»   » 'ಲವ್ಲಿಸ್ಟಾರ್' ಪ್ರೇಮ್ ಗೆ ಮಗ ಕೊಟ್ಟ ದೊಡ್ಡ ಸರ್ಪ್ರೈಸ್.!

'ಲವ್ಲಿಸ್ಟಾರ್' ಪ್ರೇಮ್ ಗೆ ಮಗ ಕೊಟ್ಟ ದೊಡ್ಡ ಸರ್ಪ್ರೈಸ್.!

Posted By:
Subscribe to Filmibeat Kannada

ಲವ್ಲಿಸ್ಟಾರ್ ಪ್ರೇಮ್ ಅವರಿಗೆ ಇಬ್ಬರು ಮಕ್ಕಳು. ಒಬ್ಬ ಹುಡುಗ ಮತ್ತು ಓರ್ವ ಹೆಣ್ಣು. ಈ ಇಬ್ಬರೂ ಪ್ರತಿಭಾನ್ವಿತರೇ. ಪ್ರೇಮ್ ಅವರ ಮಗ ಈಗಾಗಲೇ ಅಪ್ಪನ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ. ಅಪ್ಪನಂತೆ ಬಣ್ಣದ ಲೋಕಕ್ಕೆ ಜಿಗಿದಿದ್ದು, ಆಗಲೇ 'ರಾಮರಾಜ್ಯ' ಎಂಬ ಚಿತ್ರದಲ್ಲಿ ಮುಖ್ಯ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

ಇನ್ನು ಪ್ರೇಮ್ ಅವರ ಮಗಳು SSLC ಪರೀಕ್ಷೆಯಲ್ಲಿ 93% ಅಂಕ ತೆಗೆದುಕೊಂಡು ಅಪ್ಪನಿಗೆ ಕೀರ್ತಿ ಹೆಚ್ಚಿಸಿದರು. ಹೀಗಿರುವಾಗ, ಪ್ರೇಮ್ ಅವರ ಮಗ ಏಕಾಂತ್, ತಮ್ಮ ತಂದೆಗೆ ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ. ಈ ಸರ್ಪ್ರೈಸ್ ಗೆ ಕನ್ನಡದ ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಕ್ಷಿಯಾಗಿದ್ದು, ಮತ್ತೊಂದು ವಿಶೇಷ.

ಅಷ್ಟಕ್ಕೂ, ಪ್ರೇಮ್ ಅವರ ಮಗ ಅಪ್ಪನಿಗೆ ನೀಡಿದ ಸರ್ಪ್ರೈಸ್ ಏನು? ಪುನೀತ್ ಸಾಕ್ಷಿಯಾಗಿದ್ದು ಹೇಗೆ ಎಂದು ಇಲ್ಲಿ ಓದಿ......

ಅಪ್ಪನ ಎದುರು ಡ್ಯಾನ್ಸ್ ಮಾಡಿದ ಏಕಾಂತ್

'ಲವ್ಲಿಸ್ಟಾರ್' ಪ್ರೇಮ್ ತೀರ್ಪುಗಾರರಾಗಿರುವ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಕಾರ್ಯಕ್ರಮದ ಫಿನಾಲೆ ವೇದಿಕೆಯಲ್ಲಿ ಮಗ 'ಏಕಾಂತ್' ಜಬರ್ ದಸ್ತ್ ಆಗಿ ಡ್ಯಾನ್ಸ್ ಮಾಡಿದರು.

ಎರಡನೇ ಸಲ ಮದುವೆಯಾದ ಲವ್ಲಿ ಸ್ಟಾರ್ ಪ್ರೇಮ್

ಈ ವಿಷ್ಯ ಪ್ರೇಮ್ ಗೆ ಗೊತ್ತಿರಲಿಲ್ಲ

ಖುದ್ದು ತಮ್ಮ ಮಗ ಫಿನಾಲೆ ವೇದಿಕೆಯಲ್ಲಿ ಡ್ಯಾನ್ಸ್ ಮಾಡುವ ಕುರಿತು ಬಹುಶಃ ಪ್ರೇಮ್ ಅವರಿಗೆ ಗೊತ್ತಿರಲಿಲ್ಲ ಅನ್ಸುತ್ತೆ. ಮಗನ ಡ್ಯಾನ್ಸ್ ನೋಡಿ ಪ್ರೇಮ್ ಅವರು ಕೂಡ ಒಂದು ಕ್ಷಣ ಶಾಕ್ ಆದರು.

ಪವರ್ ಸ್ಟಾರ್ ಗೆ ಸರ್ಪ್ರೈಸ್ ಇದು

ಇನ್ನು ಪ್ರೇಮ್ ಅವರ ಮಗ, ಫಿನಾಲೆ ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿರುವುದು ಪುನೀತ್ ಅವರಿಗೂ ಬಿಗ್ ಸರ್ಪ್ರೈಸ್ ಆಗಿತ್ತು. ಇದನ್ನ ನೋಡಿ ಅಪ್ಪು ಕೂಡ ಫುಲ್ ಖುಷ್ ಆದರು. ಅಂದ್ಹಾಗೆ, ಪುನೀತ್ ರಾಜ್ ಕುಮಾರ್ ಫಿನಾಲೆಯ ಮುಖ್ಯ ಅತಿಥಿ.

ಅಪ್ಪು ಜೊತೆ ಏಕಾಂತ್ ಡ್ಯಾನ್ಸ್

ಇನ್ನು ಪ್ರೇಮ್ ಅವರ ಮಗ ಏಕಾಂತ್, ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಂತೆ. ಹೀಗಾಗಿ, ಅಪ್ಪು ಅವರ ಜೊತೆ ಡ್ಯಾನ್ಸ್ ಮಾಡುವ ಮನವಿ ಮಾಡಿ, ಅಪ್ಪು ಜೊತೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.

ಗ್ರ್ಯಾಂಡ್ ಫಿನಾಲೆಯಲ್ಲಿ ಮಸ್ತ್ ಎಂಟರ್ ಟೈನ್ ಮೆಂಟ್

ಈ ಭಾನುವಾರ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಫಿನಾಲೆ ಪ್ರಸಾರವಾಗಲಿದೆ. ಈ ವೇದಿಕೆಯಲ್ಲಿ ಅಪ್ಪು, ಪ್ರೇಮ್ ಮತ್ತು ಅವರ ಮಗ ಏಕಾಂತ್ ಅವರ ಜುಗಲ್ ಬಂದಿ ಒಟ್ಟಿಗೆ ನೋಡಬಹುದು.

ಪುನೀತ್ ರಾಜ್ ಕುಮಾರ್ ಜೊತೆ ಪ್ರೇಮ್ ಮಗನ ಡ್ಯಾನ್ಸ್ ವಿಡಿಯೋ ನೋಡಿ.

English summary
Lovely star Prem's son Ekanth Dances with Puneeth Rajkumar in Dance Dance Juniors finale stage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada