»   » 'ನಂದಿನಿ' ಧಾರಾವಾಹಿ ನೋಡಿ ಪ್ರಾಣ ಕಳೆದುಕೊಂಡ ಪುಟ್ಟ ಬಾಲಕಿ

'ನಂದಿನಿ' ಧಾರಾವಾಹಿ ನೋಡಿ ಪ್ರಾಣ ಕಳೆದುಕೊಂಡ ಪುಟ್ಟ ಬಾಲಕಿ

Posted By:
Subscribe to Filmibeat Kannada
'ನಂದಿನಿ' ಧಾರಾವಾಹಿ ನೋಡಿ ಪ್ರಾಣ ಕಳೆದುಕೊಂಡ ಪುಟ್ಟ ಬಾಲಕಿ | Filmibeat Kannada

ಸಾಕಷ್ಟು ಪ್ರಭಾವ ಬೀರುವಂತಹ ಮಾಧ್ಯಮಗಳ ಪೈಕಿ ದೃಶ್ಯ ಮಾಧ್ಯಮ ಪ್ರಮುಖವಾದವು. ಪ್ರೇಕ್ಷಕರ ಮೇಲೆ ದೃಶ್ಯ ಮಾಧ್ಯಮ ಅತ್ಯಂತ ಪರಿಣಾಮಕಾರಿ ಅನ್ನೋದು ಯಾವಾಗಲೂ ಕೇಳುತ್ತಲೇ ಇರುತ್ತೇವೆ. ಈಗ ಅದೇ ದೃಶ್ಯ ಮಾಧ್ಯಮದಿಂದ ಒಂದು ದುರ್ಘಟನೆ ಸಂಭವಿಸಿದೆ.

ಧಾರಾವಾಹಿ ನೋಡಿ ಪುಟ್ಟ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ದಾವಣಗೆರೆಯ ಹರಿಹರದಲ್ಲಿ ನಡೆದಿದೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುವ ನಿತ್ಯಾ ರಾಮ್ ಅಭಿನಯದ 'ನಂದಿನಿ' ಧಾರಾವಾಹಿಯಲ್ಲಿನ ದೃಶ್ಯವನ್ನ ಅನುಕರಣೆ ಮಾಡಲು ಹೋಗಿ ಪುಟ್ಟ ಬಾಲಕಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

 little girl committed suicide after seeing uday tv nandhini

ಹರಿಹರದ ಸೇಂಟ್ ಮೇರಿಸ್ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದ ಪ್ರಾರ್ಥನಾ ಸಾವಿಗೀಡಾಗಿರುವ ಬಾಲಕಿ. ನವೆಂಬರ್ 11 ರಂದು ಬಾಲಕಿ 'ನಂದಿನಿ' ಧಾರಾವಾಹಿಯಲ್ಲಿ ನಡೆದ ದೃಶ್ಯದಂತೆಯೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ತಕ್ಷಣ ಪೋಷಕರು ಪ್ರಾರ್ಥನಾಳನ್ನ ಆಸ್ಪತ್ರೆಗೆ ದಾಖಲು ಮಾಡಿದರು. ಚಿಕಿತ್ಸೆ ಫಲಕಾರಿಯಾಗದೆ ಮಗು ಇಂದು ಸಾವಿಗೀಡಾಗಿದೆ.

English summary
Little girl committed suicide after imitating, Udaya TV Nandhini serial scene. ಉದಯ ಟಿವಿಯ ನಂದಿನಿ ಧಾರಾವಾಹಿ ನೋಡಿ ಆತ್ಮಹತ್ಯೆ ಮಾಡಿಕೊಂಡ ಪುಟ್ಟ ಬಾಲಕಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada