»   » 'ಮಜಾ ಭಾರತ'ದಲ್ಲಿ 'ಮಜಾ' ಹೇಗಿತ್ತು? ಮೊದಲ ದಿನದ ಹೈಲೈಟ್ಸ್ ಇಲ್ಲಿದೆ

'ಮಜಾ ಭಾರತ'ದಲ್ಲಿ 'ಮಜಾ' ಹೇಗಿತ್ತು? ಮೊದಲ ದಿನದ ಹೈಲೈಟ್ಸ್ ಇಲ್ಲಿದೆ

Posted By:
Subscribe to Filmibeat Kannada

'ಕಲರ್ಸ್ ಸೂಪರ್' ವಾಹಿನಿಯಲ್ಲಿ ಪ್ರಸಾರವಾಗುವ 'ಮಜಾ ಭಾರತ' ಕಾಮಿಡಿ ರಿಯಾಲಿಟಿ ಶೋ ನಿನ್ನೆ (ಫೆಬ್ರವರಿ 6) ರಂದು ಅದ್ಧೂರಿಯಾಗಿ ಶುರುವಾಗಿದೆ.

ಈ ಶೋನಲ್ಲಿ ಬಿಗ್ ಬಾಸ್ ಸ್ವರ್ಧಿಗಳೇ ನಿರೂಪಕರು, ಬಿಗ್ ಬಾಸ್ ಸ್ವರ್ಧಿಯೊಬ್ಬರೇ ತೀರ್ಪುಗಾರರು. ಇವರ ಜೊತೆಯಲ್ಲಿ ಸ್ಯಾಂಡಲ್ ವುಡ್ ಕಲಾ ಚತುರು ಎಸ್.ನಾರಾಯಣ್ ಸಾಥ್ ಕೊಡುತ್ತಿದ್ದಾರೆ.['ಬಿಗ್ ಬಾಸ್' ಸ್ವರ್ಧಿಗಳು, ಈಗ 'ಮಜಾ ಭಾರತ'ದ ಸಾರಥಿಗಳು!]

ಕಾರ್ಯಕ್ರಮದ ಹೆಸರಿನಲ್ಲೇ ಮಜಾ ಎಂದು ಇಟ್ಟುಕೊಂಡಿರುವ ಮಜಾ ಭಾರತದ ಮೊದಲ ದಿನ 'ಮಜಾ' ಇತ್ತಾ? ಏನೆಲ್ಲಾ ವಿಶೇಷತೆಗಳು ಮೊದಲ ದಿನ ಆಕರ್ಷಣೆಯಾಗಿತ್ತು? ಎಂಬುದರ ಮಾಹಿತಿ ಇಲ್ಲಿದೆ ನೋಡಿ....

ಅಕುಲ್ ಬಾಲಾಜಿ ಎಂಟ್ರಿ!

ಕಿರುತೆರೆಯ ಸ್ಟಾರ್ ನಿರೂಪಕ ಅಕುಲ್ ಬಾಲಾಜಿ, 'ಕೋಟಿಗೊಬ್ಬ-2' ಚಿತ್ರದ ಟೈಟಲ್ ಹಾಡಿಗೆ ಹೆಜ್ಜೆ ಹಾಕುತ್ತಾ ಮಸ್ತ್ ಎಂಟ್ರಿ ಕೊಟ್ಟರು.

ಸೈಲಾಂಟ್ ಆಗಿ ಬಂದ ನಿರಂಜನ್!

ಅಕುಲ್ ಬಾಲಾಜಿ ಎಂಟ್ರಿ ಕೊಡುತ್ತಿದ್ದ ಹಾಗೆ, ಕಾರ್ಯಕ್ರಮದ ನಿರೂಪಕ ಅಂತ ಆಶ್ಚರ್ಯವಾದವರು ಇದ್ದಾರೆ, ಆದ್ರೆ, 'ಮಜಾ ಭಾರತ'ದ ನಿರೂಪಕರಾಗಿರುವ ನಿರಂಜನ್ ದೇಶಪಾಂಡೆ ಸಖತ್ ಸೈಲಾಂಟ್ ಆಗಿ ಎಂಟ್ರಿ ಕೊಟ್ಟರು.

ಸ್ಮೈಲ್ ತಾರೆ ಶೀತಲ್ ಶೆಟ್ಟಿ ಎಂಟ್ರಿ

'ಚಕ್ರವ್ಯೂಹ' ಚಿತ್ರದ ಬ್ಯೂಟಿಫುಲ್ ಮೆಲೋಡಿ ಹಾಡಿಗೆ ಕುಣಿಯುತ್ತಾ ಕರಾವಳಿ ಚೆಲುವೆ ಶೀತಲ್ ಶೆಟ್ಟಿ ವೇದಿಕೆಗೆ ಬಂದ್ರು.['ಬಿಗ್ ಬಾಸ್' ಮುಗಿದ ಬಳಿಕ ಶೀತಲ್ ಶೆಟ್ಟಿ ಎಲ್ಲಿ? Exclusive ಮಾಹಿತಿ ಇಲ್ಲಿದೆ.!]

ಎಸ್.ನಾರಾಯಣ್ ಆಗಮನ!

'ಮಜಾಭಾರತ'ದ ತೀರ್ಪುಗಾರರಲ್ಲಿ ಒಬ್ಬರಾದ ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರು ಕಲರ್ ಫುಲ್ ವೇದಿಕೆಗೆ ಜಬರ್ದಸ್ತ್ ಆಗಿ ಕಾಲಿಟ್ಟರು.

ತೀರ್ಪುಗಾರರಾಗಿ ಶ್ರುತಿ

'ಮಜಾ ಭಾರತ'ದ ಮತ್ತೊಬ್ಬ ತೀರ್ಪುಗಾರರಾದ ನಟಿ ಶ್ರುತಿ ಅವರು ಕಿರುತೆರೆಗೆ ಲಗ್ಗೆಯಿಟ್ಟರು.

'ಬ್ಯೂಟಿಫುಲ್ ಮನಸ್ಸುಗಳು' ಅತಿಥಿ

'ಮಜಾ ಭಾರತ'ದ ಮೊದಲ ದಿನದ ಅತಿಥಿಗಳಾಗಿ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ನಾಯಕ ನಟ ನೀನಾಸಂ ಸತೀಶ್ ಹಾಗೂ ನಾಯಕಿ ನಟಿ ಶ್ರುತಿ ಹರಿಹರನ್ ಸ್ಪೆಷಲ್ ಎಂಟ್ರಿ ಆಯಿತು.

ಎರಡು ಕಾಮಿಡಿ ಸ್ಕ್ರಿಪ್ಟ್

'ಮಜಾ ಭಾರತ'ದ ಮೊದಲ ದಿನ ಎರಡು ಕಾಮಿಡಿ ಸ್ಕ್ರಿಪ್ಟ್ ಗಳನ್ನ ಸ್ವರ್ಧಿಗಳು ಅಭಿನಯಿಸಿದರು. ಇದು ಪಕ್ಕಾ ಕಾಮಿಡಿ ಕಾರ್ಯಕ್ರಮವಾಗಿದ್ದು, ಹಲವು ತಂಡಗಳು ಬಾಗಿಯಾಗಲಿವೆ.

'ಕಾಮಿಡಿ ಕಿಲಾಡಿ' ವರ್ಸಸ್ 'ಮಜಾ ಭಾರತ'

ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೂ ಹಾಗೂ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುವ ಮಜಾ ಭಾರತಕ್ಕೂ ಹಲವು ವಿಷ್ಯಗಳಲ್ಲಿ ಸಾಮ್ಯತೆ ಇದೆ. ಹೀಗಾಗಿ, ಕಿರುತೆರೆಯಲ್ಲಿ 'ಕಾಮಿಡಿ ಕಿಲಾಡಿ' ವರ್ಸಸ್ 'ಮಜಾ ಭಾರತ' ಎನ್ನಬಹುದು.

ವಾರದಲ್ಲಿ ಮೂರು ದಿನ 'ಮಜಾ ಭಾರತ'

ಸೋಮವಾರ, ಮಂಗಳವಾರ, ಬುಧವಾರ ಮೂರು ದಿನಗಳ ರಾತ್ರಿ 9 ಗಂಟೆಗೆ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತೆ.

English summary
Kannada Entertainment Channel Colors Kannada has Start A new reality show called 'Maja Bharath' On Yesterday (February 6th). here is the First Day highlights of Maja Bharath. check out in pics...

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X