»   » ಶಿವ-ಸತಿಯ ಪ್ರೇಮಕಥೆಗೆ ತಿರುವು ನೀಡಲಿರುವ ಸುರ-ಸುಂದರಿ

ಶಿವ-ಸತಿಯ ಪ್ರೇಮಕಥೆಗೆ ತಿರುವು ನೀಡಲಿರುವ ಸುರ-ಸುಂದರಿ

Posted By:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿಯ "ಹರ ಹರ ಮಹಾದೇವ" ಧಾರಾವಾಹಿ ಆರಂಭವಾದಗಿನಿಂದ ಕನ್ನಡ ವೀಕ್ಷಕರ ಮನಕ್ಕೆ ಹತ್ತಿರವಾಗಿದೆ. ಅವರವರ ಪಾತ್ರಕ್ಕೆ ತಕ್ಕಂತೆ ಕಲಾವಿದರು ಕೂಡ ನೈಜವಾಗಿ ಅಭಿನಯಿಸುತ್ತಿದ್ದಾರೆ.

ದಕ್ಷ ಪ್ರಜಾಪತಿಯ ಪಾತ್ರಧಾರಿ ಕೀರ್ತಿಭಾನು ಈಗಾಗಲೇ ವೀಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ಮೊದಲೇ ಹೇಳಿದಂತೆ ಈ ಧಾರಾವಾಹಿ ವಿಜೃಂಭಣೆಯಿಂದ ಕೂಡಿದ್ದು, ನೋಡುಗರ ಮನಸ್ಸಿಗೂ ಮುದ ನೀಡುತ್ತಿದೆ.['ಹರ ಹರ ಮಹಾದೇವ' ಪಾತ್ರಧಾರಿಗಳ ಪರಿಚಯ]

ಈ ಧಾರಾವಾಹಿಯಲ್ಲಿ ಅನೇಕ ಪಾತ್ರಗಳಿವೆ, ಅದಕ್ಕಾಗಿ ಸಾಕಷ್ಟು ಕಲಾವಿದರನ್ನು ಈ ಧಾರಾವಾಹಿ ಪರಿಚಯಿಸುತ್ತದೆ. 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಮುಂಬರುವ ಸಂಚಿಕೆಯಲ್ಲಿ ಹಲವು ರೋಚಕ ತಿರುವು ಬರಲಿದೆ.[ಯಾರೀ 'ಶಿವ'ನ ಪಾತ್ರಧಾರಿ ವಿನಯ್ ಗೌಡ.? ಅವರ ಹಿನ್ನಲೆ ಏನು.?]

ಶಿವ ಹಾಗು ಸತಿಯ ಜನುಮಾಂತರದ ನಂಟಿನ ಪ್ರೇಮಕತೆಯೇ ಈ ರೋಚಕ ತಿರುವಿಗೆ ಕಾರಣ. ಶಿವನ ಪ್ರೇಮ ಕತೆಯಲ್ಲಿ ಮುಖ್ಯ ತಿರುವನ್ನು ನೀಡಲು, 'ಮದನಿಕೆ' ಎಂಬ ಸುರ-ಸುಂದರಿ ಆಗಮನವಾಗಲಿದೆ. ಹಾಗಾದರೆ ಈ 'ಮದನಿಕೆ' ಯಾರು ಎಂಬುದನ್ನು ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ.....

ಪಂಚಭಾಷಾ ತಾರೆ

ಅಂದಹಾಗೆ 'ಮದನಿಕೆ' ಎಂಬ ಮುಖ್ಯ ಪಾತ್ರದಲ್ಲಿ ನಟಿಸುತ್ತಿರೋದು ಪಂಚಭಾಷಾ ತಾರೆ ಎಂದೆ ಖ್ಯಾತಿ ಗಳಿಸಿರು ನಟಿ 'ನೇಹಾ ಸಕ್ಸೇನಾ' ಅವರು.[ಜು.25ರಿಂದ ಸುವರ್ಣದಲ್ಲಿ ಮೊಳಗಲಿದೆ ಹರಹರ ಮಹಾದೇವ]

ಹಿಂದಿ ಕಿರುತೆರೆ ನಟಿ

ನಟಿ ನೇಹಾ ಸಕ್ಸೇನಾ ಅವರು ಈ ಮೊದಲು ಹಿಂದಿ ಸ್ಟಾರ್ ಪ್ಲಸ್‌ ನಲ್ಲಿ ಪ್ರಸಾರವಾಗುತ್ತಿದ್ದ 'ಸಜನ್ ಘರ್ ಜಾನ ಹೈ', ತೆರೆ ಲೀಯೆ', ಸೋನಿ ಟಿವಿಯ 'ಅಮಿತಾ ಕಾ ಅಮಿತ್' ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಸ್ಟಾರ್ ಪ್ಲಸ್ ಡ್ಯಾನ್ಸ್ ರಿಯಾಲಿಟಿ ಶೋ 'ನಚ್ ಬಲಿಯೇ'ಯಲ್ಲಿ ಕೂಡ ಸ್ಪರ್ಧಿಯಾಗಿದ್ದರು.

ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ

ನೇಹಾ ಸಕ್ಸೇನಾ ಅವರು ಬರೀ ಹಿಂದಿ ಸೀರಿಯಲ್ ಗಳಲ್ಲಿ ಮಾತ್ರವಲ್ಲದೇ, ಈಗಾಗಲೇ ಜೆಕೆ ಅಲಿಯಾಸ್ ಜಯ್ ಕಾರ್ತಿಕ್ ಅವರ ಜೊತೆ ಕನ್ನಡ ಚಿತ್ರ 'ಜಸ್ಟ್ ಲವ್' ನಲ್ಲಿ ನಾಯಕಿಯಾಗಿ, 'ಬೈಪಾಸ್' ಮತ್ತು 'ಗೇಮ್' ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

'ಮಹಾದೇವ' ರೋಚಕ ಸನ್ನಿವೇಶಗಳು

ದಕ್ಷನ ಆಮಂತ್ರಣಕ್ಕೆ ಒಪ್ಪಿ ಮಹಾಮಂಡಲ ಸಭೆಗೆ ಆಗಮಿಸುವ ಮಹಾದೇವ, ಮೊಟ್ಟ ಮೊದಲ ಬಾರಿಗೆ ಮಹಾದೇವ ಹಾಗು ದಕ್ಷ ಒಂದೆ ವೇದಿಕೆಯಲ್ಲಿ ಮುಖಾ-ಮುಖಿಯಾಗಲಿದ್ದಾರೆ. ದಕ್ಷನ ತಂತ್ರ, ಪ್ರತಿ ತಂತ್ರಗಳೇನು?, ಮಹಾದೇವ ಇದಕ್ಕೆಲ್ಲಾ ಹೇಗೆ ಉತ್ತರ ಕೊಡುತ್ತಾರೆ?, ಅನ್ನೋ ರೋಚಕ ಸನ್ನಿವೇಶಗಳು ಮುಂದಿನ ಸಂಚಿಕೆಯಲ್ಲಿ ಕಾದಿವೆ.

'ಮಹಾದೇವ'ನ ಹೊಸ ಅವತಾರ

ವಸಂತೋತ್ಸವಕ್ಕೆ ರಂಗೇರಿಸುವ ಚಂದ್ರ ಹಾಗು ರೋಹಿಣಿಯರ ನೃತ್ಯ ವೈಭವ ಮತ್ತು ವೃತ್ರಾಸುರ ರಾಕ್ಷಸನ ಆಗಮನ. ಸತಿಯನ್ನು ರಕ್ಷಿಸಲು 'ಮಹಾದೇವ'ನ ಹೊಸ ಅವತಾರ. 'ಹರ ಹರ ಮಹಾದೇವ'ದಲ್ಲಿ ಇದೇ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ.

English summary
Multilingual actress Neha Saxena 'Madanike' role played in 'Hara Hara Mahadeva' Serial. Actress Neha is a well-known face who is already seen in lead roles in kannada movies like 'Just Love', 'Game' and 'Bypass'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada