For Quick Alerts
  ALLOW NOTIFICATIONS  
  For Daily Alerts

  'ಸಲಾಂ ಸಿನಿಮಾ' ಎನ್ನುತ್ತಿದ್ದಾರೆ ಮಾಸ್ಟರ್ ಡ್ಯಾನ್ಸರ್ಸ್

  By Pavithra
  |

  ಕರ್ಲಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುವ ಮಾಸ್ಟರ್‌ ಡ್ಯಾನ್ಸರ್ ಕಾರ್ಯಕ್ರಮದಲ್ಲಿ ಮುಂದಿನವಾರ 'ಸಲಾಂ ಸಿನಿಮಾ' ಎನ್ನುವ ಥೀಮ್ ನಡೆಯುತ್ತಿದೆ. ಗುರುಶಿಷ್ಯರ ಜೋಡಿಗಳು ಹಳೆ ಹಾಡುಗಳಿಗೆ ವೇದಿಕೆ ಮೇಲೆ ಹೆಜ್ಜೆ ಹಾಕುವ ಮೂಲಕ ಕನ್ನಡ ಸಿನಿಮಾರಂಗವನ್ನು ಬೆಳೆಸಿದ ಹಿರಿಯ ಕಲಾವಿದರಿಗೆ ನೃತ್ಯದ ಮೂಲಕ ನಮನ ಸಲ್ಲಿಸಲಿದ್ದಾರೆ.

  ಚಿತ್ರರಂಗದಲ್ಲಿ ಹಿಟ್ ಜೋಡಿಗಳಾಗಿ ಗುರುತಿಸಿಕೊಂಡಿರುವ ಡಾ ರಾಜ್ ಕುಮಾರ್-ಮಂಜುಳ, ವಿಷ್ಣುವರ್ಧನ್-ದ್ವಾರಕೀಶ್, ಅನಂತ್ ನಾಗ್-ಲಕ್ಷ್ಮೀ, ಕೋಕಿಲಾ ಮೋಹನ್-ಹೇಮಾ ಚೌದರಿ, ಶಿವರಾಜ್ ಕುಮಾರ್-ಸುಧಾರಾಣಿ ಹೀಗೆ ಜನಪ್ರಿಯವಾಗಿರುವ ಜೋಡಿಗಳಿಗೆ ನೃತ್ಯ ಮಾಡುವ ಮೂಲಕ ಆ ಜೋಡಿಗಳನ್ನ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ತರಲಿದ್ದಾರೆ.

  ಚಂದನವನದ ದಿಗ್ಗಜರಾದ ಅಂಬರೀಶ್, ಲೋಕೇಶ್, ರವಿಚಂದ್ರನ್, ಗೀತೆಗಳಿಗೂ ಗುರು-ಶಿಷ್ಯರು ಡ್ಯಾನ್ಸ್ ಮಾಡಲಿದ್ದಾರೆ. ಮಾಸ್ಟರ್ ಡ್ಯಾನ್ಸರ್ ನಲ್ಲಿ ಫೇಮಸ್ ಜೋಡಿಗಳಲ್ಲಿ ಒಂದಾದ ದಾವಣೆಗೆರೆ ನವೀನ್ ಹಾಗೂ ರಾಹುಲ್ ಜೋಡಿ ತಮ್ಮ ನೇತ್ಯದ ಮೂಲಕ ಕರಾಟೆ ಕಿಂಗ್ ಶಂಕರ್ ನಾಗ್ ಅವರಿಗೆ ನಮನ ಸಲ್ಲಿಸಲಿದ್ದಾರೆ.

  ಇದರ ಜೊತೆಯಲ್ಲಿ ದಶಗಳ ಕಾಲ ನಮ್ಮೆಲ್ಲರನ್ನೂ ನಕ್ಕು ನಲಿಸಿದ ಹಾಸ್ಯಕಲಾವಿದರನ್ನೂ ಮಾಸ್ಟರ್ ಡ್ಯಾನ್ಸರ್ ಕಾರ್ಯಕ್ರಮದಲ್ಲಿ ನೆನಪಿಸಲಾಗುತ್ತಿದೆ. ಮಾರ್ಚ್ 26ರಿಂದ 28ರ ವರೆಗೂ ಸಲಾಂ ಸಿನಿಮಾ ಹೆಸರಿನಲ್ಲಿ ಈ ಸಂಭ್ರಮ ನಡೆಯಲಿದ್ದು ಅದ್ಧೂರಿ ಸೆಟ್ ಮತ್ತು ವಸ್ತ್ರ ವಿನ್ಯಾಸಗಳ ಮೂಲಕ ವೀಕ್ಷಕರನ್ನ ಹಿಂದಿನ ಕಾಲಕ್ಕೆ ಕರೆದೊಯ್ಯಲಿದ್ದಾರೆ.

  English summary
  Master Dancer is a fresh concept where the aptitude and skill of both the teacher and the student is put to test. Grooving to the theme of “Salaam Cinema”, the master dancer duos are all set to enthrall you to a well-choreographed chain of tributes to the who’s who of Kannada Cinema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X