Don't Miss!
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Marali Manasagide serial: ಬಿಡುವು ಸಿಕ್ರೆ ಸಾಕು ಈ ಧಾರಾವಾಹಿಯ ತಾರೆಯರು ಹೇಗೆಲ್ಲಾ ಟೈಮ್ ಪಾಸ್ ಮಾಡ್ತಾರೆ ನೋಡಿ
ಬೇಸಿಗೆ ಕಾಲ ಶುರುವಾಗಿದೆ. ನಾವೂ ನೀವೆಲ್ಲಾ ಹೊರ ಹೋದರೇನೆ ಎಷ್ಟು ಹೊತ್ತಿಗೆ ಮನೆ ತಲುಪುತ್ತಿವೋ ಎಂಬಷ್ಟು ಸುಸ್ತಾಗಿ ಬಿಡುತ್ತೇವೆ. ಅದರಲ್ಲೂ ಯಾವುದಾದರೂ ಸಮಾರಂಭಕ್ಕೆ ರೆಡಿಯಾದರಂತೂ ಮುಗಿದೇ ಹೋಯಿತು. ಈ ಮೇಕಪ್ ತೆಗೆದು, ನಾರ್ಮಲ್ ಡ್ರೆಸ್ ಹಾಕಿದ್ರೆ ಸಾಕು ಅನ್ನುವಂತೆ ಇರುತ್ತೆ. ಆದರೆ ಎಷ್ಟೇ ಕಷ್ಟವಾಗಲಿ, ಇರಿಟೇಟ್ ಆಗುತ್ತಿರಲಿ ಕಾಸ್ಟ್ಯೂಮ್ ಬದಲಾಯಿಸಲು ಸಾಧ್ಯವೇ ಇರಲ್ಲ. ಅಂತದ್ದೊಂದು ದೃಶ್ಯವನ್ನು ನಾವೂ ನಿಮಗೆ ತೋರಿಸುತ್ತೀವಿ.
ಧಾರಾವಾಹಿಗಳಲ್ಲಿ ನಟಿಸುವ ನಟ-ನಟಿಯರಿಗೆ ಇಂತಿಷ್ಟು ದಿನ ಶೂಟ್ ಇದ್ದರೆ ಮತ್ತಷ್ಟು ದಿನ ಶೂಟ್ ಇರುವುದಿಲ್ಲ. ಒಮ್ಮೆ ಶೂಟ್ ಮಾಡೋದಕ್ಕೆ ಶುರು ಮಾಡಿದ್ರೆ ಹೆಚ್ಚು ಎಪಿಸೋಡ್‌ಗಳನ್ನು ಮಾಡಿಟ್ಟುಕೊಳ್ಳುತ್ತಾರೆ. ಆಗ ಬಿಸಿಲಾದರೇನು? ಮಳೆಯಾದರೇನು? ಅಂತ ಇರುವ ಸಮಯಕ್ಕೆ ಕಾಯಲೇಬೇಕಾಗುತ್ತದೆ.
Gattimela
Serial:
ಸ್ವಂತ
ಅಮ್ಮನನ್ನು
ಪತ್ತೆ
ಹಚ್ಚಲು
ದೊಡ್ಡ
ಸಾಕ್ಷಿ
ಸಿಕ್ಕಿದೆ!

ಶೂಟಿಂಗ್ ವೇಳೆ ತಾರೆಯರು ಹೇಗಿರುತ್ತಾರೆ?
ಒಮ್ಮೆ ಸೀರಿಯಲ್ ಶೂಟಿಂಗ್ ಶುರು ಮಾಡಿದ್ರೆ, ನೂರೆಂಟು ಖರ್ಚುಗಳು ನಿರ್ಮಾಪಕ ತಲೆಯ ಮೇಲಿರುತ್ತೆ. ಹೀಗಾಗಿ ಒಂದು ದಿನದಲ್ಲಿ ಎಷ್ಟು ಎಪಿಸೋಡ್ ಗಳನ್ನು ಶೂಟ್ ಮಾಡೋದಕ್ಕೆ ಸಾಧ್ಯವೋ ಅಷ್ಟನ್ನು ಶೂಟ್ ಮಾಡಿರುತ್ತಾರೆ. ಮನೆ ಒಳಗೆ ನಡೆಯುವಂತಹ ಸ್ಟೋರಿ ಆದರೆ ನಟ-ನಟಿಯರಿಗೂ ಸಮಸ್ಯೆ ಆಗುವುದಿಲ್ಲ. ಆದರೆ ಕೆಲವೊಮ್ಮೆ ಹೊರಂಗಾಣದ ಶೂಟಿಂಗ್ ಇರುತ್ತೆ. ಈ ಬಿಸಿಲಲ್ಲಿ ಶಾಟ್ ಓಕೆ ಆಗುವವರೆಗೂ ನಿಲ್ಲಬೇಕು. ಇದು ಕೆಲವೊಮ್ಮೆ ತಾರೆಯರಿಗೆ ಸಿಕ್ಕಾಪಟ್ಟೆ ತ್ರಾಸು ಆಗದೆ ಇರುವುದಿಲ್ಲ. ಒಂದು ಅರ್ಧ ಗಂಟೆ ಸಮಯ ಸಿಕ್ಕರೆ ಸಾಕಪ್ಪ ಅಂತ ಕಾಯುವ ನಟ-ನಟಿಯರು ಏನು ಮಾಡ್ತಾರೆ ಅಂತ ನೋಡಿ.
James:
ಮದುದುಲಕ್ಷ್ಮೀಯ
ಮುದ್ದುಮಣಿ
ದೃಷ್ಟಿಗೆ
ಅಪ್ಪು
ಸಿನಿಮಾದಲ್ಲಿ
ಅವಕಾಶ
ಸಿಕ್ಕಿದ್ದು
ಇಂಟ್ರೆಸ್ಟಿಂಗ್

ಮೇಕಪ್ ರೂಮ್‌ನಲ್ಲೇ ಮಹಿಳಾ ಮಂಡಳಿ
ಧಾರಾವಾಹಿಯನ್ನು ಟಿವಿಯಲ್ಲಿ ನೋಡುವವರಿಗೆ ತೆರೆಹಿಂದಿನ ಕೆಲವೊಂದು ದೃಶ್ಯಗಳು ಗೊತ್ತಿರೋದಿಲ್ಲ. ಶೂಟಿಂಗ್ ಸ್ಪಾಟ್‌ನಲ್ಲಿ ಮಹಿಳೆಯರಿಗೆ ಒಂದು ಕೊಠಡಿ, ಪುರುಷರಿಗೆ ಒಂದು ಕೊಠಡಿ ಇರುತ್ತೆ. ಇದು ಸಹಜ ಕೂಡ. ಇದರಲ್ಲೇನು ಹೊಸತಿಲ್ಲ. ಹೀಗೆ ಮಹಿಳಾ ಮಣಿಯರೆಲ್ಲಾ ಒಟ್ಟಿಗೆ ಸೇರಿದಾಗ ಹರಟೆ, ಪಾತ್ರದ ಬಗ್ಗೆ ಸಾಕಷ್ಟು ಡಿಸ್ಕಷನ್ಸ್ ನಡೆಯುತ್ತಾ ಇರುತ್ತೆ. ಆ ಸಂಧರ್ಭದಲ್ಲಿ ಅವರ ಹರಟೆ, ಎಂಜಾಯ್ಮೆಂಟ್ ನೋಡುವುದೇ ಒಂದು ಖುಷಿ. ಅದೆಲ್ಲಾ ಹೇಗೆ ಸಿಗುತ್ತೆ ಹೇಳಿ. ನಾವೇನು ಶೂಟಿಂಗ್ ಸ್ಪಾಟ್‌ಗೆ ಹೋಗೋದಕ್ಕೆ ಆಗುತ್ತಾ? ಅದಕ್ಕಂತಲೇ ಸೋಶಿಯಲ್ ಮೀಡಿಯಾ ಇದೆಲ್ಲಾ. ತಾರೆಯರು ಹೇಗೆ ಟೈಮ್ ಪಾಸ್ ಮಾಡ್ತಾರೆ ಅನ್ನುವ ವಿಡಿಯೋ ಇಲ್ಲಿ ಸಿಕ್ಕಿಬಿಡುತ್ತೆ.

ಸೀರಿಯಲ್‌ನಲ್ಲಿ ಸಖತ್ ಟ್ವಿಸ್ಟ್
ಇತ್ತೀಚೆಗೆ ಸೀರಿಯಲ್ ಕಾನ್ಸೆಪ್ಟ್ ತುಂಬಾ ಬದಲಾಗಿದೆ. ರಿಚ್ ಎನಿಸುವ ದೃಶ್ಯ ವೈಭವಗಳು ಕಣ್ಣಿಗೆ ರಾರಾಜಿಸುತ್ತವೆ. ಎಂಗೆಜ್ಮೆಂಟ್, ಮದುವೆ ಸೇರಿದಂತೆ ಹಲವು ಕಾರ್ಯಕ್ರಮಗಳು ಅದ್ದೂರಿ ಸೆಟ್ ನಲ್ಲಿ ಜರುಗುತ್ತವೆ. ಮದುವೆ-ಶಾಸ್ತ್ರ-ಸಂಪ್ರದಾಯ ಅಂದರೆ ಕೇಳಬೇಕಾ..? ಜನಸಂಖ್ಯೆ ಕಡಿಮೆ ಏನು ಇರಲ್ಲ. ಅದ್ದೂರಿ ಮೇಕಪ್ ಜೊತೆಗೆ ಸುತ್ತುವರೆದ ಜನರ ನಡುವೆ ಟೇಕ್ ಗಳನ್ನು ತೆಗೆದುಕೊಳ್ಳುತ್ತಲೇ ಇರುತ್ತಾರೆ. ಫೈನಲ್ ಆಗೋ ತನಕ, ಡೈರೆಕ್ಟರ್‌ಗೆ ಇಷ್ಟವಾಗೋ ತನಕ ಏನೇ ಬಿಸಿಲಿರಲಿ ಕಾಂಪ್ರಮೈಸ್ ಆಗೋ ಮಾತೇ ಇಲ್ಲ.
Kamali
Serial:
ರಿಯಲ್
ಲೈಫ್ನಲ್ಲಿ
ಕಮಲಿ
ಸಖತ್
ಮಾಡರ್ನ್
ಹುಡುಗಿ!

ಗ್ಯಾಪ್‌ನಲ್ಲಿ ತಾರೆಯರ ನಿದ್ದೆ
ಟೇಕ್ ಎಲ್ಲಾ ಓಕೆ ಆದ ಮೇಲೆ ಊಟ ಮುಗಿದ ಕೂಡಲೇ ಗ್ಯಾಪ್‌ನಲ್ಲೊಂದು ಬ್ರೇಕ್ ಇರುತ್ತಲ್ಲ, ಇದೇ ತುಂಬಾ ಮುಖ್ಯವಾದ ಸಮಯ. ತುಂಬಾ ನೆಮ್ಮದಿಯ ಸಮಯವಾಗಿರುತ್ತೆ. ಮಂಚದ ಮೇಲೆ ಇದ್ದ ಮೇಕಪ್‌ನಲ್ಲೇ ಹಾಗೆ ಉರುಳಿಕೊಂಡರೆ ಸ್ವರ್ಗಕ್ಕೆ ಕಿಚ್ಚು ಹಂಚೆದ್ದ ಹಾಗೆ. ನೋಡಿ ತಾರೆಯರೆಲ್ಲಾ ಹಾಗೇ ನಿದ್ದೆಗೆ ಜಾರಿರುತ್ತಾರೆ. ಆ ವಿಡಿಯೋ ಬಗ್ಗೆ ಕಿರುತೆರೆ ಪ್ರಿಯರು ಫಿದಾ ಆಗಿದ್ದಾರೆ.