಕರ್ ಗೆ ಚಂದನ್ ಕೊಟ್ಟ ಮುತ್ತು

  ಈ ಘಟನೆಯ ಬಳಿಕ ದಿವಾಕರ್ ಜರ್ನಿ ವಿಡಿಯೋ ತೋರಿಸಲಾಯಿತು. ಚಂದನ್ ಕೂಡ ಸ್ನೇಹಿತ ದಿವಾಕರ್ ಗೆ ಮುತ್ತು ನೀಡಿದರು. ಆದ್ರೆ, ಚಂದನ್ ಕೆನ್ನೆಯ ಮೇಲೆ ಚುಂಬಿಸಿದರು. ಈ ಮುತ್ತಿನ ವೇಳೆಯೂ ಹಳೆಯ ಮುತ್ತು ನೆನಪಾಗುತ್ತಿತ್ತು. ಒಂದಂತೂ ಸತ್ಯ, ಈ ಮುತ್ತು ಅಚಾನಕ್ ಆಗಿ ಆಗಿದ್ದು. ಹಾಸ್ಯಕ್ಕೆ ಕಾರಣವಾಯಿತು ಅಷ್ಟೇ.

  ವೀಕ್ಷಕರ ಆಸೆ ಈಡೇರಿತು: ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದುಬಿಟ್ಟರು.!

  English summary
  Bigg boss kannada 5 contestant Diwakar has kiss to his friend Chandan Shetty. now, this photo is viral on social networking site.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X